ನೆವಾಡಾ
From Wikipedia, the free encyclopedia
ನೆವಾಡಾ /[unsupported input]nəˈvædə/ ರಾಜ್ಯವು ಅಮೇರಿಕಾದ ಪಶ್ಚಿಮ ಮತ್ತು ನೈಋತ್ಯ ಭಾಗದಲ್ಲಿರುವ ರಾಜ್ಯವಾಗಿದೆ. ನೆವಾಡಾ, ಮೌಂಟೇನ್ ರಾಜ್ಯ ಪ್ರದೇಶಕ್ಕೂ ಸೇರಿದುದಾಗಿದೆ. ಕಾರ್ಸನ್ ಸಿಟಿಯು ಇದರ ರಾಜಧಾನಿಯಾಗಿದ್ದು, ಲಾಸ್ ವೇಗಾಸ್ ನಲ್ಲಿಯೇ ಅತ್ಯಂತ ದೊಡ್ಡ ನಗರವಾಗಿದೆ. ಸಿಲ್ವರ್ ಸ್ಟೇಟ್ ಎಂಬುದು ಇದಕ್ಕಿರುವ ಇನ್ನೊಂದು ಹೆಸರಾಗಿದ್ದು, ಅಲ್ಲಿರುವ ಅಪಾರ ಪ್ರಮಾಣದ ಬೆಳ್ಳಿ ಅದಿರಿನ ನಿಕ್ಷೇಪ ಮತ್ತು ಗಣಿಗಾರಿಕೆಯಿಂದಾಗಿ ಈ ಹೆಸರು ಬಂದಿರುವುದಾಗಿ ತಿಳಿಯುತ್ತದೆ. "ಸೇಜ್ ಬ್ರಶ್ ಸ್ಟೇಟ್" ಮತ್ತು "ಬ್ಯಾಟಲ್ ಬಾರ್ನ್ ಸ್ಟೇಟ್" ಗಳೂ ಕೂಡ ಈ ರಾಜ್ಯಕ್ಕಿರುವ ಇತರೆ ಎರಡು ಹೆಸರುಗಳಾಗಿವೆ. 1864ರಲ್ಲಿ 36ನೆಯ ಸ್ವತಂತ್ರ ರಾಜ್ಯವಾಗಿ ಕೇಂದ್ರಕ್ಕೆ ಸೇರ್ಪಡೆಯಾದ ನೆವಾಡಾ ಪ್ರದೇಶವು, ಅಮೇರಿಕಾದ ಸಿವಿಲ್ ಯುದ್ಧದ ಸಂದರ್ಭದಲ್ಲಿ ಯೂನಿಯನ್ ಕಡೆಗೆ ಹೊರಳಿದುದರ ಸಂಕೇತವಾಗಿ, ಅಲ್ಲಿನ ಧ್ವಜದಲ್ಲಿ "ಬ್ಯಾಟಲ್ ಬಾರ್ನ್" ಎಂಬ ಸಾಲು ಸದಾ ಗೋಚರಿಸುತ್ತದೆ. ಹೀಗೆ ಕೇಂದ್ರಕ್ಕೆ ಸೇರ್ಪಡೆಯಾಗುವುದಕ್ಕೂ ಮೊದಲು ಇದಕ್ಕಿದ್ದ ಹೆಸರು ಮೋರ್ಮನ್ ಸ್ಟೇಶನ್.
ನೆವಾಡಾವು ಅಲ್ಲಿನ ಏಳನೆಯ ಅತಿ ದೊಡ್ಡ ಪ್ರಾದೇಶಿಕ ರಾಜ್ಯವಾಗಿದ್ದು, ಭೌಗೋಳಿಕವಾಗಿ ದಕ್ಷಿಣದಲ್ಲಿ ಮೊಜಾವೆ ಮರುಭೂಮಿಯ ಪ್ರಾಂತ್ಯ ಮತ್ತು ಉತ್ತರದಲ್ಲಿ ಗ್ರೇಟ್ ಬೇಸಿನ್ ಪ್ರಾಂತ್ಯಗಳನ್ನು ಹೊಂದಿದೆ. ಇಡೀ ಪ್ರಾಂತ್ಯದಲ್ಲಿಯೇ ನೆವಾಡಾವು ಅತ್ಯಂತ ಶುಷ್ಕ ಪ್ರದೇಶವಾಗಿದೆ. ಕರಾರುವಕ್ಕಾಗಿ, ರಾಜ್ಯದ 86 ಪ್ರತಿಶತಃ ಪ್ರದೇಶವು ಅಮೇರಿಕಾದ ಫೆಡರಲ್ ಸರಕಾರದ ಅಧೀನಕ್ಕೆ ಒಳಪಟ್ಟಿದ್ದು, ನಾಗರೀಕ ಮತ್ತು ಮಿಲಿಟರಿಗಳೆರಡರ ವ್ಯಾಪ್ತಿಗೂ ಇದು ಸೇರಿರುತ್ತದೆ.[1] 2008ರ ಹೊತ್ತಿಗೆ ಅಲ್ಲಿ ಸುಮಾರು 2.6 ದಶಲಕ್ಷ ಜನವಸತಿ ಇದ್ದುದಾಗಿ ತಿಳಿದು ಬರುತ್ತದೆ. ಅದರಲ್ಲಿ ಸುಮಾರು 85%ರಷ್ಟು ಜನ, ನಗರಪ್ರದೇಶಗಳಾದ ಲಾಸ್ ವೇಗಾಸ್ ಮತ್ತು ರಿನೋದಲ್ಲಿ ವಾಸವಿದ್ದುದಾಗಿ ಅಂಕಿಅಂಶಗಳು ತಿಳಿಸುತ್ತವೆ.[2] ಸುಲಭ ವಿವಾಹ ಮತ್ತು ಅಷ್ಟೇ ಸುಲಭ ವಿಚ್ಚೆದನಾ ಪಧ್ಧತಿಗಳಿಗೆ ಮೊದಲು ಮಾಡಿ, ಮನರಂಜನೆ, ಕಾನೂನಿನ ಪರಿಮಿತಿಯಲ್ಲೇ ಆಡಲಾಗುವ ಜೂಜು, ಮತ್ತು ಇರುವ ಹದಿನಾರು ಕೇಂದ್ರಗಳಲ್ಲಿ ಎಂಟು ಅಧಿಕೃತ ವೇಶ್ಯಾವಾಟಿಕಾ ಕೇಂದ್ರಗಳನ್ನು ಹೊಂದಿರುವ ಪ್ರದೇಶವೆಂಬ ಹೆಗ್ಗಳಿಕೆ ನೆವಾಡಾದ್ದು.