ಬೋಯಿಂಗ್
From Wikipedia, the free encyclopedia
ಬೋಯಿಂಗ್ ಕಂಪನಿ ಯು ಒಂದು ಪ್ರಮುಖ ಎರೊಸ್ಪೇಸ್ ಮತ್ತು ರಕ್ಷಣಾ ಸಂಸ್ಥೆ, ವಾಷಿಂಗ್ಟನ್ ಸೀಟಲ್ ನಗರದಲ್ಲಿ ವಿಲಿಯಮ್ ಇ.ಬೋಯಿಂಗ್ ಅವರು ಸ್ಥಾಪಿಸಿದರು. ಬೋಯಿಂಗ್ ಹಲವು ವರ್ಷಗಳಿಂದ ವಿಸ್ತರಿಸಲ್ಪಟ್ಟಿರುವುದಲ್ಲದೇ, ಸೈಂಟ್ ಲೂಯಿಸ್ನೊಂದಿಗೆ ಮೆಕ್ ಡೊನ್ನೆಲ್ ಡೊಗ್ಲಾಸ್ನೊಂದಿಗೆ 1997ರಲ್ಲಿ ಐಕ್ಯಗೊಂಡಿತು. ಬೋಯಿಂಗ್ ಕಾರ್ಪೋರೇಟ್ ಮುಖ್ಯಕಚೇರಿಯು 2001ರಿಂದೀಚೆಗೆ ಇಲ್ಲಿನೋಯಿಸ್ನ[4] ಚಿಕಾಗೊದಲ್ಲಿದೆ. ಬೋಯಿಂಗ್ ಇದು ಬಹು ವ್ಯವಹಾರ ಘಟಕಗಳಿಂದ ಮಾಡಲ್ಪಟ್ಟಿದ್ದು, ಬೋಯಿಂಗ್ ಕಮರ್ಷಿಯಲ್ ಏರ್ಪ್ಲೇನ್ಸ್ (BCA) , ಬೋಯಿಂಗ್ ಡಿಫೆನ್ಸ್, ಸ್ಪೇಸ್ ಅಂಡ್ ಸೆಕ್ಯೂರಿಟಿ (BDS); ಎಂಜಿನಿಯರಿಂಗ್, ಕಾರ್ಯಚಟುವಟಿಕೆಗಳು ಮತ್ತು ತಂತ್ರಜಾÕನ ; ಬೋಯಿಂಗ್ ಕ್ಯಾಪಿಟಲ್; ಮತ್ತು ಬೋಯಿಂಗ್ ಸೇವಾ ಹಂಚಿಕೆಗಳ ಗುಂಪು.
ಸಂಸ್ಥೆಯ ಪ್ರಕಾರ | Public (NYSE: BA) |
---|---|
ಸ್ಥಾಪನೆ | ಸಿಯಾಟಲ್, ವಾಷಿಂಗ್ಟನ್ (1916) |
ಮುಖ್ಯ ಕಾರ್ಯಾಲಯ | ಚಿಕಾಗೋ, Illinois, US |
ಪ್ರಮುಖ ವ್ಯಕ್ತಿ(ಗಳು) | W. James McNerney, Jr., CEO James A. Bell, CFO J. Michael Luttig, General Counsel |
ಉದ್ಯಮ | Aerospace and Defense |
ಉತ್ಪನ್ನ | Commercial airliners Military aircraft Munitions Space systems Computer Services |
ಆದಾಯ | US$60.9 Billion (FY 2008)[1] |
ಆದಾಯ(ಕರ/ತೆರಿಗೆಗೆ ಮುನ್ನ) | US$3.93 Billion (FY 2008)[1] |
ನಿವ್ವಳ ಆದಾಯ | US$2.67 Billion (FY 2008)[1] |
ಒಟ್ಟು ಆಸ್ತಿ | US$53.8 Billion (FY 2008)[2] |
ಒಟ್ಟು ಪಾಲು ಬಂಡವಾಳ | US$-1.29 Billion (FY 2008)[2] |
ಉದ್ಯೋಗಿಗಳು | 157,555 (10-31-2009)[3] |
ವಿಭಾಗಗಳು | Boeing Commercial Airplanes Boeing Defense, Space & Security Others |
ಉಪಸಂಸ್ಥೆಗಳು | Aviall, Inc. Jeppesen Boeing Aircraft Holding Company Boeing Australia Boeing Canada Boeing Defence UK Boeing Store |
ಜಾಲತಾಣ | Boeing.com |
ಬೋಯಿಂಗ್ ಇದೊಂದು ಆದಾಯದಲ್ಲಿ ಮಹತ್ತರವಾದ ಜಾಗತಿಕ ವಿಮಾನ ಉತ್ಪಾದನಾ ಸಂಸ್ಥೆಯಾಗಿದೆ, ಆರ್ಡರ್ಗಳು ಮತ್ತು ಡೆಲಿವರಿಗಳನ್ನು ನೀಡುವುದಲ್ಲದೇ, ಜಾಗತಿಕವಾಗಿ ರಕ್ಷಣಾ ಸಂಬಂಧಿ ಆದಾಯದ ಮೂರನೇ ಅತ್ಯಂತ ದೊಡ್ಡ ಏರೋಸ್ಪೇಸ್ ಮತ್ತು ಡಿಫೆನ್ಸ್ ಕಾಂಟ್ರಾಕ್ಟರ್ ಇದಾಗಿದೆ.[5] ಬೋಯಿಂಗ್ ಇದು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿಯೇ ಅತ್ಯಂತ ದೊಡ್ಡ ರಫ್ತು ಮಾಡುವ ಸಂಸ್ಥೆಯಾಗಿದೆ.[6] ಅದರ ಸ್ಟಾಕ್ ಡೊ ಜೋನ್ಸ್ ಕೈಗಾರಿಕೆಗಳ ಸರಾಸರಿಯ ಭಾಗವಾಗಿದೆ.