ಮೊಸಳೆ
From Wikipedia, the free encyclopedia
ಮೊಸಳೆಗಳು (ಉಪಕುಟುಂಬ ಕ್ರೊಕೊಡೈಲಿನಿ) ಆಫ್ರಿಕಾ, ಏಷ್ಯಾ, ಅಮೆರಿಕ ಮತ್ತು ಆಸ್ಟ್ರೇಲಿಯಾದಲ್ಲಿನ ಉಷ್ಣವಲಯದಾದ್ಯಂತ ವಾಸಿಸುವ ದೊಡ್ಡ ಜಲ ಸರೀಸೃಪಗಳು. ಕ್ರೊಕೊಡೈಲಿನಿಯನ್ನು ಜೈವಿಕ ಉಪಕುಟುಂಬ ಎಂದು ವರ್ಗೀಕರಿಸಲಾಗಿದೆ. ಕೆಲವೊಮ್ಮೆ ಮೊಸಳೆ ಪದವನ್ನು ಸಡಿಲವಾಗಿ ಟೋಮಿಸ್ಟೋಮಾ, ಅಲಿಗೇಟರ್ ಹಾಗೂ ಕೇಯ್ಮನ್ಗಳು (ಕುಟುಂಬ ಅಲಿಗೇಟರಿಡೀ), ಘರಿಯಾಲ್ಗಳು (ಕುಟುಂಬ ಗೇವಿಯಾಲಿಡೀ) ಸೇರಿದಂತೆ ಕ್ರೊಕೊಡೈಲಿಯಾ ಗಣದಲ್ಲಿರುವ ಎಲ್ಲ ಅಸ್ತಿತ್ವದಲ್ಲಿರುವ ಸದಸ್ಯರನ್ನು, ಮತ್ತು ಎಲ್ಲ ಇತರ ಜೀವಂತ ಹಾಗೂ ಪಳೆಯುಳಿಕೆ ಕ್ರೊಕೊಡೈಲೋಮಾರ್ಫ಼ಾವನ್ನು ಒಳಗೊಳ್ಳುವಂತೆ ಬಳಸಲಾಗುತ್ತದೆ.
ಮೊಸಳೆಗಳು Temporal range: Eocene–Holocene, 46–0 Ma PreꞒ
Ꞓ
O
S
D
C
P
T
J
K
Pg
N
| |
---|---|
ನೈಲ್ ಮೊಸಳೆ (ಕ್ರೊಕೊಡೈಲಸ್ ನಿಲೋಟಿಕಸ್) | |
ಉಪ್ಪುನೀರಿನ ಮೊಸಳೆ (ಕ್ರೋಕೊಡೈಲಸ್ ಪೋರಾಸಸ್) | |
Scientific classification | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಕಾರ್ಡೇಟಾ |
ವರ್ಗ: | ರೆಪ್ಟೀಲಿಯಾ |
ಗಣ: | ಕ್ರೊಕೊಡಿಲಿಯಾ |
ಮೇಲ್ಕುಟುಂಬ: | ಕ್ರೊಕೊಡೈಲಾಯ್ಡೀ |
ಕುಟುಂಬ: | ಕ್ರೊಕೊಡೈಲಿಡೀ Cuvier, 1807 |
Type genus | |
ಕ್ರೋಕೊಡೈಲಸ್ Laurenti, 1768 | |
ಉಪಕುಟುಂಬಗಳು | |
|
ಇವುಗಳು ಅನುಭವವಿಲ್ಲದ ಕಣ್ಣಿಗೆ ಹೋಲುವಂತೆ ಕಂಡುಬಂದರೂ, ಮೊಸಳೆಗಳು, ಅಲಿಗೇಟರ್ಗಳು ಮತ್ತು ಘರಿಯಾಲ್ ಪ್ರತ್ಯೇಕ ಜೈವಿಕ ಕುಟುಂಬಗಳಿಗೆ ಸೇರಿವೆ. ಕಿರಿದಾದ ಮೂತಿಯನ್ನು ಹೊಂದಿರುವ ಘರಿಯಾಲನ್ನು ವ್ಯತ್ಯಾಸ ಮಾಡುವುದು ಹೆಚ್ಚು ಸುಲಭ. ಆದರೆ ಮೊಸಳೆಗಳು ಮತ್ತು ಅಲಿಗೇಟರ್ಗಳಲ್ಲಿ ಆಕೃತಿ ವಿಜ್ಞಾನದ ವ್ಯತ್ಯಾಸಗಳನ್ನು ಗುರುತಿಸುವುದು ಹೆಚ್ಚು ಕಷ್ಟ. ಅತ್ಯಂತ ಸ್ಪಷ್ಟವಾದ ಬಾಹ್ಯ ಭಿನ್ನತೆಗಳು ತಲೆಯಲ್ಲಿ ಗೋಚರಿಸುತ್ತವೆ. ಮೊಸಳೆಗಳು ಹೆಚ್ಚು ಕಿರಿದಾದ ಹಾಗೂ ಉದ್ದವಾದ ತಲೆಯನ್ನು ಹೊಂದಿರುತ್ತವೆ, ಮತ್ತು ಅಲಿಗೇಟರ್ಗಳು ಹಾಗೂ ಕೇಯ್ಮನ್ಗಳಿಗೆ ಹೋಲಿಸಿದರೆ U-ಆಕಾರದ ಬದಲು V-ಆಕಾರದ ಮೂತಿಯನ್ನು ಹೊಂದಿರುತ್ತವೆ. ಮತ್ತೊಂದು ಸ್ಪಷ್ಟವಾದ ಲಕ್ಷಣವೆಂದರೆ ಮೊಸಳೆಗಳ ಮೇಲಿನ ಮತ್ತು ಕೆಳಗಿನ ದವಡೆಗಳು ಅಷ್ಟೇ ಅಗಲವಿರುತ್ತವೆ, ಮತ್ತು ಬಾಯಿಯನ್ನು ಮುಚ್ಚಿದಾಗ ಕೆಳದವಡೆಯಲ್ಲಿರುವ ಹಲ್ಲುಗಳು ಅಂಚಿನುದ್ದಕ್ಕೆ ಅಥವಾ ಮೇಲ್ದವಡೆಯ ಹೊರಗೆ ಬರುತ್ತವೆ; ಹಾಗಾಗಿ ಎಲ್ಲ ಹಲ್ಲುಗಳು ಕಾಣುತ್ತಿರುತ್ತವೆ. ಆದರೆ ಅಲಿಗೇಟರ್ ಮೇಲ್ದವಡೆಯಲ್ಲಿ ಸಣ್ಣ ತಗ್ಗುಗಳನ್ನು ಹೊಂದಿದ್ದು ಅವುಗಳಲ್ಲಿ ಕೆಳಗಿನ ಹಲ್ಲುಗಳು ಸರಿಕೂಡುತ್ತವೆ. ಜೊತೆಗೆ ಮೊಸಳೆಯು ಬಾಯಿ ಮುಚ್ಚಿದಾಗ, ಕೆಳದವಡೆಯಲ್ಲಿನ ದೊಡ್ಡ ನಾಲ್ಕನೇ ಹಲ್ಲು ಮೇಲ್ದವಡೆಯಲ್ಲಿನ ಒಂದು ಸಂಕೋಚನದಲ್ಲಿ ಸರಿಕೂಡುತ್ತದೆ. ವ್ಯತ್ಯಾಸ ಮಾಡಲು ಕಷ್ಟವಾದ ನಮೂನೆಗಳಿಗೆ, ಪ್ರಭೇದವು ಯಾವ ಕುಟುಂಬಕ್ಕೆ ಸೇರಿದೆ ಎಂದು ವ್ಯಾಖ್ಯಾನಿಸಲು ಚಾಚಿಕೊಂಡಿರುವ ಹಲ್ಲು ಅತ್ಯಂತ ವಿಶ್ವಾಸಾರ್ಹವಾದ ಲಕ್ಷಣವಾಗಿದೆ.[1] ಮೊಸಳೆಗಳು ಹಿಂದಿನ ಪಾದಗಳ ಕಾಲ್ಬೆರಳುಗಳಲ್ಲಿ ಹೆಚ್ಚಿನ ಅಂಗಾಂಶ ಪೊರೆಯನ್ನು ಹೊಂದಿರುತ್ತವೆ ಮತ್ತು ಉಪ್ಪನ್ನು ಸೋಸಿ ಹೊರಹಾಕಲು ವಿಶೇಷೀಕೃತ ಲವಣ ಗ್ರಂಥಿಗಳಿರುವುದರಿಂದ ಉಪ್ಪು ನೀರನ್ನು ಹೆಚ್ಚು ಉತ್ತಮವಾಗಿ ಸಹಿಸಿಕೊಳ್ಳಬಲ್ಲವು. ಇವು ಅಲಿಗೇಟರ್ಗಳಲ್ಲಿ ಇದ್ದರೂ ಕೆಲಸ ಮಾಡುವುದಿಲ್ಲ. ಈ ಗಣದ ಇತರ ಪ್ರಾಣಿಗಳಿಗೆ ಹೋಲಿಸಿದರೆ ಮೊಸಳೆಗಳು ಹೆಚ್ಚಿನ ಮಟ್ಟದಲ್ಲಿ ಆಕ್ರಮಣಶೀಲವಾಗಿರುತ್ತವೆ.[2]