ಗಾಡ್ಸ್ಮ್ಯಾಕ್
ಅಮೆರಿಕಾದ ರಾಕ್ ವಾದ್ಯವೃಂದ / From Wikipedia, the free encyclopedia
ಗಾಡ್ ಸ್ಮ್ಯಾಕ್ ಎಂಬುದು ಮಸಾಚುಸೆಟ್ಸ್ ಲಾರೆನ್ಸ್ ನಿಂದ ಬಂದ ಅಮೆರಿಕನ್ ರಾಕ್ ವಾದ್ಯವೃಂದವಾಗಿದ್ದು, ಇದನ್ನು 1995 ರಲ್ಲಿ ರಚಿಸಲಾಯಿತು. ಈ ವಾದ್ಯವೃಂದವು ಸಂಸ್ಥಾಪಕ, ಮುಖ್ಯ ಗಾಯಕ ಮತ್ತು ಗೀತೆಬರಹಗಾರ ಸುಲ್ಲಿ ಎರ್ನ, ಗಿಟಾರ್ ವಾದಕಟೋನಿ ರೊಂಬೊಲ, ಬೇಸ್ ವಾದ್ಯಗಾರ ರಾಬಿ ಮೆರಿಲ್, ಮತ್ತು ಡ್ರಮ ವಾದಕ ಶಾನಾನ್ ಲಾರ್ಕಿನ್ ರನ್ನು ಒಳಗೊಂಡಿದೆ. ಗಾಡ್ ಸ್ಮ್ಯಾಕ್ ರಚನೆಯಾದಾಗಿನಿಂದ ಐದು ಸ್ಟುಡಿಯೋ ಆಲ್ಬಂಗಳನ್ನು ಒಂದು EP, ನಾಲ್ಕು DVDಗಳನ್ನು, ಮತ್ತು ಒಂದು ಗ್ರೇಟೆಸ್ಟ್ ಹಿಟ್ಸ್ ಸಂಗ್ರಹದ ಆಲ್ಬಂಅನ್ನು ಬಿಡುಗಡೆಮಾಡಿದೆ.
Godsmack | |
---|---|
ಹಿನ್ನೆಲೆ ಮಾಹಿತಿ | |
ಮೂಲಸ್ಥಳ | Lawrence, Massachusetts, United States |
ಸಂಗೀತ ಶೈಲಿ | Heavy metal, hard rock, alternative metal, post-grunge |
ಸಕ್ರಿಯ ವರ್ಷಗಳು | 1995–present |
Labels | Universal/Republic |
Associated acts | Another Animal, Meliah Rage, Ugly Kid Joe, Dropbox, Fuel |
ಅಧೀಕೃತ ಜಾಲತಾಣ | www.godsmack.com |
ಸಧ್ಯದ ಸದಸ್ಯರು | Sully Erna Tony Rombola Robbie Merrill Shannon Larkin |
ಮಾಜಿ ಸದಸ್ಯರು | Tommy Stewart Lee Richards Joe D'Arco |
ವಾದ್ಯವೃಂದವು ಬಿಲ್ಬೋರ್ಡ್ 200 ರಲ್ಲಿ ಕ್ರಮವಾಗಿ (ಫೇಸ್ ಲೆಸ್ , IV , ಮತ್ತು ದಿ ಒರಾಕಲ್ )ಎಂಬ ಮೂರು #1 ಆಲ್ಬಂಗಳನ್ನು ಹೊಂದಿದೆ. ವಾದ್ಯವೃಂದವು ಟಾಪ್ ಐದರಲ್ಲಿ 15 ಹಾಡುಗಳನ್ನು ಒಳಗೊಂಡಂತೆ ಅನುಮೋದಿಸಲಾಗಿದ್ದ 18 ಟಾಪ್ ಟೆನ್ ರಾಕ್ ರೇಡಿಯೋ ಜನಪ್ರಿಯ ಗೀತೆಗಳನ್ನು ರಚಿಸಿದೆ[1] ಗಾಡ್ ಸ್ಮ್ಯಾಕ್ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಕೊನೆಯ ದಶಕಗಳಲ್ಲಿ ಕಂಡ ಅತ್ಯಂತ ಜನಪ್ರಿಯ ಹೆವಿ ಮೆಟಲ್ ವಾದ್ಯವೃಂದಗಳಲ್ಲಿ ಒಂದಾಗಿದೆ. ಸುಮಾರು 19 ದಶಲಕ್ಷಕ್ಕಿಂತ ಹೆಚ್ಚು ಧ್ವನಿಮುದ್ರಿಕೆಗಳು ಮಾರಾಟವಾಗಿವೆ ಮತ್ತು ಪ್ರಪಂಚದಾದ್ಯಂತ ಪರಿಗಣಿತವಾಗಿದೆ.[2]
ಅದರ ಆರಂಭದ ಕಾಲದಿಂದ, ಗಾಡ್ ಸ್ಮ್ಯಾಕ್ ಒಸ್ ಫೆಸ್ಟ್(ಅಮೆರಿಕದ ವಾರ್ಷಿಕ ಉತ್ಸವ ಕ್ರೀಡೆ) ಮೂಲಕ ಒಂದಕ್ಕಿಂತ ಹೆಚ್ಚು ಭಾರಿ ಪ್ರವಾಸಮಾಡಿದೆ. ಅಲ್ಲದೇ ಅದರದೇ ಕಾರ್ಯಕ್ಷೇತ್ರದ ಪ್ರವಾಸಗಳೊಂದಿಗೆ ಅವರ ಆಲ್ಬಂಗಳಿಗೆ ಬೆಂಬಲ ನೀಡುವುದನ್ನು ಒಳಗೊಂಡಂತೆ ಇತರ ಅನೇಕ ದೊಡ್ಡ ಪ್ರವಾಸ ಗಳಲ್ಲಿ ಮತ್ತು ಉತ್ಸವಗಳಲ್ಲಿ ಪ್ರವಾಸ ಕೈಗೊಂಡಿದೆ. 2009 ರ ಬೇಸಿಗೆಯಲ್ಲಿ, ಗಾಡ್ ಸ್ಮ್ಯಾಕ್ ಮೊಟ್ಲಿ ಕ್ರ್ಯೂ ನ ಕ್ರ್ಯೂ ಉತ್ಸವ 2 ರ ಪ್ರವಾಸದ ಬೆಂಬಲಾರ್ಥ ಪ್ರವಾಸ ಮಾಡಿತು.