ಚೀನಾದ ಭೌಗೋಳಿಕತೆ
From Wikipedia, the free encyclopedia
ಚೀನಾ ದೊಡ್ಡ ಭೌಗೋಳಿಕ ವೈವಿಧ್ಯತೆಯನ್ನು ಹೊಂದಿದೆ . ದೇಶದ ಪೂರ್ವ ಬಯಲು ಪ್ರದೇಶ ಮತ್ತು ದಕ್ಷಿಣ ಕರಾವಳಿಗಳು ಫಲವತ್ತಾದ ತಗ್ಗು ಪ್ರದೇಶ ಮತ್ತು ತಪ್ಪಲಿನಲ್ಲಿವೆ. ಅವು ಚೀನಾದಲ್ಲಿ ಹೆಚ್ಚಿನ ಕೃಷಿ ಉತ್ಪಾದನೆ ಮತ್ತು ಮಾನವ ಜನಸಂಖ್ಯೆಯ ಸ್ಥಳವಾಗಿದೆ. ದೇಶದ ದಕ್ಷಿಣ ಪ್ರದೇಶಗಳು ( ಯಾಂಗ್ಟ್ಜಿ ನದಿಯ ದಕ್ಷಿಣ) ಗುಡ್ಡಗಾಡು ಮತ್ತು ಪರ್ವತ ಪ್ರದೇಶಗಳನ್ನು ಒಳಗೊಂಡಿದೆ. ದೇಶದ ಪಶ್ಚಿಮ ಮತ್ತು ಉತ್ತರದ ಪ್ರದೇಶಗಳನ್ನು ಗುಳಿಬಿದ್ದ (ಹೂತು ಹೋಗಿರುವ) ಜಲಾನಯನ ಪ್ರದೇಶಗಳು (ಉದಾಹರಣೆಗೆ ಗೋಬಿ ಮತ್ತು ತಾಕ್ಲಾ ಮಾಕಾನ್ ), ಪ್ರಸ್ಥಭೂಮಿಗಳು ಮತ್ತು ಅತ್ಯುನ್ನತವಾದ ಪುಂಜಕಗಳು ಆವರಿಸಿಕೊಂಡಿವೆ . ಇದು ಭೂಮಿಯ ಮೇಲಿನ ಅತಿ ಎತ್ತರದ ಪ್ರಸ್ಥಭೂಮಿ , ಟಿಬೆಟಿಯನ್ ಪ್ರಸ್ಥಭೂಮಿಯ ಭಾಗವನ್ನು ಹೊಂದಿದೆ ಮತ್ತು ಅತಿ ಕಡಿಮೆ ಕೃಷಿ ಸಾಮರ್ಥ್ಯ ಮತ್ತು ಜನಸಂಖ್ಯೆಯನ್ನು ಹೊಂದಿದೆ
ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಸುಮಾರು 9,600,000 km2 (3,700,000 sq mi) ಪ್ರದೇಶವನ್ನು ಹೊಂದಿದೆ . ಗಡಿ ವಿವಾದಗಳಿಂದ ನಿಖರವಾದ ಭೂ ಪ್ರದೇಶವನ್ನು, ಮುಖ್ಯವಾಗಿ ತೈವಾನ್, ಅಕ್ಸಾಯ್ ಚಿನ್, ಟ್ರಾನ್ಸ್-ಕರಕೋರಮ್ ಟ್ರ್ಯಾಕ್ಟ್ ಮತ್ತು ದಕ್ಷಿಣ ಟಿಬೆಟ್ ಬಗ್ಗೆ ಕೆಲವೊಮ್ಮೆ ಪ್ರಶ್ನಿಸಲಾಗುತ್ತದೆ . ಸಿಐಎಯ ದಿ ವರ್ಲ್ಡ್ ಫ್ಯಾಕ್ಟ್ಬುಕ್ ಪ್ರಕಾರ ಚೀನಾದ ವಿಸ್ತೀರ್ಣ 9,596,960 km2 (3,705,410 sq mi) ಚೀನಾ ವಿಶ್ವದ ಮೂರನೇ ಅಥವಾ ನಾಲ್ಕನೇ ಅತಿದೊಡ್ಡ ದೇಶವಾಗಿದ್ದು, ಅಮೆರಿಕ ದೇಶದ ವಿಸ್ತೀರ್ಣವನ್ನು ಹೇಗೆ ಅಳೆಯಲಾಗುತ್ತದೆ ಎಂಬುದರ ಆಧಾರದ ಮೇಲೆ ಚೀನಾದ ಭೌಗೋಳಿಕ ಗಾತ್ರವನ್ನು ನಿರ್ಧರಿಸಲಾಗುತ್ತದೆ. ಚೀನಾ ಯುನೈಟೆಡ್ ಸ್ಟೇಟ್ಸ್ ಗಿಂತ ಸ್ವಲ್ಪ ದೊಡ್ಡ ಅಥವಾ ಸ್ವಲ್ಪ ಚಿಕ್ಕದಾಗಿದೆ. ಎರಡೂ ದೇಶಗಳು ರಷ್ಯಾ ಮತ್ತು ಕೆನಡಾಕ್ಕಿಂತ ಚಿಕ್ಕದಾಗಿವೆ ಮತ್ತು ಬ್ರೆಜಿಲ್ಗಿಂತ ದೊಡ್ಡದಾಗಿವೆ.