ಎರ್ವಿನ್ ಚಾರ್ಗಾಫ್
ಆಸ್ಟ್ರೋ-ಹಂಗೇರಿಯನ್ ಜೀವರಸಾಯನಶಾಸ್ತ್ರಜ್ಞ / From Wikipedia, the free encyclopedia
ಎರ್ವಿನ್ ಚಾರ್ಗಾಫ್ ರವರು ಆಸ್ಟ್ರೋ-ಹಂಗೇರಿಯನ್ ಜೀವರಸಾಯನಶಾಸ್ತ್ರಜ್ಞರಾಗಿದ್ದರು. ಅವರು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಜೀವರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಚಾರ್ಗಾಫ್ ರವರ ಎರಡು ನಿಯಮಗಳು ಡಿಎನ್ಎ ಡಬಲ್ ಹೆಲಿಕ್ಸ್ ರಚನೆಯ ಆವಿಷ್ಕಾರಕ್ಕೆ ಕಾರಣವಾಯಿತು. ಅವರ ಮೊದಲ ನಿಯಮ: ಗ್ವಾನಿನ್ ಘಟಕಗಳ ಸಂಖ್ಯೆಯು ಸೈಟೋಸಿನ್ ಘಟಕಗಳ ಸಂಖ್ಯೆಗೆ ಸಮನಾಗಿರುತ್ತದೆ ಮತ್ತು ಅಡೆನಿನ್ ಘಟಕಗಳ ಸಂಖ್ಯೆಯು ಥೈಮಿನ್ ಘಟಕಗಳ ಸಂಖ್ಯೆಗೆ ಸಮನಾಗಿರುತ್ತದೆ. ಎರಡನೆಯ ನಿಯಮವೆಂದರೆ ತುಲನಾತ್ಮಕ ಪ್ರಮಾಣದಲ್ಲಿ ಗ್ವಾನಿನ್, ಸೈಟೋಸಿನ್, ಅಡೆನಿನ್ ಮತ್ತು ಥೈಮಿನ್ ತಳಗಳು ಒಂದು ಜಾತಿಯಿಂದ ಇನ್ನೊಂದಕ್ಕೆ ಬದಲಾಗುತ್ತವೆ. ಇದು ಪ್ರೋಟೀನ್ ಬದಲಿಗೆ ಡಿಎನ್ಎ ಆನುವಂಶಿಕ ವಸ್ತು ಎಂದು ಸುಳಿವು ನೀಡಿತು.[1]
This article ವಿಕಿಪೀಡಿಯ ನಿಬಂಧನೆಗಳ ಪ್ರಕಾರ ಈ ಪುಟ ಅನಾಥ ಪುಟವಾಗಿದೆ. ಯಾಕೆಂದರೆ ಈ ಪುಟವನ್ನು ಬೇರೆ ಪುಟದಿಂದ ಸಂಪರ್ಕವಿಲ್ಲ. ದಯವಿಟ್ಟು ವಿಕಿಪೀಡಿಯದಲ್ಲಿರುವ ಬೇರೆ ಪುಟದಿಂದ ಈ ಪುಟವನ್ನು ಸಂಪರ್ಕ ಮಾಡಿ. (ಮಾರ್ಚ್ ೨೦೧೯) |
Quick Facts ಎರ್ವಿನ್ ಚಾರ್ಗಾಫ್, ಜನನ ...
ಎರ್ವಿನ್ ಚಾರ್ಗಾಫ್ | |
---|---|
ಜನನ | ೧೧ ಆಗಸ್ಟ್ ೧೯೦೫ ಕ್ಸೆರ್ನೊವಿಟ್ಜ್, ಆಸ್ಟ್ರೋ-ಹಂಗೇರಿಯ |
ಮರಣ | ೨೦ ಜೂನ್ ೨೦೦೨ ಮ್ಯಾನ್ಹ್ಯಾಟನ್,ನ್ಯೂಯಾರ್ಕ್ |
ರಾಷ್ಟ್ರೀಯತೆ | ಅಮೇರಿಕನ್ |
ಕಾರ್ಯಕ್ಷೇತ್ರ | ಜೀವರಸಾಯನಶಾಸ್ತ್ರ |
ಸಂಸ್ಥೆಗಳು | ಯೇಲ್ ವಿಶ್ವವಿದ್ಯಾಲಯ (೧೯೨೫–೧೯೩೦), ಕೊಲಂಬಿಯಾ ವಿಶ್ವವಿದ್ಯಾಲಯ (೧೯೩೫–೧೯೭೪), ರೂಸ್ವೆಲ್ಟ್ ಆಸ್ಪತ್ರೆ (೧೯೭೪-೧೯೯೨) |
ವಿದ್ಯಾಭ್ಯಾಸ | ಮ್ಯಾಕ್ಸಿಮಿಲಿಯಾನ್ ಜಿಮ್ನಾಷಿಯಂ, ವಿಯೆನ್ನಾ |
ಅಭ್ಯಸಿಸಿದ ವಿದ್ಯಾಪೀಠ | ವಿಯೆನ್ನಾ ವಿಶ್ವವಿದ್ಯಾನಿಲಯ (೧೯೨೪–೧೯೨೮) |
ಪ್ರಸಿದ್ಧಿಗೆ ಕಾರಣ | ಚಾರ್ಗಾಫ್ ನಿಯಮ |
ಗಮನಾರ್ಹ ಪ್ರಶಸ್ತಿಗಳು | ಪಾಶ್ಚರ್ ಮೆಡಲ್(೧೯೪೯), ನ್ಯಾಷನಲ್ ಮೆಡಲ್ ಆಫ್ ಸೈನ್ಸ್(೧೯೭೪) |
ಹಸ್ತಾಕ್ಷರ |
Close