ಕ್ರಿಸ್ಟಿಯಾನ್ ಹೈಜೆನ್ಸ್
ಗಣಿತಜ್ಞ / From Wikipedia, the free encyclopedia
ಕ್ರಿಸ್ಟಿಯಾನ್ ಹೈಜೆನ್ಸ್ ಲಂಡನ್ನಿನ ರಾಯಲ್ ಸೊಸೈಟಿಯ "ಫೆಲೋ" ಪುರಸ್ಕಾರಕ್ಕೆ ಪಾತ್ರನಾಗಿದ್ದ ಹದಿನೇಳನೇ ಶತಮಾನದ ವಿಜ್ಞಾನಿ. ನೆದರ್ಲಾಂಡ್ಸ್ ದೇಶದವನು. ಖಗೋಳ ವಿಜ್ಞಾನ ಮತ್ತು ಭೌತಶಾಸ್ತ್ರ ಇವನ ಮುಖ್ಯ ಕ್ಷೇತ್ರಗಳು. ಇದಲ್ಲದೆ ಗಣಿತ ಕ್ಷೇತ್ರದಲ್ಲಿ ಸಂಭಾವ್ಯತೆ (ಪ್ರಾಬಬಿಲಿಟಿ) ಕುರಿತಾಗಿ ಸಂಶೋಧನೆ ನಡೆಸಿದ್ದಾನೆ. ಸಮಯದ ಮಾಪನ ಕೂಡಾ ಇವನ ಆಸಕ್ತಿಯಾಗಿತ್ತು.
Quick Facts ಕ್ರಿಸ್ಟಿಯಾನ್ ಹೈಜೆನ್ಸ್, ಜನನ ...
ಕ್ರಿಸ್ಟಿಯಾನ್ ಹೈಜೆನ್ಸ್ | |
---|---|
ಜನನ | (೧೬೨೯-೦೪-೧೪)೧೪ ಏಪ್ರಿಲ್ ೧೬೨೯ ದ ಹೇಗ್, ಡಚ್ ಗಣರಾಜ್ಯ |
ಮರಣ | 8 July 1695(1695-07-08) (aged 66) ದ ಹೇಗ್, ಡಚ್ ಗಣರಾಜ್ಯ |
ವಾಸಸ್ಥಳ | ನೆದರ್ಲಂಡ್ಸ್, ಫ್ರಾನ್ಸ್ |
ರಾಷ್ಟ್ರೀಯತೆ | ಡಚ್ |
ಕಾರ್ಯಕ್ಷೇತ್ರ | ಭೌತಶಾಸ್ತ್ರ ಗಣಿತ ಖಗೋಳ ವಿಜ್ಞಾನ ಕಾಲಮಾಪನಶಾಸ್ತ್ರ |
ಸಂಸ್ಥೆಗಳು | ರಾಯಲ್ ಸೊಸೈಟಿ ಆಫ಼್ ಲಂಡನ್ ಫ಼್ರೆಂಚ್ ಅಕಾಡೆಮಿ ಆಫ಼್ ಸೈನ್ಸಸ್ |
ಅಭ್ಯಸಿಸಿದ ವಿದ್ಯಾಪೀಠ | ಲೈಡನ್ ವಿಶ್ವವಿದ್ಯಾಲಯ ಆಂಜೆ ವಿಶ್ವವಿದ್ಯಾಲಯ |
ಪ್ರಸಿದ್ಧಿಗೆ ಕಾರಣ | ಟೈಟನ್ ಶನಿಗ್ರಹದ ಉಂಗುರಗಳ ವಿವರಣೆ ಅಪಕೇಂದ್ರ ಬಲ ಸಂಘಟ್ಟನಾ ಸೂತ್ರಗಳು ಲೋಲಕ ಗಡಿಯಾರ ಹೈಗೆನ್ಸ್-ಫ಼್ರೆಸ್ನೆಲ್ ತತ್ತ್ವ ತರಂಗ ಸಿದ್ಧಾಂತ ದ್ವಿವಕ್ರೀಕರಣ ಲಂಬಜ ಹೈಜೇನಿಯನ್ ನೇತ್ರಕ 31 ಸಮಶ್ರುತಿ ಸಂಗೀತ ಶ್ರುತಿ ಮಾಡುವುದು ಹೈಜೆನ್ಸ್-ಸ್ಟೈನರ್ ಪ್ರಮೇಯ |
ಪ್ರಭಾವಗಳು | ಗೆಲೀಲಿಯೊ ರೆನೆ ಡೆಕಾರ್ಟೆ ಫ಼್ರಾನ್ ವಾನ್ ಶೂಟನ್ |
ಪ್ರಭಾವಿತರು | ಗಾಟ್ಫ಼್ರೀಡ್ ಲೇಯ್ಬ್ನಿಜ಼್ ಐಸ್ಯಾಕ್ ನ್ಯೂಟನ್[1][2] |
Close
ಹೈಜೆನ್ಸ್ ತನ್ನ ಕಾಲಮಾನದಲ್ಲಿ ಮುಂಚೂಣಿಯ ವಿಜ್ಞಾನಿಯಾಗಿದ್ದ. ದೂರದರ್ಶಕ ಮೂಲಕ ಶನಿಗ್ರಹದ ಸುತ್ತಲೂ ಇರುವ ಉಂಗುರಗಳನ್ನು ಅಧ್ಯಯನ ಮಾಡಿ ಶನಿಗ್ರಹದ “ಟೈಟನ್” ಚಂದ್ರನನ್ನು ಗುರುತಿಸಿದವನು ಇವನೇ. ಇಂದು ಸಾಮಾನ್ಯವಾಗಿರುವ ಪೆಂಡುಲಮ್ ಗಡಿಯಾರವನ್ನು ಕಂಡುಹಿಡಿದದ್ದು ಈತನೇ. ಇಂದಿನ ಮಕ್ಕಳು ಶಾಲೆಯಲ್ಲಿ ಕಲಿಯುವ ಮೆಕಾನಿಕ್ಸ್, ಆಪ್ಟಿಕ್ಸ್ ಮತ್ತು ಸಂಭಾವ್ಯತೆಯ ಕೆಲವು ಮುಖ್ಯ ಶೋಧನೆಗಳನ್ನು ಹೈಜೆನ್ಸ್ ನಡೆಸಿದ್ದಾನೆ.