ರಂಗನತಿಟ್ಟು ಪಕ್ಷಿಧಾಮ
ಭಾರತದ ಕರ್ನಾಟಕದ ಮಂಡ್ಯ ಜಿಲ್ಲೆಯ ಪಕ್ಷಿಧಾಮ / From Wikipedia, the free encyclopedia
ರ೦ಗನತಿಟ್ಟು ಪಕ್ಷಿಧಾಮ (Ranganthittu Bird Sanctuary) ಇದನ್ನು ಕರ್ನಾಟಕದ ಪಕ್ಷಿಕಾಶಿ ಎ೦ದೂ ಕರೆಯುತ್ತಾರೆ.[1] ಇದು ಕರ್ನಾಟಕ ರಾಜ್ಯದ, ಮಂಡ್ಯ ಜಿಲ್ಲೆಯಲ್ಲಿದ್ದು ರಾಜ್ಯದ ಅತಿದೊಡ್ಡ ಪಕ್ಷಿಧಾಮವಾಗಿದೆ.[2] ಕೇವಲ 0.67 ಚದುರ ಕಿಲೋಮೀಟರ್ ವಿಸ್ತೀರ್ಣದ ಅಂದರೆ ಸುಮಾರು 40 ಎಕರೆ ವಿಸ್ತೀರ್ಣದ [3] ಈ ಧಾಮ ಕಾವೇರಿ ನದಿಯ ಆರು ಚಿಕ್ಕ ದ್ವೀಪ ಸಮೂಹಗಳನ್ನೊಳ ಗೊ೦ಡಿದೆ. .[4] ರ೦ಗನತಿಟ್ಟು ಚರಿತ್ರಾರ್ಹ ಪಟ್ಟಣವಾದ ಶ್ರೀರ೦ಗಪಟ್ಟಣದಿ೦ದ ಮೂರು ಕಿ.ಮೀ ದೂರದಲ್ಲಿ ಮೈಸೂರಿನಿಂದ ೧೬ ಕಿ.ಮಿ ಉತ್ತರದಲ್ಲಿದೆ [5] 2011-12 ನೇ ಸಾಲಿನಲ್ಲಿ 2.90 ಲಕ್ಷ ಪ್ರವಾಸಿಗರನ್ನು ಆಕರ್ಷಿಸಿರುವುದನ್ನು ಗಮನಿಸಿದರೆ ಭಾರತದಲ್ಲಿ ಇದರ ಮಹತ್ವದ ಸ್ಥಾನವನ್ನು ತಿಳಿಯಬಹುದು.[6]
Quick Facts ರ೦ಗನತಿಟ್ಟು ಪಕ್ಷಿಧಾಮ, ಸ್ಥಳ ...
ರ೦ಗನತಿಟ್ಟು ಪಕ್ಷಿಧಾಮ | |
---|---|
ಭೂಪಟದಲ್ಲಿನ ಸ್ಥಾನ, ಕರ್ನಾಟಕ | |
ಸ್ಥಳ | ಕನಾಟಕ, ಭಾರತ |
ಹತ್ತಿರದ ನಗರ | ಮೈಸೂರು |
ಪ್ರದೇಶ | 0.67 km²2. |
ಸ್ಥಾಪನೆ | 1940 |
ಸಂದರ್ಶಕರು | 205,000 (in 1999) |
ಆಡಳಿತ ಮಂಡಳಿ | ಅರಣ್ಯ ಇಲಾಖೆ, ಭಾರತ ಸರ್ಕಾರ |
Close