ಆರ್ಸೆನಲ್ F.C.
From Wikipedia, the free encyclopedia
ಆರ್ಸೆನಲ್ ಫುಟ್ಬಾಲ್ ಕ್ಲಬ್ (PLUS ಮಾರುಕಟ್ಟೆಗಳು: AFC)(ಹಲವು ಸಂದರ್ಭಗಳಲ್ಲಿ ಆರ್ಸೆನಲ್ ಅಥವಾ ದಿ ಆರ್ಸೆನಲ್ ಎಂದು ಸರಳವಾಗಿ ಅಥವಾ ದಿ ಗನ್ನರ್ಸ್ ಎಂಬ ಅಡ್ಡಹೆಸರಿನಿಂದ ಕರೆಯಲಾಗುತ್ತದೆ)ಉತ್ತರ ಲಂಡನ್ನ ಹೊಲೋವೇನಲ್ಲಿ ನೆಲೆಯಾಗಿರುವ ಇಂಗ್ಲಿಷ್ ವೃತ್ತಿಪರ ಫುಟ್ಬಾಲ್ ಕ್ಲಬ್. ಆರ್ಸೆನಲ್ ಪ್ರೀಮಿಯರ್ ಲೀಗ್ನಲ್ಲಿ ಆಡುತ್ತಿದ್ದು,ಹದಿಮೂರು ಫಸ್ಟ್ ಡಿವಿಷನ್ ಮತ್ತು ಪ್ರೀಮಿಯರ್ ಲೀಗ್ ಪ್ರಶಸ್ತಿಗಳನ್ನು ಮತ್ತು ಹತ್ತು FA ಕಪ್ಗಳನ್ನು ಜಯಿಸುವ ಮೂಲಕ ಇಂಗ್ಲೀಷ್ ಫುಟ್ಬಾಲ್ನಲ್ಲಿ ಅತ್ಯಂತ ಯಶಸ್ವಿ ಕ್ಲಬ್ಗಳಲ್ಲಿ ಒಂದೆನಿಸಿದೆ. ಇಂಗ್ಲಿಷ್ ಫುಟ್ಬಾಲ್ ಕ್ರೀಡೆಗಳಲ್ಲಿ ಸುದೀರ್ಘ, ನಿರಂತರ ಅವಧಿಗೆ ಉನ್ನತ ಮಟ್ಟದ ದಾಖಲೆಯನ್ನು ಹೊಂದಿದೆ ಮತ್ತು ಅಜೇಯರಾಗುಳಿದು ಕ್ರೀಡಾ ಋತುವೊಂದನ್ನು ಮುಗಿಸಿದ ಏಕೈಕ ಪ್ರೀಮಿಯರ್ ಲೀಗ್. ೧೮೮೬ರಲ್ಲಿ ಆರ್ಸೆನಲ್ ಸ್ಥಾಪನೆಯಾಯಿತು ಮತ್ತು ೧೮೯೩ರಲ್ಲಿ ಫುಟ್ಬಾಲ್ ಲೀಗ್ಗೆ ಸೇರಿಕೊಂಡ ಪ್ರಥಮ ದಕ್ಷಿಣ ಕ್ಲಬ್ ಎನಿಸಿತು. ಐದು ಲೀಗ್ ಚಾಂಪಿಯನ್ಷಿಪ್ ಪ್ರಶಸ್ತಿಗಳು ಮತ್ತು ಎರಡು FA ಕಪ್ಗಳೊಂದಿಗೆ ೧೯೩೦ರ ದಶಕದಲ್ಲಿ ತಮ್ಮ ಪ್ರಥಮ ಪ್ರಮುಖ ಟ್ರೋಫಿಗಳಲ್ಲಿ ಜಯಗಳಿಸಿದರು. ಯುದ್ಧಾನಂತರದ ಬಿಡುವಿನ ಅವಧಿ1970-71ರಲ್ಲಿ ಲೀಗ್ ಮತ್ತು FA ಕಪ್ ಡಬಲ್ನಲ್ಲಿ ಜಯಗಳಿಸಿದ ೨೦ನೇ ಶತಮಾನದ ಎರಡನೇ ಕ್ಲಬ್ ಇದಾಯಿತು. ಕಳೆದ ೨೦ ವರ್ಷಗಳಲ್ಲಿ ಅನೇಕ ಯಶಸ್ಸುಗಳ ಸರಣಿಯನ್ನೇ ಇದು ದಾಖಲಿಸಿತು. ಈ ಸಂದರ್ಭದಲ್ಲಿ ಆರ್ಸೆನಲ್ ಕಪ್ ಡಬಲ್, ಎರಡು ಲೀಗ್ ಮತ್ತು FA ಕಪ್ ಡಬಲ್ಗಳಲ್ಲಿ ಜಯ ಸಾಧಿಸಿತು. UEFA ಚಾಂಪಿಯನ್ಸ್ ಲೀಗ್ ಫೈನಲ್ ತಲುಪಿದ ಪ್ರಥಮ ಲಂಡನ್ ಕ್ಲಬ್ ಎನಿಸಿತು. ಕ್ಲಬ್ ಬಣ್ಣಗಳು ಸಾಂಪ್ರದಾಯಿಕವಾಗಿ ಕೆಂಪು ಮತ್ತು ಬಿಳಿಯಿಂದ ಕೂಡಿದ್ದು,ಇದು ಅನೇಕ ವರ್ಷಗಳಿಂದ ಬೆಳೆದು ಬಂದದ್ದಾಗಿದೆ. ಇದೇ ರೀತಿ ಕಾಲಾನುಕ್ರಮದಲ್ಲಿ ಕ್ಲಬ್ ತನ್ನ ಸ್ಥಳವನ್ನು ಬದಲಾಯಿಸಿತು. ತಂಡವನ್ನು ಆರಂಭದಲ್ಲಿ ಆಗ್ನೇಯ ಲಂಡನ್ನಲ್ಲಿರುವ ವೂಲ್ವಿಚ್ನಲ್ಲಿ ಸ್ಥಾಪಿಸಲಾಯಿತು ಮತ್ತು ೧೯೧೩ರಲ್ಲಿ ನಗರದ ಉತ್ತರಾಭಿಮುಖವಾಗಿ ಸಾಗಿ ಹೈಬರಿಯ ಆರ್ಸೆನಲ್ ಸ್ಟೇಡಿಯಂಗೆ ಕ್ಲಬ್ ಸ್ಥಳಾಂತರಗೊಂಡಿತು. ೨೦೦೬ರಲ್ಲಿ ಹೋಲೊವೇ ಸಮೀಪದ ಎಮಿರೇಟ್ಸ್ ಸ್ಟೇಡಿಯಂನ ತಮ್ಮ ಪ್ರಸಕ್ತ ಸ್ಥಳಕ್ಕೆ ಸ್ಥಳಾಂತರಿಸುವುದನ್ನು ಕ್ರಮೇಣವಾಗಿ ಕೈಗೊಂಡಿತು. ಭಾರೀ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದ ಆರ್ಸೆನಲ್,ಅನೇಕ ಇತರೆ ಕ್ಲಬ್ಗಳ ಜತೆ ಸುದೀರ್ಘಾವಧಿಯ ಪೈಪೋಟಿಗಳ ಸರಮಾಲೆಯನ್ನು ಹೊಂದಿತ್ತು.ಅವುಗಳಲ್ಲಿ ಅತ್ಯಂತ ಗಮನಾರ್ಹವಾದುದು ನೆರೆಯ ಟೊಟೆನ್ಹ್ಯಾಮ್ ಹಾಟ್ಸ್ಪುರ್ ಜತೆ. ಈ ತಂಡದ ವಿರುದ್ಧ ಉತ್ತರ ಲಂಡನ್ ಡರ್ಬಿಯಲ್ಲಿ ನಿಯತವಾಗಿ ಸ್ಪರ್ಧಿಸುತ್ತಿದ್ದರು. ಜಗತ್ತಿನ ಮೂರನೇ ಶ್ರೀಮಂತ ಕ್ಲಬ್ ಎನಿಸಿದ ಆರ್ಸೆನಲ್,೨೦೦೯ರಲ್ಲಿ ದಾಖಲಾದ ಪ್ರಕಾರ ಅದಕ್ಕೆ $೧.೨ ಶತಕೋಟಿ ಮೌಲ್ಯ ಕಟ್ಟಲಾಗಿದೆ.ಬ್ರಿಟಿಷ್ ಸಂಸ್ಕೃತಿಯ ಫುಟ್ಬಾಲ್ ಚಿತ್ರಣದಲ್ಲಿ ನಿಯಮಿತವಾಗಿ ಕಾಣಿಸಿಕೊಂಡ ಅದರ ಔನ್ನತ್ಯಕ್ಕಾಗಿ ಅದು ಅಭಿನಂದನಾರ್ಹವಾಗಿದೆ.[2] ಆರ್ಸೆನಲ್ ಕ್ಲಬ್ ಜತೆ ಸಂಲಗ್ನಗೊಂಡಿರುವ ಆರ್ಸೆನಲ್ ಲೇಡೀಸ್ ಮಹಿಳಾ ಫುಟ್ಬಾಲ್ನಲ್ಲಿ ಅತ್ಯಂತ ಯಶಸ್ವಿ ಇಂಗ್ಲಿಷ್ ಕ್ಲಬ್ ಎನಿಸಿದೆ.
ಪೂರ್ಣ ಹೆಸರು | Arsenal Football Club | |||
---|---|---|---|---|
ಉಪ ಹೆಸರು | The Gunners | |||
ಸ್ಥಾಪನೆ | 1886 as Dial Square | |||
ಮೈದಾನ | Emirates Stadium (ಸಾಮರ್ಥ್ಯ: 60,355[1]) | |||
ಮಾಲೀಕರು | Arsenal Holdings plc | |||
ಅಧ್ಯಕ್ಷರು | Peter Hill-Wood | |||
ಮ್ಯಾನೇಜರ್ | Arsène Wenger | |||
Premier League | ||||
2008–09 | Premier League, 4th | |||
| ||||
Current season |