ಆಲಿವ್
From Wikipedia, the free encyclopedia
ಆಲಿವ್ (English pronunciation: /'ɑːlɪv/, /'ɑːlɨv/, ಅಥವಾ /'ɑːləv/) (ಆಲಿಯಾ ಯುರೊಪಿಯಾ ) ಎಂಬುದು ಸಣ್ಣ ಮರಗಳ ಪ್ರಭೇದ. ಇದು ಆಲಿಯೆಸೀ ಕುಟುಂಬಕ್ಕೆ ಸೇರಿದೆ. ಇದು ಪೂರ್ವ ಮೆಡಿಟರೇನಿಯನ್ ಜಲಾನಯನ ಪ್ರದೇಶ (ಅಕ್ಕಪಕ್ಕದ ಅಗ್ನೇಯ ಯುರೋಪ್, ಪಶ್ಚಿಮ ಏಷ್ಯಾ ಹಾಗೂ ಉತ್ತರ ಆಫ್ರಿಕಾದ ಕರಾವಳಿ ಪ್ರದೇಶಗಳು) ಹಾಗೂ ಕ್ಯಾಸ್ಪಿಯನ್ ಸಮುದ್ರದ ದಕ್ಷಿಣ ಕೊನೆಯಲ್ಲಿರುವ ಉತ್ತರ ಇರಾನ್ ನಲ್ಲಿ ಬೆಳೆಯುತ್ತದೆ. ಆಲಿವ್ ಎಂದು ಕೂಡ ಕರೆಯಲಾಗುವ ಇದರ ಹಣ್ಣು ಆಲಿವ್ ತೈಲದ ಮೂಲವಾಗಿ, ಮೆಡಿಟರೇನಿಯನ್ ಪ್ರದೇಶದಲ್ಲಿ ಪ್ರಮುಖ ಕೃಷಿ ಬೆಳೆಯಾಗಿ ಪ್ರಾಮುಖ್ಯತೆ ಗಳಿಸಿದೆ. ಮರ ಹಾಗೂ ಅದರ ಹಣ್ಣಿನಿಂದಲೇ ಈ ಗಿಡದ ಕುಟುಂಬಕ್ಕೆ ಹೆಸರು ಬಂದಿದೆ. ಈ ಕುಟುಂಬವು ನೀಲಕಗಳು, ಮಲ್ಲಿಗೆ, ಫಾರ್ಸಿತಿಯಾ ಹೂವು ಹಾಗೂ ನೈಜ ಬೂದು ಬಣ್ಣದ ಮರಗಳು (ಫ್ರ್ಯಾಕ್ಸಿನಸ್ ) ಮುಂತಾದ ಪ್ರಭೇದಗಳನ್ನು ಒಳಗೊಂಡಿವೆ. ಆಲಿವ್ ಪದವು ಲ್ಯಾಟಿನ್ ಭಾಷೆಯ ಆಲಿವಾ ಪದದಿಂದ ವ್ಯತ್ಪತ್ತಿಯಾಗಿದೆ. ಆಲಿವು ಪದವು ಗ್ರೀಕ್ ἐλαία (ಇಲೈಯಾ )[1] ದಿಂದ ವ್ಯುತ್ಪತ್ತಿಯಾಗಿದೆ. ಅಂತಿಮವಾಗಿ, ಇದೂ ಸಹ ಮೈಸಿನೇಯನ್ ಗ್ರೀಕ್ ಪದ e-ra-wa ('ಇಲೈವಾ') ದಿಂದ ಬಂದಿದೆ. ಇದನ್ನು ಲೀನಿಯರ್ ಬಿಸಿಲಬಿಕ್ ಲಿಪಿಯಲ್ಲಿ ನಮೂದಿಸಲಾಗಿದೆ.[2][3] ಹಲವು ಭಾಷೆಗಳಲ್ಲಿ 'ತೈಲ' ಎಂಬ ಪದವು ಅಂತಿಮವಾಗಿ ಈ ಆಲಿವ್ ಮರ ಹಾಗೂ ಅದರ ಹಣ್ಣಿನಿಂದ ವ್ಯುತ್ಪತ್ತಿಯಾಗಿದೆ.