ಮ್ಯಾಕ್ಡೊನಾಲ್ಡ್ಸ್ (ಪಾಸ್ಟ್ಫುಡ್ ರೆಸ್ಟೋರಂಟ್)
From Wikipedia, the free encyclopedia
ಮ್ಯಾಕ್ಡೊನಾಲ್ಡ್ಸ್ ಕಾರ್ಪೋರೇಶನ್ NYSE: MCD ಇದು, ಪ್ರತಿದಿನ ೫೮ ಮಿಲಿಯನ್ ಗಿರಾಕಿಗಳಿಗೆ ಸೇವೆ ಸಲ್ಲಿಸುತ್ತಿರುವ ಜಗತ್ತಿನ ಹ್ಯಾಂಬರ್ಗರ್ ಪಾಸ್ಟ್ಫುಡ್ ರೆಸ್ಟೋರಂಟ್ಗಳ ದೊಡ್ಡ ಸಮೂಹವಾಗಿದೆ.[5] ಇದರ ಸಿಗ್ನೇಚರ್ ರೆಸ್ಟೊರೆಂಟ್ ಸಮೂಹಕ್ಕೆ ಹೆಚ್ಚುವರಿಯಾಗಿ ಮ್ಯಾಕ್ಡೊನಾಲ್ಡ್ಸ್ ಕಾರ್ಪೋರೇಶನ್, ೨೦೦೮ ರ ವರೆಗೆ ಪ್ರೆಟ್ ಎ ಮ್ಯಾಂಗರ್ನಲ್ಲಿ ಅಲ್ಪ ಪಾಲುದಾರಿಕೆ ಹೊಂದಿತ್ತು ಮತ್ತು ೨೦೦೬[6] ರ ವರೆಗೆ ಚಿಪೋಟ್ಲ್ ಮೆಕ್ಸಿಕನ್ ಗ್ರಿಲ್ನ ಪ್ರಧಾನ ಹೂಡಿಕೆದಾರರಾಗಿತ್ತು. ಮತ್ತು ೨೦೦೭ ರ ಹೊತ್ತಿಗೆ ಬೋಸ್ಟನ್ ಮಾರುಕಟ್ಟೆಯಲ್ಲಿನ ರೆಸ್ಟೋರಂಟ್ ಸಮೂಹಗಳ ಒಡೆತನ ಹೊಂದಿತು.[7]
ಸಂಸ್ಥೆಯ ಪ್ರಕಾರ | Public |
---|---|
ಸ್ಥಾಪನೆ | May 15, 1940 in San Bernardino, ಕ್ಯಾಲಿಫೊರ್ನಿಯ; McDonald's Corporation, April 15, 1955 in Des Plaines, Illinois |
ಸಂಸ್ಥಾಪಕ(ರು) | Richard and Maurice McDonald; Ray Kroc (Corporation). |
ಮುಖ್ಯ ಕಾರ್ಯಾಲಯ | Oak Brook, Illinois, U.S. |
ಕಾರ್ಯಸ್ಥಳಗಳ ಸಂಖ್ಯೆ | 35,000+ worldwide[1] |
ವ್ಯಾಪ್ತಿ ಪ್ರದೇಶ | Worldwide |
ಪ್ರಮುಖ ವ್ಯಕ್ತಿ(ಗಳು) | Andrew J. McKenna (Chairman) Don Thompson (President and CEO) |
ಉದ್ಯಮ | Restaurants |
ಉತ್ಪನ್ನ | Fast food (hamburgers • chicken • french fries • soft drinks • coffee • milkshakes • salads • desserts • breakfast) |
ಆದಾಯ | |
ಆದಾಯ(ಕರ/ತೆರಿಗೆಗೆ ಮುನ್ನ) | |
ನಿವ್ವಳ ಆದಾಯ | |
ಒಟ್ಟು ಆಸ್ತಿ | |
ಒಟ್ಟು ಪಾಲು ಬಂಡವಾಳ | |
ಉದ್ಯೋಗಿಗಳು | 440,000 (2013) [4] |
ಜಾಲತಾಣ | Global Corporate Website |
ಮ್ಯಾಕ್ಡೊನಾಲ್ಡ್ಸ್ ರವರ ರೆಸ್ಟೋರೆಂಟ್, ತಮ್ಮದೇ ಪ್ರತಿನಿಧಿ ಸಂಸ್ಥೆ ಅಥವಾ ಅಂಗ ಸಂಸ್ಥೆಯ ಮೂಲಕ ಅಥವಾ ಖುದ್ದಾಗಿ ಕಾರ್ಯಾಚರಿಸುತ್ತದೆ. ಕಾರ್ಪೋರೇಶನ್ನ ಆದಾಯವು ತಮ್ಮ ಪ್ರತಿನಿಧಿ ಸಂಸ್ಥೆಗಳು(ಫ್ರಾಂಚೈಸೀ) ಸಲ್ಲಿಸುವ ಬಾಡಿಗೆ,ಗೌರವಧನ ಮತ್ತು ಶುಲ್ಕಗಳಿಂದ ಸಂಗ್ರಹವಾಗುತ್ತದೆ. ಹಾಗೆಯೇ ಕಂಪನಿಯು ನಡೆಸುತ್ತಿರುವ ರೆಸ್ಟೋರೆಂಟ್ಗಳಲ್ಲಿ ಆಗುವ ಮಾರಾಟಗಳಿಂದಲೂ ಆದಾಯ ಗಳಿಕೆಯಾಗುವುದು. ಮ್ಯಾಕ್ಡೊನಾಲ್ಡ್ಸ್ ರವರ ಆದಾಯವು ಮೂರು ವರ್ಷಗಳ ಅಂತ್ಯದಲ್ಲಿ, ಅಂದರೆ ೨೦೦೭ ರಲ್ಲಿ ೨೭% ವೃದ್ದಿಯಾಗಿ ೨೨.೮ ಬಿಲಿಯನ್ ಅಮೆರಿಕನ್ ಡಾಲರ್ಗೆ ತಲುಪಿತು. ಮತ್ತು ವಹಿವಾಟಿನ ಆದಾಯವು ೯% ರಷ್ಟು ಅಭಿವೃದ್ದಿಯಾಗಿ ೩.೯ ಬಿಲಿಯನ್ ಅಮೆರಿಕನ್ ಡಾಲರ್ನಷ್ಟಾಯಿತು.[8]
ಮ್ಯಾಕ್ಡೊನಾಲ್ಡ್ಸ್ ಸಂಸ್ಥೆಯು ಪ್ರಮುಖವಾಗಿ ಹ್ಯಾಮ್ಬರ್ಗರ್, ಚೀಸ್ಬರ್ಗರ್, ಚಿಕನ್ ಉತ್ಪನ್ನಗಳು, ಫ್ರೆಂಚ್ ಫ್ರೈ, ಮುಂಜಾನೆಯ ತಿಂಡಿ ತಿನಿಸುಗಳು, ತಂಪು ಪಾನೀಯಗಳು, ವಿವಿಧ ಶೇಕ್ಗಳು ಮತ್ತು ಸಿಹಿತಿಂಡಿ ಉತ್ಪನ್ನಗಳನ್ನು ಮಾರಾಟಮಾಡುತ್ತದೆ. ಪಾಶ್ಚಿಮಾತ್ಯರಲ್ಲಿ ಹೆಚ್ಚಿದ ಸ್ಥೂಲಕಾಯದ ಸಮಸ್ಯೆ ಮತ್ತು ಆರೋಗ್ಯದ ಕುರಿತು ಉದ್ಭವಿಸಿದ ಟೀಕೆಗಳಿಂದಾಗಿ ಕಂಪನಿಯು ತನ್ನ ಉತ್ಪನ್ನಗಳಲ್ಲಿ ಬದಲಾವಣೆ ಮಾಡಿ ಆರೋಗ್ಯಕ್ಕೆ ಉತ್ತಮವಾದ ಸಲಾಡ್, ಸುರುಳಿ ತಿಂಡಿಗಳು ಹಣ್ಣು ತರಕಾರಿಗಳ ಉತ್ಪನ್ನಗಳನ್ನು ಅಳವಡಿಸಿಕೊಂಡಿತು.