ಇಂಟೆಲ್ ಕಾರ್ಪೊರೇಶನ್
From Wikipedia, the free encyclopedia
ಇಂಟೆಲ್ ಕಾರ್ಪೊರೇಶನ್ (NASDAQ: INTC; SEHK: 4335; Euronext: INCO) ಒಂದು ಅಮೆರಿಕಾದ ಜಾಗತಿಕ ತಂತ್ರಜ್ಞಾನ ಕಂಪನಿಯಾಗಿದೆ. ಇದು ಆದಾಯದ ಆಧಾರದಲ್ಲಿ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಅರೆವಾಹಕ(ಸೆಮಿಕಂಡಕ್ಟರ್) ಚಿಪ್ ತಯಾರಕವಾಗಿದೆ.[5] ಇದು ಹೆಚ್ಚಿನ ವೈಯಕ್ತಿಕ ಕಂಪ್ಯೂಟರ್ಗಳಲ್ಲಿ ಕಂಡುಬರುವ ಸಂಸ್ಕಾರಕಗಳಾದ x86 ಸರಣಿಯ ಮೈಕ್ರೋಪ್ರೋಸೆಸರ್ಗಳ(ಸೂಕ್ಷ್ಮಸಂಸ್ಕಾರಕಗಳ) ಸೃಷ್ಟಿಕರ್ತವಾಗಿದೆ. ಇಂಟೆಲ್ 1968ರ ಜುಲೈ 18ರಂದು ಇಂಟೆ ಗ್ರೆಟೆಡ್ ಎಲೆ ಕ್ಟ್ರೋನಿಕ್ಸ್ ಕಾರ್ಪೊರೇಶನ್ ಆಗಿ ಸ್ಥಾಪನೆಯಾಯಿತು (ಆದರೂ "ಇಂಟೆಲ್" ಎಂಬುದು ಇಂಟೆಲಿ ಜೆನ್ಸ್ ಎಂಬ ಪದದಿಂದ ಬಂದಿದೆಯೆಂಬ ಒಂದು ಸಾಮಾನ್ಯ ತಪ್ಪು ಅಭಿಪ್ರಾಯವಿದೆ). ಇದು USAಯ ಕ್ಯಾಲಿಫೋರ್ನಿಯಾ ಸಂತ ಕ್ಲಾರದಲ್ಲಿದೆ. ಇಂಟೆಲ್ ಮದರ್ಬೋರ್ಡ್ ಚಿಪ್ಸೆಟ್ಗಳು, ಜಾಲ ಅಂತರಸಂಪರ್ಕ ನಿಯಂತ್ರಕಗಳು ಮತ್ತು ಅನುಕಲಿತ ಸರ್ಕೀಟುಗಳು(ಇಂಟೆಗ್ರೇಟೆಡ್ ಸರ್ಕೀಟ್), ಫ್ಲ್ಯಾಶ್ ಮೆಮರಿ, ಗ್ರ್ಯಾಫಿಕ್ ಚಿಪ್ಗಳು, ಹುದುಗಿದ ಸಂಸ್ಕಾರಕಗಳು ಹಾಗೂ ಸಂಪರ್ಕ ವ್ಯವಸ್ಥೆ ಮತ್ತು ಕಂಪ್ಯೂಟರ್ಗೆ ಸಂಬಂಧಿಸಿದ ಇತರ ಉಪಕರಣಗಳನ್ನೂ ತಯಾರಿಸುತ್ತದೆ. ಅರೆವಾಹಕಗಳ ಮೊದಲ ಅನ್ವೇಷಕರಾದ ರಾಬರ್ಟ್ ನಾಯ್ಸ್ ಮತ್ತು ಗೋರ್ಡನ್ ಮೂರ್ರಿಂದ ಸ್ಥಾಪಿಸಲ್ಪಟ್ಟ ಹಾಗೂ ಆಂಡ್ರಿವ್ ಗ್ರೂವ್ನ ಕಾರ್ಯನಿರ್ವಾಹಕ ಮುಖಂಡತ್ವ ಮತ್ತು ಕಲ್ಪನೆಯೊಂದಿಗೆ ವ್ಯಾಪಕವಾಗಿ ಸಂಬಂಧಿಸಿದ, ಇಂಟೆಲ್ ಉತ್ಕೃಷ್ಟವಾದ ಆಧುನೀಕೃತ ಚಿಪ್ ವಿನ್ಯಾಸ ಮಾಡುವ ಮತ್ತು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಆರಂಭದಲ್ಲಿ ಮೂಲಭೂತವಾಗಿ ಇಂಜಿನಿಯರ್ಗಳಿಗೆ ಮತ್ತು ತಂತ್ರಜ್ಞರಿಗೆ ಹೆಸರುವಾಸಿಯಾಗಿದ್ದ ಇಂಟೆಲ್ನ 1990ರ ದಶಕದ "ಇಂಟೆಲ್ ಇನ್ಸೈಡ್" ಜಾಹೀರಾತು ಕಾರ್ಯಾವಳಿಯು ಅದರ ಮತ್ತು ಅದರ ಪೆಂಟಿಯಮ್ ಸಂಸ್ಕಾರಕಗಳ ಹೆಸರುಗಳನ್ನು ಚಿರಪರಿಚಿತವಾಗಿಸಿತು. ಇಂಟೆಲ್ SRAM ಮತ್ತು DRAM ಮೆಮರಿ ಚಿಪ್ಗಳ ಆರಂಭಿಕ ತಯಾರಕವಾಗಿತ್ತು ಹಾಗೂ ಇದು 1981ರವರೆಗೆ ಅದರ ಪ್ರಮುಖ ವ್ಯವಹಾರವಾಗಿತ್ತು. ಇಂಟೆಲ್ 1971ರಲ್ಲಿ ಮೊದಲ ವಾಣಿಜ್ಯ ಮೈಕ್ರೋಪ್ರೋಸೆಸರ್ ಚಿಪ್ಅನ್ನು ತಯಾರಿಸಿದಾಗ, ಅದು ವೈಯಕ್ತಿಕ ಕಂಪ್ಯೂಟರ್ನ (PC) ಯಶಸ್ಸಿನ ಮಟ್ಟವನ್ನು ತಲುಪಲಿಲ್ಲ. ಆದ್ದರಿಂದ ಇದು ಇಂಟೆಲ್ನ ಮೂಲ ವ್ಯವಹಾರವಾಯಿತು. 1990ರ ದಶಕದಲ್ಲಿ ಇಂಟೆಲ್ ಕಂಪ್ಯೂಟರ್ ಉದ್ಯಮದ ಕ್ಷಿಪ್ರ ಬೆಳವಣಿಗೆಯನ್ನು ಉತ್ತೇಜಿಸುವ ಹೊಸ ಮೈಕ್ರೋಪ್ರೋಸೆಸರ್ ವಿನ್ಯಾಸಗಳಿಗೆ ಹೆಚ್ಚು ಬಂಡವಾಳ ತೊಡಗಿಸಿತು. ಈ ಸಂದರ್ಭದಲ್ಲಿ ಇಂಟೆಲ್ PCಗಳಿಗೆ ಮೈಕ್ರೋಪ್ರೋಸೆಸರ್ಗಳನ್ನು ಒದಗಿಸುವ ಪ್ರಬಲ ಪೂರೈಕೆದಾರವಾಯಿತು. ಅದು ನಿರ್ದಿಷ್ಟವಾಗಿ AMDಯ ವಿರುದ್ಧ ಅದರ ಮಾರುಕಟ್ಟೆ ಸ್ಥಾನವನ್ನು ರಕ್ಷಿಸಿಕೊಳ್ಳುವಲ್ಲಿ ಆಕ್ರಮಣಶಾಲಿ ಮತ್ತು ಕೆಲವೊಮ್ಮೆ ವಿವಾದಾತ್ಮಕ ಕಾರ್ಯತಂತ್ರಕ್ಕೆ ಹೆಸರುವಾಸಿಯಾಗಿದೆ. ಅಷ್ಟೇ ಅಲ್ಲದೆ ಇದು PC ಉದ್ಯಮದ ನಿಯಂತ್ರಣಕ್ಕಾಗಿ ಮೈಕ್ರೊಸಾಫ್ಟ್ ಒಂದಿಗೆ ಸೆಣಸಾಡುತ್ತಿದೆ.[6][7] ಮಿಲ್ವಾರ್ಡ್ ಬ್ರೌನ್ ಆಪ್ಟಿಮರ್ ಪ್ರಕಟಿಸಿದ ಪ್ರಪಂಚದ 100 ಅತ್ಯಂತ ಪ್ರಬಲ ಬ್ರ್ಯಾಂಡ್ಗಳ 2010ರ ಶ್ರೇಣೀಕರಣದಲ್ಲಿ ಈ ಕಂಪನಿಯು 48ನೇ ಸ್ಥಾನವನ್ನು ಪಡೆದಿದೆ.[8] ಇಂಟೆಲ್ ವಿದ್ಯುತ್ ಸಾಗಣೆ ಮತ್ತು ಉತ್ಪಾದನೆಯಲ್ಲೂ ಸಂಶೋಧನೆಯನ್ನು ಆರಂಭಿಸಿದೆ.[9][10]
ಸಂಸ್ಥೆಯ ಪ್ರಕಾರ | Public NASDAQ: INTC SEHK: 4335 Euronext: INCO Dow Jones Industrial Average Component |
---|---|
ಸ್ಥಾಪನೆ | 1968[1] |
ಸಂಸ್ಥಾಪಕ(ರು) | Gordon E. Moore Robert Noyce |
ಮುಖ್ಯ ಕಾರ್ಯಾಲಯ | 2200 Mission College Blvd. Santa Clara, California[2], U.S. |
ವ್ಯಾಪ್ತಿ ಪ್ರದೇಶ | Worldwide |
ಪ್ರಮುಖ ವ್ಯಕ್ತಿ(ಗಳು) | Jane E. Shaw (Chairman) Paul S. Otellini (President and CEO) |
ಉದ್ಯಮ | Semiconductors |
ಉತ್ಪನ್ನ | Microprocessors Flash memory Motherboard Chipsets Network Interface Card Bluetooth Chipsets |
ಆದಾಯ | US$ 43.6 billion (2010)[3] |
ಆದಾಯ(ಕರ/ತೆರಿಗೆಗೆ ಮುನ್ನ) | US$ 15.9 billion (2010)[3] |
ನಿವ್ವಳ ಆದಾಯ | US$ 11.7 billion (2010)[3] |
ಒಟ್ಟು ಆಸ್ತಿ | US$ 53.095 billion (2009)[3] |
ಒಟ್ಟು ಪಾಲು ಬಂಡವಾಳ | US$ 41.704 billion (2009)[3] |
ಉದ್ಯೋಗಿಗಳು | 83,500 (2008)[3] |
ಜಾಲತಾಣ | Intel.com |
1Incorporated in ಕ್ಯಾಲಿಫೊರ್ನಿಯ in 1968, reincorporated in Delaware in 1989.[4] |