ಕಿಂಗ್ ಆರ್ಥರ್
From Wikipedia, the free encyclopedia
ಮಧ್ಯಯುಗದ ಇತಿಹಾಸಕಾರರ ಪ್ರಕಾರ ಕಿಂಗ್ ಆರ್ಥರ್ ಒಬ್ಬ ಬ್ರಿಟಿಶ್ ನೇತಾರ, ಮತ್ತು ಪೌರಾಣಿಕ ಐತಿಹ್ಯ ಹೊಂದಿದ, ರೋಮಾಂಚಕಾರಿ ವ್ಯಕ್ತಿತ್ವಯುಳ್ಳವನು.ಆರನೆಯ ಶತಮಾನದಲ್ಲಿ ಸಾಕ್ಸೊನ್ ಅವರ ಬ್ರಿಟನ್ ಮೇಲಿನ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದವನು. .[1] ಆರ್ಥರ್ ನ ಕಥೆಯು ಪ್ರಮುಖವಾಗಿ ಜನಪದ ಮತ್ತು ಸಾಹಿತ್ಯಕ ಸಂಶೋಧನೆಗಳಲ್ಲಿ ಕಂಡು ಬರುತ್ತದೆ.ಆದರೆ ಆತನ ಇತಿಹಾಸದ ಅಸ್ತಿತ್ವದ ಬಗ್ಗೆ ಆಧುನಿಕ ಇತಿಹಾಸತಜ್ಞರಲ್ಲಿ ಚರ್ಚೆ,ವಿವಾದಕ್ಕೆ [1] ಕಾರಣವಾಗಿದೆ. ಆರ್ಥರ್ ನ ಐತಿಹಾಸಿಕ ಹಿನ್ನಲೆಯನ್ನು ಹಲವಾರು ಮೂಲಗಳಿಂದ ಪಡೆಯಲಾಗಿದೆ;ಉದಾಹರಣೆಗೆ, ಅನ್ನಾಲೆಸ್ ಕ್ಯಾಂಬ್ರಿ , ಹಿಸ್ಟಾರಿಯಾ ಬ್ರಿಟೊನಮ್ ,ಮತ್ತು ಗಿಲ್ಡಾಸನ ಬರಹಗಳಿಂದ ಪಡೆಯಬಹುದಾಗಿದೆ. ಆರಂಭಿಕ ಕಾವ್ಯದಲ್ಲಿ ಆರ್ಥರ್ ನ ಹೆಸರು ಮೂಲದಲ್ಲಿ ಹಾಯ್ದು ಹೋಗಿದೆ.ಉದಾಹರಣೆಗೆ ವೈ ಗೊಡೊಡಿನ್ ನಲ್ಲಿ ಆಗಾಗ [2] ಕಾಣಬರುತ್ತದೆ.
ಜಾಫರಿ ಆಫ್ ಮೊನ್ ಮೌಥ್ ನ 12ನೆಯ ಶತಮಾನದಲ್ಲಿನ (ಹಿಸ್ಟಾರಿಯಾ ರೆಗಮ್ ಬ್ರಿಟನ್ನೇ ) ಅಂದರೆ ಬ್ರಿಟನ್ ರಾಜರಗಳು ಇತಿಹಾಸ ಇತ್ಯಾದಿಗಳನ್ನುಜನಪ್ರಿಯ ಅಂತಾರಾಷ್ಟ್ರೀಯ ಆಸಕ್ತಿ ಕೆರಳಿಸುವ ಕಾಲ್ಪನಿಕ ಹಾಗು ಊಹೆಗಳನ್ನು ಆಧರಿಸಿ [3] ಬರೆಯಲಾಗಿದೆ. ಈ ಕೃತಿಗಳಲ್ಲಿನ ಆರಂಭಿಕ ಉಲ್ಲೇಖಗಳಿಗಿಂತ ವೆಲ್ಶ್ ಮತ್ತು ಬ್ರೆಟನ್ ಕಥೆಗಳು ಮತ್ತು ಕವಿತೆಗಳಲ್ಲಿ ಆರ್ಥರ್ ನ ಬಗ್ಗೆ ಬರೆಯಲಾಗಿದೆ. ಈತನೊಬ್ಬ ವೀರ ಸೇನಾನಿ ಬ್ರಿಟನ್ ನ್ನು ಮಾನವರು ಮತ್ತು ನೈಸರ್ಗಿಕ ವಿಕೋಪದಂತಹ ವೈರಿಗಳಿಂದ ರಕ್ಷಿಸಿದ ಎಂಬ ಕಥೆಯೂ ಜನಜನಿತವಾಗಿದೆ.ಇದು ವೆಲ್ಶ್ ಅದರ್ ವರ್ಲ್ಡ್ ಮತ್ತು ಅನ್ನಾವ್ನ್ ನಲ್ಲಿ ಈತನ ಬಗ್ಗೆ ಅಪಾರ ವಿವರಗಳನ್ನು [4] ನೀಡಲಾಗಿದೆ. ಜಾಫ್ರಿಯ ಹಿಸ್ಟೊರಿಯಾ (1138ರಲ್ಲಿ ಪೂರ್ಣಗೊಂಡಿದ್ದು)ದಲ್ಲಿ ಮೊದಲಿನ ಇತಿಹಾಸವನ್ನು ಎಷ್ಟರ ಮಟ್ಟಿಗೆ ಅಳವಡಿಸಿಕೊಳ್ಳಲಾಗಿದೆ ಅಥವಾ ಇದರ ಬಗ್ಗೆ ಜಾಫ್ರಿ ಸ್ವತ: ಸಂಶೋಧನೆ ಕೈಗೊಂಡರೋ ಎಂಬುದು ಯಾರಿಗೂ ತಿಳಿದಿಲ್ಲ.
ಆರ್ಥರ್ ಐತಿಹ್ಯವು ದೊರೆತ ಪಠ್ಯದಿಂದ ಪಠ್ಯಕ್ಕೆ ವ್ಯತ್ಯಾಸವಾಗುತ್ತದೆ.ಅಲ್ಲಿನ ಪ್ರಮೇಯ,ಘಟನೆಗಳು,ತತ್ವಸಿದ್ದಾಂತಗಳು ವಿಶಾಲ ಅರ್ಥದಲ್ಲಿ ವ್ಯಾಖ್ಯಾನಿಸುವುದು ಸುಲಭವಲ್ಲ.ಇದರ ಬಗ್ಗೆಯಾವುದೇ ನಿರ್ಧಿಷ್ಟ ಮಾಹಿತಿಯ ಸರಣಿ ಸಿಗಲಾರದು.ಜಾಫ್ರಿಯ ಘಟನೆ ಅಥವಾ ಸಂದರ್ಭಗಳ ಆವೃತ್ತಿಯು ಮುಂದಿನ ಈ ಕುರಿತ ಕಥಾನಕಗಳಿಗೆ ಆಧಾರ ಮಾಹಿತಿಯನ್ನು ಒದಗಿಸುತ್ತದೆ. ಜಾಫ್ರಿ ಪ್ರಕಾರ ಅರ್ಥರ್ ಓರ್ವ ಬ್ರಿಟನ್ ರಾಜ ಸಾಕ್ಸೊನ್ ಗಳನ್ನು ಸೋಲಿಸಿ ಬ್ರಿಟೇನ್ ,ಐರ್ಲೆಂಡ್ ,ಐಸ್ ಲ್ಯಾಂಡ್ ,ನಾರ್ವೆ ಮತ್ತು ಗೌಲ್ ಗಳಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿ ಆಡಳಿತ ಮಾಡಿದವನು. ವಾಸ್ತವ ಸಂಗತಿ ಎಂದರೆ ಹಲವಾರು ಅಂಶಗಳು ಮತ್ತು ಪ್ರಕರಣಗಳು ಜಾಫ್ರಿಯ ಹಿಸ್ಟೊರಿಯಾದ ಆರ್ಥರಿಯನ್ ಕಥೆಯಲ್ಲಿ ಕಾಣಸಿಗುತ್ತವೆ.ಅಂದರೆ ಆರ್ಥರ್ ನ ತಂದೆ ಉಥೆರ್ ಪೆಂಡ್ರಾಗೊನ್ ,ಮಂತ್ರವಾದಿ ಮೆರ್ಲಿನ್,ಕಿಂಗ್ ಆರ್ಥರ್ ನ ಖಡ್ಗ ಎಕ್ಸ್ ಕ್ಯಾಲಿಬರ್ ,ಆರ್ಥರ್ ನ ಹುಟ್ಟಿದೂರು ಟಿಂಟಾಗೆಲ್ ,ಕ್ಯಾಮ್ಲಾನ್ ನಲ್ಲಿ ಮೊರ್ಡ್ರಿಡ್ ಅವರ ವಿರುದ್ದದ ಆತನ ಕೊನೆಯ ಸಮರ ಮತ್ತು ಅಂತಿಮವಾಗಿ ಅವಲೊನ್ ನಲ್ಲಿನ ಆತನ ಚಿರಶಾಂತಿಯು ಇದರಲ್ಲಿ ದಾಖಲಾಗಿದೆ. ಫ್ರೆಂಚ್ ನ ಬರಹಗಾರ ಚೆರ್ಟಿನ್ ಟ್ರೊಯಸ್ 12ನೆಯ ಶತಮಾನದಲ್ಲಿ ಆರ್ಥರ್ ನ ಕಥೆಗೆ ಲಾನ್ಸ್ ಲಾಟ್ ಮತ್ತು ಹೊಲಿ ಗ್ರೇಲ್ ನ್ನು ಸೇರಿಸಿ ಈ ಇತಿಹಾಸವನ್ನು ಇನ್ನಷ್ಟು ರಂಜನೀಯವಾಗಿರುವಂತೆ ಮಾಡಿದ.ಹೀಗಾಗಿ ಮಧ್ಯಯುಗದ ಸಾಹಿತ್ಯಕ್ಕೆ ಆರ್ಥರ್ ನ ರೋಚಕತೆ ಮತ್ತು ರಸಿಕತೆ ಒಂದು ಓದಾಗಿ ಮಾರ್ಪಟ್ಟಿತು. ಈ ಫ್ರೆಂಚ್ ಕಥೆಗಳಲ್ಲಿ ಆರ್ಥರ್ ಕಿಂಗ್ ವಿವಿಧ ರೂಪಗಳಲ್ಲಿ ಕಾಣುತ್ತಾನೆ.ನೈಟ್ಸ್ ಆಫ್ ದಿ ರೌಂಡ್ ಟೇಬಲ್ ನ ವಿಭಿನ್ನ ವೇಷಗಳಲ್ಲಿ ಆರ್ಥರ್ ಗಮನಸೆಳೆಯುತ್ತಾನೆ. ಆರ್ಥರಿಯನ್ ಸಾಹಿತ್ಯವು ಮಧ್ಯಯುಗದಲ್ಲಿ ಪ್ರವರ್ಧಮಾನ ಕಂಡರೂ 19ನೆಯ ಶತಮಾನದ ಆರಂಭದ ಹೊತ್ತಿಗೆ ಅದು ತನ್ನ ಹೊಳಪನ್ನು ಸಾಕಷ್ಟು ಕಡಿಮೆ ಮಾಡಿಕೊಂಡಿತು. ಅದರ ನಂತರ 21ನೆಯ ಶತಮಾನದಲ್ಲಿ ಈತನ ಇತಿಹಾಸವು ಸಾಹಿತ್ಯಕ್ಷೇತ್ರದಲ್ಲದೇ ರಂಗಭೂಮಿ,ಚಲನಚಿತ್ರ,ದೂರದರ್ಶನ ಮತ್ತು ಇನ್ನಿತರ ಮಾಧ್ಯಮಗಳಲ್ಲೂ ಗೋಚರಿಸಲಾರಂಭಿಸಿತು.