ಚೀತಾ
From Wikipedia, the free encyclopedia
ಚೀತಾ/ಶಿವಾಂಗಿ[4] (ಅಸಿನೋನಿಕ್ಸ್ ಜುಬೆಟಸ್ ) ಫೆಲಿಡೆ ಎಂಬ ಬೆಕ್ಕಿನ ಜಾತಿಗೆ ಸೇರಿದ ಒಂದು ವಿಶಿಷ್ಟ ಪ್ರಾಣಿ. ಇದು ತನ್ನ ವೇಗಕ್ಕೆ ಹೆಸರುವಾಸಿಯಾಗಿದೆ, ಆದರೆ ಇದಕ್ಕೆ ಮರ ಏರುವ ಸಾಮರ್ಥ್ಯದ ಕೊರತೆ ಇದೆ. ಈ ಪ್ರಾಣಿವರ್ಗವು ಅಸಿನೋನಿಕ್ಸ್ ಎಂಬ ವಂಶವಾಹಿನಿಯ ಬದುಕಿರುವ ಏಕೈಕ ಸದಸ್ಯ.
ಸಿವಂಗಿ[1][2] Temporal range: Late Pliocene to Recent | |
---|---|
Conservation status | |
Scientific classification | |
ಸಾಮ್ರಾಜ್ಯ: | animalia |
ವಿಭಾಗ: | Chordata |
ವರ್ಗ: | ಸಸ್ತನಿಗಳು |
ಗಣ: | Carnivora |
ಕುಟುಂಬ: | Felidae |
ಉಪಕುಟುಂಬ: | Felinae |
ಕುಲ: | Acinonyx |
ಪ್ರಜಾತಿ: | A. jubatus |
Binomial name | |
Acinonyx jubatus (Schreber, 1775) | |
Type species | |
Acinonyx venator Brookes, 1828 (= Felis jubata, Schreber, 1775) by monotypy | |
Subspecies | |
See text. | |
The range of the cheetah |
ಇದು ಭೂಮಿಯ ಮೇಲೆ ಅತ್ಯಂತ ವೇಗವಾಗಿ ಓಡುವ ಪ್ರಾಣಿ. ಇದರ ವೇಗವು ಕಡಿಮೆ ಸಮಯದಲ್ಲಿ 112 and 120 km/h (70 and 75 mph)[5][6] ರಷ್ಟಿದೆ. ಜೊತೆಗೆ ಇದು 460 m (1,510 ft)ರಷ್ಟು ಅಂತರವನ್ನು ಕ್ರಮಿಸುತ್ತದೆ. ಜೊತೆಗೆ ಮೂರು ನಿಮಿಷಗಳಲ್ಲಿ ವೇಗವನ್ನು 0 ಯಿಂದ 103 km/h (64 mph) ಹೆಚ್ಚಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದು ಸೂಪರ್ ಕಾರ್ ಗಿಂತ ಅತ್ಯಂತ ವೇಗವಾಗಿ ಚಲಿಸುತ್ತದೆ.[7] ಚೀತಾದ ಬಗೆಗಿನ ಇತ್ತೀಚಿನ ಸಂಶೋಧನೆಗಳು ಅದನ್ನು ಭೂಮಿಯ ಮೇಲೆ ಅತ್ಯಂತ ವೇಗವಾಗಿ ಓಡುವ ಪ್ರಾಣಿ ಎಂಬುದನ್ನು ಖಚಿತ ಪಡಿಸುತ್ತವೆ.[8]
"ಚೀತಾ" ಎಂಬ ಪದವು ಸಂಸ್ಕೃತ ಪದದಿಂದ ವ್ಯುತ್ಪತ್ತಿ ಹೊಂದಿದೆcitrakāyaḥ . ಇದು "ವಿವಿಧವರ್ಣದ ಶರೀರ" ಎಂಬ ಅರ್ಥವನ್ನು ನೀಡುತ್ತದೆ. ಈ ಪದದ ಮೂಲಕ ಹಿಂದಿಯ चीता ಚೀತಾ ಎಂಬ ಪದವೂ ಸಹ ಹುಟ್ಟಿ ಬಂದಿದೆ.[9]