ಚಾರ್ಲ್ಸ್ ಬ್ಯಾಬೇಜ್
ಗಣಿತಜ್ಞ / From Wikipedia, the free encyclopedia
ಚಾರ್ಲ್ಸ್ ಬ್ಯಾಬೇಜ್, ಎಫ್ಆರ್ಎಸ್ (26 ಡಿಸೆಂಬರ್ 1791 - 18 ಅಕ್ಟೋಬರ್ 1871)[1] ಒಬ್ಬ ಇಂಗ್ಲಿಷ್ ಗಣಿತಜ್ಞ, ತತ್ವಜ್ಞಾನಿ, ಸಂಶೋಧಕ ಮತ್ತು ಯಾಂತ್ರಿಕ ಇಂಜಿನಿಯರ್, "ಕಂಪ್ಯೂಟರ್ ಪಿತಾಮಹ" ಎಂದು ಪರಿಗಣಿಸಲ್ಪಟ್ಟಿರುವವ.[2][3][4][5] ಬ್ಯಾಬೇಜ್ ಮೊದಲ ಯಾಂತ್ರಿಕ ಕಂಪ್ಯೂಟರ್ ಕಂಡುಹಿಡಿದ ಕೀರ್ತಿವಂತ. ಇದು ಅಂತಿಮವಾಗಿ ಹೆಚ್ಚು ಸಂಕೀರ್ಣವಾದ ವಿನ್ಯಾಸಗಳಿಗೆ ಕಾರಣವಾಯಿತು.[6] ಇವನ ಅಪೂರ್ಣವಾಗಿದ್ದ ಯಂತ್ರವಿನ್ಯಾಸಗಳ ಭಾಗಗಳನ್ನು ಲಂಡನ್ ಸೈನ್ಸ್ ಮ್ಯೂಸಿಯಮ್ನಲ್ಲಿ ಪ್ರದರ್ಶನಕ್ಕಿಡಲಾಗಿದೆ. 1991 ರಲ್ಲಿ, ಪರಿಪೂರ್ಣವಾಗಿ ಕಾರ್ಯ ನಡೆಸುವ ವ್ಯತ್ಯಾಸ ಎಂಜಿನ್ನನ್ನು ಬ್ಯಾಬೇಜ್ನ ಮೂಲ ಯೋಜನೆಗಳಿಂದ ನಿರ್ಮಿಸಲಾಯಿತು. 19 ನೇ ಶತಮಾನದಲ್ಲಿ ಸಾಧಿಸಬಲ್ಲ ಸಹಿಷ್ಣುತೆಗಳ ರೀತ್ಯ ನಿರ್ಮಿಸಲಾಗಿದ್ದ ಮುಗಿಸಿದ ಎಂಜಿನ್ನ ಯಶಸ್ಸು ಬ್ಯಾಬೇಜ್ನ ಯಂತ್ರವು ಕಾರ್ಯ ಮಾಡುತ್ತಿತ್ತು ಎಂದು ಸೂಚಿಸಿತು. ಒಂಬತ್ತು ವರ್ಷಗಳ ನಂತರ, ಬ್ಯಾಬೇಜ್ ವ್ಯತ್ಯಾಸ ಎಂಜಿನ್ಗೆ ವಿನ್ಯಾಸಗೊಳಿಸಿದ್ದ ಮುದ್ರಕವನ್ನು ಸೈನ್ಸ್ ಮ್ಯೂಸಿಯಂ ಪೂರ್ಣಗೊಳಿಸಿತು. 19 ನೇ ಶತಮಾನಕ್ಕೆ ಇದು ಒಂದು ನಿಬ್ಬೆರಗಾಗಿಸುವಂತಹ ಸಂಕೀರ್ಣ ಸಾಧನವಾಗಿತ್ತು.