ಟಾಮ್ ಕ್ರೂಸ್
From Wikipedia, the free encyclopedia
ಥಾಮಸ್ ಕ್ರೂಸ್ ಮಪೋಥರ್ IV ( ಜನನ ಜುಲೈ ೩, ೧೯೬೨) ಟಾಮ್ ಕ್ರೂಸ್ ಎಂದೇ ಜನಪ್ರಿಯರಾಗಿರುವ ಅವರೊಬ್ಬ ಅಮೆರಿಕನ್ ನಟ ಮತ್ತು ಚಲನಚಿತ್ರ ನಿರ್ಮಾಪಕ. ಅವರನ್ನು ಫೋರ್ಬ್ಸ್ ಪತ್ರಿಕೆ ೨೦೦೬ರಲ್ಲಿ ವಿಶ್ವದ ಅತಿ ಹೆಚ್ಚು ವೈಭವೀಕೃತ ವ್ಯಕ್ತಿ ಎಂದು ಗುರುತಿಸಿತ್ತು.[1] ಅವರು ಮೂರು ಅಕಾಡಮಿ ಪ್ರಶಸ್ತಿಗಳಿಗೆ ನಾಮನಿರ್ದೇಶಿಸಲ್ಪಟ್ಟಿದ್ದರು ಮತ್ತು ಮೂರು ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಅವರು 1983ರ ರಿಸ್ಕಿ ಬ್ಯುಸಿನೆಸ್ [2] ಚಲನಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.ಇದರಲ್ಲಿಯ ಇವರ ಅಭಿನಯವನ್ನು "A ಜನರೇಷನ್ X ಕ್ಲಾಸಿಕ್ ಮತ್ತು ವೃತ್ತಿ-ಸುಧಾರಕ" ಗುಣಗಳಿಂದ ಕೂಡಿದೆಎಂದು ಕೊಂಡಾಡಲಾಗಿದೆ.[3] 1986ರಲ್ಲಿ ಜನಪ್ರಿಯ ಮತ್ತು ಯಶಸ್ವಿ ಗಳಿಕೆ ಕಂಡ ಟಾಪ್ ಗನ್ ಚಲನಚಿತ್ರದಲ್ಲಿ ನೌಕಾದಳದ ವಿಮಾನ ಚಾಲಕನ ಪಾತ್ರದಲ್ಲಿ ನಟಿಸಿದ ನಂತರ, ಕ್ರೂಸ್ 1990 ಮತ್ತು 2000ನೆ ದಶಕದಲ್ಲಿ ತೆರೆಕಂಡ 'ಮಿಷನ್: ಇಂಪಾಸಿಬಲ್' ಎಂಬ ಸಾಹಸ ಪ್ರಧಾನ ಚಲನಚಿತ್ರ ಸರಣಿಯಲ್ಲಿ ಬೇಹುಗಾರನಾಗಿ ನಟಿಸುವುದರ ಮೂಲಕ ಇದೇ ಶೈಲಿಯನ್ನು ಮುಂದುವರಿಸಿದ್ದರು. ಈ ನಾಯಕನ ಪಾತ್ರಗಳ ಜೊತೆಗೆ, ಅವರು ಮಗ್ನೋಲಿಯಾ (1999) ಚಲನಚಿತ್ರದಲ್ಲಿ ಸ್ತ್ರೀದ್ವೇಷಿ ಪುರುಷ ಗುರು ಪಾತ್ರದಲ್ಲಿ ಮತ್ತು ಮೈಕಲ್ ಮಾನ್ ಕೊಲ್ಯಾಟರಲ್ (2004) ಅಪರಾಧೀ ಕೃತ್ಯದ ರೋಮಾಂಚಕ ಚಲನಚಿತ್ರದಲ್ಲಿ ಶಾಂತ ಮತ್ತು ಮಾನಸಿಕ ಅಸಮತೋಲನಗೊಂಡ ಕೊಲೆಗಾರನ ಪಾತ್ರದಲ್ಲಿ ಸಹ ನಟಿಸಿದ್ದಾರೆ.
ಟಾಮ್ ಕ್ರೂಸ್ | |
---|---|
ಜನನ | ಥಾಮಸ್ ಕ್ರೂಸ್ ಮಾಪೊಥರ್ (1962-07-03) ಜುಲೈ ೩, ೧೯೬೨ (ವಯಸ್ಸು ೬೧) ಸಿರಾಕಸ್, ನ್ಯೂಯಾರ್ಕ್, ಅಮೇರಿಕಾ |
ವೃತ್ತಿs |
|
Years active | ೧೯೮೦ರಿಂದ |
ಸಂಗಾತಿs | |
ಮಕ್ಕಳು | ೩ |
Relatives | William Mapother (cousin) |
Awards | ೩ ಗೋಲ್ಡನ್ ಗ್ಲೋಬ್ ಪುರಸ್ಕಾರ, ೪ ಬಾರಿ ಆಸ್ಕರ್ ನಾಮನಿರ್ದೇಶನ ಸೇರಿದಂತೆ ಹಲವು ಪುರಸ್ಕಾರಗಳು |
ಜಾಲತಾಣ | tomcruise |
Signature | |
ಶತಕೋಟಿ-ಡಾಲರ್ ಗಿಟ್ಟಿಸಬಲ್ಲ ಯಶಸ್ಸಗೆ ಖಾತ್ರಿ ನೀಡಬಲ್ಲ ಚಲನಚಿತ್ರ ನಿರ್ಮಾಣ ಸಾಮರ್ಥ್ಯವನ್ನು ಹೊಂದಿರುವ ಕೆಲವೇ ನಿರ್ಮಾಪಕರಲ್ಲಿ (ಇತರರಾದ ಜಾರ್ಜ್ ಲುಕಾಸ್, ಸ್ಟೀವನ್ ಸ್ಪೀಲ್ಬರ್ಗ್ ಮತ್ತು ಜೆರ್ರಿ ಬ್ರುಕೀಮರ್) ಕ್ರೂಸ್ರವರು ಒಬ್ಬರು. ಎಂದು ಹಾಲಿವುಡ್ ಪತ್ರಕರ್ತರಾದ ಎಡ್ವರ್ಡ್ ಜಾಯ್ ಎಪ್ಸ್ಟೀನ್2005ರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.[4] ಕ್ರೂಸ್ ನಿರ್ಮಾಪಕರಾಗಿ ಮತ್ತು ವೇಗ್ನರ್ ಮುಖ್ಯ ಕಾರ್ಯನಿರ್ವಾಹಕರಾಗಿ ಯುನೈಟೆಡ್ ಆರ್ಟಿಸ್ಟ್ಸ್ ಫಿಲ್ಮ್ ಸ್ಟುಡಿಯೊದ [5] ಅಧಿಕಾರವನ್ನು 2005ರಿಂದ ವಹಿಸಿಕೊಂಡರು. ಸೈಂಟಾಲಜಿಯ ಚರ್ಚ್ಗೆ ಕ್ರೂಸ್ ವಿವಾದಾತ್ಮಕ ಬೆಂಬಲ ನೀಡಿದ್ದು ಮತ್ತು ಅದರ ಅನುಯಾಯಿಯಾಗಿದ್ದುದೂ ಅವರಿಗೆ ಮತ್ತಷ್ಟು ಹೆಸರು ತಂದಿತು.[6]