ದೆಹಲಿ
ಭಾರತದ ರಾಜಧಾನಿ / From Wikipedia, the free encyclopedia
ದೆಹಲಿ ಸ್ಥಳೀಯವಾಗಿ ದಿಲ್ಲಿ ಎಂದೇ ಹೆಸರಾಗಿರುವ (ಹಿಂದಿ:दिल्ली ಪಂಜಾಬಿ:ਦਿੱਲੀ ಉರ್ದು: دلّی) ಮತ್ತು ಅಧಿಕೃತವಾಗಿ ನ್ಯಾಷನಲ್ ಕ್ಯಾಪಿಟಲ್ ಟೆರಿಟರಿ ಆಫ್ ಡೆಲ್ಲಿ (ಎನ್.ಸಿ.ಟಿ) ಎಂದು ಕರೆಯಲ್ಪಡುವ ರಾಷ್ಟ್ರೀಯ ರಾಜಧಾನಿ ನಗರವು ಪ್ರಾದೇಶಿಕವಾಗಿ ಭಾರತದಲ್ಲೇ ಅತಿ ದೊಡ್ಡ ಮಹಾನಗರ ಮತ್ತು ಜನಸಂಖ್ಯೆಯಲ್ಲಿ ಎರಡನೇ ಅತಿ ದೊಡ್ಡ ಮಹಾನಗರವಾಗಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ೧೨.೨೫ ದಶಲಕ್ಷಕ್ಕೂ ಮಿಕ್ಕಿ ನಿವಾಸಿಗಳು ಮತ್ತು ೧೫.೯ ದಶಲಕ್ಷ ನಗರವಾಸಿಗಳನ್ನು ಹೊಂದಿರುವ ದೆಹಲಿ ಜನಸಂಖ್ಯೆಯಲ್ಲಿ ಜಗತ್ತಿನಲ್ಲೇ ಎಂಟನೇ ದೊಡ್ಡ ನಗರವಾಗಿದೆ. (ಇದರಲ್ಲಿ ನೋಯ್ಡಾ, ಗುರ್ಗಾಂವ್, ಫರಿದಾಬಾದ್ ಮತ್ತು ಘಜೀಯಾಬಾದ್ ಸೇರಿವೆ).[15]
ದೆಹಲಿ | |
---|---|
ಕೇಂದ್ರಾಡಳಿತ ಪ್ರದೇಶ ಮತ್ತು ನಗರ | |
ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ | |
Coordinates: 28°36′36″N 77°13′48″E | |
ಪ್ರದೇಶ | ಉತ್ತರ ಭಾರತ |
ರಾಜಧಾನಿ-ದೆಹಲಿ ಸುಲ್ತಾನರು | ೧೨೧೪ |
ರಾಜಧಾನಿ-ಮೊಘಲ್ ರಾಜವಂಶ | ೧೫೨೬ ನಡುವಿನ ಸ್ವಲ್ಪ ಸಮಯ ಆಗ್ರಾ |
ನವ ದೆಹಲಿ ಬ್ರಿಟೀಷ್ ಭಾರತದ ರಾಜಧಾನಿ | ೧೨ ಡಿಸೆಂಬರ್ ೧೯೧೧ |
ನವ ದೆಹಲಿ-ರಾಜಪ್ರಭುತ್ವದ ರಾಜಧಾನಿ | ೧೯೪೭ |
ನವ ದೆಹಲಿ-ಭಾರತ ಗಣರಾಜ್ಯದ ರಾಜಧಾನಿಯಾಗಿ | ೨೬ ಜನವರಿ ೧೯೫೦ |
ಕೇಂದ್ರಾಡಳಿತ ಪ್ರದೇಶ[1][2] | ೧ ನವಂಬರ್ ೧೯೫೬ |
ರಾಷ್ಟ್ರೀಯ ರಾಜಧಾನಿ ಪ್ರದೇಶ[3] | ೧ ಫೆಬ್ರುವರಿ ೧೯೯೨ |
ರಾಜಧಾನಿ | ನವದೆಹಲಿ |
ಜಿಲ್ಲೆಗಳು | ೧೧ |
Government | |
• Body | ದೆಹಲಿ ಸರ್ಕಾರ |
• ಲೆಫ್ಟಿನೆಂಟ್ ಗವರ್ನರ್ | ಅನಿಲ್ ಬೈಜಲ್, ಭಾ.ಆ.ಸೇ[4] |
• ಮುಖ್ಯಮಂತ್ರಿ | ಅರವಿಂದ್ ಕೇಜ್ರಿವಾಲ್ (ಆಮ್ ಆದ್ಮಿ ಪಾರ್ಟಿ) |
• ಉಪ ಮು.ಮ. | ಖಾಲಿ ಇದೆ (ಫೆಬ್ರವರಿ ೨೦೨೩ರ ನಂತರ) |
• ವಿಧಾನಸಭೆ | ಏಕಸದಸ್ಯ (೭೦ ಸೀಟುಗಳು) |
• ಸಂಸದೀಯ ಕ್ಷೇತ್ರಗಳು | |
Area | |
• ಕೇಂದ್ರಾಡಳಿತ ಪ್ರದೇಶಗಳು | ೧,೪೮೪ km೨ (೫೭೩ sq mi) |
• Water | ೧೮ km೨ (೬.೯ sq mi) |
• Rank | ೩೧ |
Elevation | ೨೦೦–೨೫೦ m (೬೫೦–೮೨೦ ft) |
Population (2011)[6] | |
• ಕೇಂದ್ರಾಡಳಿತ ಪ್ರದೇಶಗಳು | ೧,೬೭,೮೭,೯೪೧ |
• Density | ೧೧,೩೧೨/km೨ (೨೯,೨೯೮/sq mi) |
• Urban | ೧,೬೩,೪೯,೮೩೧ (೨nd) |
• Megacity | ೧,೧೦,೩೪,೫೫೫ (೨nd) |
• Metro (2016) | ೨,೬೪,೫೪,೦೦೦ (೧st) |
ಭಾಷೆಗಳು | |
• ಅಧೀಕೃತ | |
• ಇತರೆ | |
ಜಿಡಿಪಿ (೨೦೧೮–೧೯) | |
• Nominal | |
• Nominal Per Capita | ₹೩,೬೫,೫೨೯ (ಯುಎಸ್$೮,೧೧೪.೭೪) |
• Metro GDP/PPP (2016) | $370 billion[11] |
Time zone | UTC+5.30 (IST) |
ಪಿನ್[12] | ೧೧೦೦೦೦–೧೧೦೦೯೯ |
Area code | +91 11 |
ISO 3166 code | IN-DL |
Vehicle registration | DL |
HDI (೨೦೧೮) | ೦.೭೪೬[13] (High) · 5th |
ಸಾಕ್ಷರತೆ (೨೦೧೧) | ೮೬.೨೧ ಶೇ.[14] |
ಲಿಂಗಾನುಪಾತ (೨೦೧೧) | ೮೬೮ ♀/1000 ♂[14] |
Website | delhi |
NCTಗೆ ಸಮೀಪವಿರುವ ಕೆಲವು ನಗರಗಳು ಮತ್ತು NCT ವ್ಯಾಪ್ತಿಯಲ್ಲಿ ಬರುವ ಭಾರತದ ರಾಜಧಾನಿ ನವ ದೆಹಲಿಯನ್ನೂ ಆಗಿಂದಾಗ್ಗೆ ದೆಹಲಿಯೆಂದೇ ಕರೆಯುವುದುಂಟು. NCT ಎನ್ನುವುದು ಒಕ್ಕೂಟ ವ್ಯವಸ್ಥೆಯ ಕೇಂದ್ರಾಡಳಿತ ಪ್ರದೇಶ.
ದೆಹಲಿಯು ಯಮುನಾ ನದಿಯ ದಂಡೆಯಲ್ಲಿದ್ದು, ಕನಿಷ್ಟ ಪಕ್ಷ ಕ್ರಿ.ಪೂ 6ನೇ ಶತಮಾನದಿಂದಲೇ ನಿರಂತರವಾಗಿ ವಾಸಕ್ಕೆ ಬಳಕೆಯಾಗಿದೆ.[16]
ದೆಹಲಿ ಸುಲ್ತಾನರು ತಲೆ ಎತ್ತಿದ ನಂತರ, ದೆಹಲಿಯು ರಾಜಕೀಯ, ಸಾಂಸ್ಕೃತಿಕ ಮತ್ತು ವಾಣಿಜ್ಯ ನಗರವಾಗಿ ಪ್ರಾಮುಖ್ಯತೆಗೆ ಬಂದಿತು, ಜೊತೆಗೆ ವಾಯವ್ಯ ಭಾರತ ಮತ್ತು ಇಂಡೋ-ಗಂಗಾ ಬಯಲು ಪ್ರದೇಶಗಳ ಮಧ್ಯೆ ವ್ಯಾಪಾರ ಮಾರ್ಗಗಳೂ ಬೆಳೆದವು.[17][18]
ಪ್ರಾಚೀನ ಮತ್ತು ಮದ್ಯಕಾಲೀನದ ಹಲವು ಸ್ಮಾರಕಗಳು, ಪುರಾತತ್ವ ಸ್ಥಳಗಳು ಹಾಗೂ ಹೀಗೆ ಇನ್ನೂ ಹಲವು ದೆಹಲಿಯಲ್ಲಿವೆ. ೧೬೩೯ರಲ್ಲಿ ದೆಹಲಿಯನ್ನು ಆಳಿದ ಮೊಘಲ್ ಚಕ್ರವರ್ತಿ ಷಹಜಹಾನ್ ಹೊಸ ಸುಭದ್ರ ನಗರವನ್ನು ನಿರ್ಮಿಸಿದನು, ಅದು ೧೬೪೯ ರಿಂದ ೧೮೫೭ರವರೆಗೆ ಮೊಘಲ್ ಸಾಮ್ರಾಜ್ಯದ ರಾಜಧಾನಿಯಾಗಿತ್ತು.[19][20]
ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯು 18ನೇ ಮತ್ತು 19ನೇ ಶತಮಾನಗಳಲ್ಲಿ ಭಾರತದ ಹೆಚ್ಚಿನ ಪ್ರದೇಶಗಳ ಮೇಲೆ ನಿಯಂತ್ರಣವನ್ನು ಸಾಧಿಸಿದ ನಂತರ, ೧೯೧೧ರಲ್ಲಿ ಜಾರ್ಜ್ ವಿ ದೆಹಲಿಯನ್ನೇ ರಾಜಧಾನಿಯೆಂದು ಮತ್ತೆ ಘೋಷಿಸುವವರೆಗೆ ಕಂಪೆನಿ ಆಡಳಿತ ಮತ್ತು ಬ್ರಿಟೀಷ್ ರಾಜ್ಯ ಹೀಗೆ ಎರಡಕ್ಕೂ ಕಲ್ಕತ್ತಾವೇ ರಾಜಧಾನಿಯಾಗಿತ್ತು.
1920ರ ದಶಕದಲ್ಲಿ ಹಳೇ ನಗರದ ದಕ್ಷಿಣಕ್ಕೆ ಹೊಸ ರಾಜಧಾನಿ ನಗರ ನವ ದೆಹಲಿಯನ್ನು ನಿರ್ಮಿಸಲಾಯಿತು.[21]
೧೯೪೭ರಲ್ಲಿ ಭಾರತಕ್ಕೆ ಬ್ರಿಟೀಷ್ ಆಡಳಿತದಿಂದ ಸ್ವಾತಂತ್ರ್ಯ್ಯ ಸಿಕ್ಕಾಗ, ನವದೆಹಲಿಯನ್ನು ದೇಶದ ರಾಜಧಾನಿ ಮತ್ತು ಸರ್ಕಾರ ಪೀಠವೆಂದು ಘೋಷಿಸಲಾಯಿತು. ಭಾರತದ ಸಂಸತ್ತು ಸೇರಿದಂತೆ ಸಂಯುಕ್ತ ಸರ್ಕಾರದ ಹಲವು ಪ್ರಮುಖ ಕಛೇರಿಗಳಿಗೆ ನವ ದೆಹಲಿ ಮನೆಯಾಗಿದೆ.
ದೇಶದೆಲ್ಲೆಡೆಯಿಂದ ಬರುವ ವಲಸಿಗರಿಂದಾಗಿ ದೆಹಲಿ ಕಾಸ್ಮೊಪಾಲಿಟನ್ ಮಹಾನಗರವಾಗಿ ಬೆಳೆದಿದೆ. ತುಲನಾತ್ಮಕವಾಗಿ ಹೆಚ್ಚು ಆದಾಯವುಳ್ಳ ಸರಾಸರಿ ಜನಸಂಖ್ಯೆ, ತ್ವರಿತ ಅಭಿವೃದ್ಧಿ ಮತ್ತು ನಗರೀಕರಣದಿಂದಾಗಿ ಇಂದು ದೆಹಲಿ ಬದಲಾಗಿದೆ.[22]
ದೆಹಲಿಯಿಂದು ಭಾರತದ ಪ್ರಮುಖ ಸಾಂಸ್ಕೃತಿಕ, ರಾಜಕೀಯ ಮತ್ತು ವಾಣಿಜ್ಯ ಕೇಂದ್ರ. ಜಗತ್ತಿನಲ್ಲಿ ಅತೀ ಹೆಚ್ಚು ಜನರು ಇರುವ ನಗರಗಳಲ್ಲಿ ದೆಹಲಿ ಎರಡನೇ ಸ್ಥಾನ ಪಡೆದುಕೊಂಡಿದೆ. 1990ರಿಂದ 2014ರ ಅವಧಿಯಲ್ಲಿ ಜನಸಂಖ್ಯೆ ದ್ವಿಗುಣಗೊಂಡಿದ್ದು ಈಗಿನ ದೆಹಲಿಯ ಜನಸಂಖ್ಯೆ 2.5 ಕೋಟಿ ಎಂದು ವಿಶ್ವ ಸಂಸ್ಥೆಯ ವರದಿ ಹೇಳಿದೆ. ಮೊದಲ ಸ್ಥಾನದಲ್ಲಿ ಜಪಾನ್ ರಾಜಧಾನಿ ಟೋಕಿಯೊ (೩.೭೮ ಕೋಟಿ) ಇದೆ.(೧೨-೭-೨೦೧೪ ಪ್ರಜಾವಾಣಿ ೧೨-೭-೨೦೧೪)