ಮಲಾಲ ಯೂಸಫ್ ಝಾಯಿ
From Wikipedia, the free encyclopedia
'ಮಲಾಲ ಯೂಸಫ್ ಝಾಯಿ',(ಜ: ೧೨ ಜುಲೈ, ೧೯೯೭)[1] ಪಾಕಿಸ್ತಾನದ ಖೈಬರ್ ಪಖ್ತೂನ್ಖ್ವಾ ಪ್ರಾಂತ್ಯದ 'ಸ್ವಾತ್ ಜಿಲ್ಲೆ'ಯ ಮಿಂಗೋರಗ್ರಾಮದ ಒಂದು ಶಾಲೆಯ ವಿದ್ಯಾರ್ಥಿನಿ ಮತ್ತು ಶಿಕ್ಷಣ ಕಾರ್ಯಕರ್ತೆ. ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ತಾಲಿಬಾನ್ ಸಂಘಟನೆಯು ನಿಷೇಧಿಸಿರುವ 'ಸ್ವಾತ್ ಕಣಿವೆ'ಯಲ್ಲಿನ ಹುಡುಗಿಯರ ಶಿಕ್ಷಣ, ಮತ್ತು ಮಹಿಳಾ ಹಕ್ಕುಗಳಪರ ತನ್ನ ಕ್ರಿಯಾತ್ಮಕ ಹೋರಾಟಕ್ಕಾಗಿ ಅವಳು ಹೆಸರುವಾಸಿಯಾಗಿದ್ದಾಳೆ. ೨೦೧೩ರಲ್ಲಿ ಮಲಾಲ ಸಖರೊವ್ ಪ್ರೈಜ್ ಫಾರ್ ಫ್ರೀಡಮ್ ಆಫ್ ಥಾಟ್(ಯೋಚನೆಯ ಸ್ವಾತಂತ್ರ್ಯಕ್ಕೆ ಸಖರೊವ್ ಪ್ರಶಸ್ತಿ) ದೊರಕಿತು.[2] ಇವರಿಗೆ ೨೦೧೪ರ ಸಾಲಿನ ನೋಬೆಲ್ ಶಾಂತಿ ಪ್ರಶಸ್ತಿ ಭಾರತದ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಸ್ ಸತ್ಯಾರ್ಥಿಯೊಂದಿಗೆ ನೀಡಲಾಗಿದೆ.[3]
Quick Facts ಮಲಾಲ್ ಯೂಸಫ್ ಝಾಯಿ, ಜನನ ...
ಮಲಾಲ್ ಯೂಸಫ್ ಝಾಯಿ | |
---|---|
ملاله یوسفزۍ | |
ಜನನ | ೧೨ ಜುಲೈ ೧೯೯೭ ಮಿಂಗೋರ, ಪಾಕಿಸ್ತಾನ್ |
ರಾಷ್ಟ್ರೀಯತೆ | ಪಾಕಿಸ್ತಾನಿ |
ವೃತ್ತಿ(ಗಳು) | ಮಹಿಳೆಯರ ಹಕ್ಕುಗಳ ಬೆಂಬಲ, ಶಿಕ್ಷಣ ಕಾರ್ಯಕರ್ತೆ |
ಪೋಷಕ | ಜ಼ಿಯಯುದ್ದಿನ್ ಯೂಸಫ್ ಝಾಯಿ |
Awards | ನ್ಯಾಷನಲ್ ಯೂತ್ ಪೀಸ್ ಪ್ರೈಜ್ ಸಖರೊವ್ ಪ್ರೈಜ್ ಸಿಮೊನ್ ದೆ ಬ್ಯುವಿಯರ್ ಪ್ರೈಜ್ |
ಜಾಲತಾಣ | www |
Close