ರಿಕಿ ಪಾಂಟಿಂಗ್
ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಆಸ್ಟ್ರೇಲಿಯಾ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕರಾಗಿದ್ದರು. / From Wikipedia, the free encyclopedia
ರಿಕಿ ಥಾಮಸ್ ಪಾಂಟಿಂಗ್ (೧೯೭೪ ಡಿಸೆಂಬರ್ ೧೯ರಂದು ಜನನ), ಇವರ ಅಡ್ಡ ಹೆಸರು ಪಂಟರ್ . ಪ್ರಸ್ತುತ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ. ಇವರು ಬಲಗೈ ಬ್ಯಾಟ್ಸ್ ಮನ್ ಆಗಿದ್ದು, ಇದರಲ್ಲಿ ಪ್ರಾವೀಣ್ಯತೆ ಹೊಂದಿದ್ದಾರೆ. ಸ್ಲಿಪ್ ಮತ್ತು ಕ್ಲೋಸ್ ಕ್ಯಾಚಿಂಗ್ ಫೀಲ್ಡರ್ (ಕ್ಷೇತ್ರರಕ್ಷಕ) ಸಹ ಇವರಾಗಿದ್ದಾರೆ. ಇದರ ಜತೆ ಅಪರೂಪವಾಗಿ ಬೌಲಿಂಗ್ ಸಹ ಮಾಡುತ್ತಾರೆ. ಆಧುನಿಕ ಕ್ರಿಕೆಟ್ ಶಕೆಯಲ್ಲಿ ಇವರನ್ನು ಆಸ್ಟ್ರೇಲಿಯಾದ ಉತ್ತಮ ಕ್ರಿಕೆಟ್ ಪಟುಗಳಲ್ಲಿ ಒಬ್ಬರು ಎಂದು ಪರಿಗಣಿಸಲ್ಪಡುತ್ತಾರೆ. ಇವರು ಆಸ್ಟ್ರೇಲಿಯಾ ದೇಶೀ ಕ್ರಿಕೆಟ್ ನ ತಾಸ್ಮಾನಿಯನ್ ಟೈಗರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದರು ಮತ್ತು ೨೦೦೮ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಆಟವಾಡಿದ್ದರು.
ವಯಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | Ricky Thomas Ponting | |||||||||||||||||||||||||||||||||||||||||||||||||||||||||||||||||
ಅಡ್ಡಹೆಸರು | ಪಂಟರ್ | |||||||||||||||||||||||||||||||||||||||||||||||||||||||||||||||||
ಎತ್ತರ | 1.78 m (5 ft 10 in) | |||||||||||||||||||||||||||||||||||||||||||||||||||||||||||||||||
ಬ್ಯಾಟಿಂಗ್ | Right-hand | |||||||||||||||||||||||||||||||||||||||||||||||||||||||||||||||||
ಬೌಲಿಂಗ್ | Right-arm medium Right-arm off break | |||||||||||||||||||||||||||||||||||||||||||||||||||||||||||||||||
ಪಾತ್ರ | Batsman | |||||||||||||||||||||||||||||||||||||||||||||||||||||||||||||||||
ಸಂಬಂಧಗಳು | Greg Campbell (uncle) | |||||||||||||||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ರಾಷ್ಟೀಯ ತಂಡ |
| |||||||||||||||||||||||||||||||||||||||||||||||||||||||||||||||||
ಟೆಸ್ಟ್ ಚೊಚ್ಚಲ (ಕ್ಯಾಪ್ 366) | 8 December 1995 v Sri Lanka | |||||||||||||||||||||||||||||||||||||||||||||||||||||||||||||||||
ಕೊನೆಯ ಟೆಸ್ಟ್ | 4 December 2012 v South Africa | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ 123) | 15 February 1995 v South Africa | |||||||||||||||||||||||||||||||||||||||||||||||||||||||||||||||||
ಕೊನೆಯ ಅಂ. ಏಕದಿನ | 19 February 2012 v India | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಅಂಗಿ ನಂ. | 14 | |||||||||||||||||||||||||||||||||||||||||||||||||||||||||||||||||
ಟಿ೨೦ಐ ಚೊಚ್ಚಲ (ಕ್ಯಾಪ್ 10) | 17 February 2005 v New Zealand | |||||||||||||||||||||||||||||||||||||||||||||||||||||||||||||||||
ಕೊನೆಯ ಟಿ೨೦ಐ | 8 June 2009 v Sri Lanka | |||||||||||||||||||||||||||||||||||||||||||||||||||||||||||||||||
ಟಿ೨೦ಐ ಅಂಗಿ ನಂ. | 14 | |||||||||||||||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||||||||||||||||||||||||||||||||
1992 – | Tasmania | |||||||||||||||||||||||||||||||||||||||||||||||||||||||||||||||||
2004 | Somerset | |||||||||||||||||||||||||||||||||||||||||||||||||||||||||||||||||
2008 | Kolkata Knight Riders | |||||||||||||||||||||||||||||||||||||||||||||||||||||||||||||||||
2011 – | Hobart Hurricanes | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಮೂಲ: Cricinfo, 28 April 2012 |
ಪಾಂಟಿಂಗ್ ೧೯೯೨ ನವೆಂಬರ್ನಲ್ಲಿ ತಾಸ್ಮಾನಿಯಾ ತಂಡದಲ್ಲಿ ಪ್ರಥಮ ದರ್ಜೆ ಆಟಗಾರನಾಗಿ ತಮ್ಮ ವೃತ್ತಿ ಪ್ರಾರಂಭಿಸಿದರು. ಆಗ ಅವರಿಗೆ ಕೇವಲ ೧೭ ವರ್ಷ ಮತ್ತು ೩೩೭ ದಿನಗಳಾಗಿತ್ತು. ತಾಸ್ಮಾನಿಯನ್ ತಂಡದ ಅತ್ಯಂತ ಕಿರಿಯ ಆಟಗಾರನಾಗಿ ಶೆಫೀಲ್ಡ್ ಶೀಲ್ಡ್ ಮ್ಯಾಚ್ ನಲ್ಲಿ ಆಡಿದರು. ಆದಾಗ್ಯೂ ಇವರು ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಪ್ರಥಮ ಅವಕಾಶಕ್ಕಾಗಿ ೧೯೯೫ರವರೆಗೆ ಕಾಯಬೇಕಾಯಿತು. ನ್ಯೂಜಿಲೆಂಡ್ ನಲ್ಲಿ ನಡೆದ (Quadrangular) ಕ್ವಾಡ್ರಾಂಗ್ಯುಲರ್ ಟೂರ್ನಮೆಂಟ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪ್ರಥಮ ಪಂದ್ಯವನ್ನಾಡಿದರು. ಇವರ ಪ್ರಥಮ ಟೆಸ್ಟ್ ಕ್ರಿಕೆಟ್ ಜೀವನವೂ ಶೀಘ್ರದಲ್ಲಿ ಪ್ರಾರಂಭವಾಯಿತು. ೧೯೯೫ರಲ್ಲಿ ಶ್ರೀ ಲಂಕದ ಪರ್ಥ್ನಲ್ಲಿ ನಡೆದ ಟೆಸ್ಟ್ ಸರಣಿಗೆ ಪ್ರಥಮವಾಗಿ ಆಯ್ಕೆಯಾದರು ಮತ್ತು ಈ ಪಂದ್ಯದಲ್ಲಿ ೯೬ ರನ್ಗಳಿಸಿದರು. ಇವರ ಕಳಪೆ ಫಾರ್ಮ್ (ಸ್ಥಿರತೆ) ಮತ್ತು ಶಿಸ್ತಿನ ಕಾರಣದಿಂದ ೧೯೯೯ರೊಳಗೆ ಇವರು ಹಲವಾರು ಬಾರಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಕಳೆದುಕೊಂಡರು. ಇವುಗಳು ನಡೆದಿದ್ದು ಇವರು ೨೦೦೨ರ ಒಳಗೆ ಏಕದಿನ ಪಂದ್ಯದ ನಾಯಕರಾಗುವುದಕ್ಕಿಂತ ಮತ್ತು ೨೦೦೪ರ ಟೆಸ್ಟ್ ಕ್ರಿಕೆಟ್ ನಾಯಕ ರಾಗುವುದಕ್ಕಿಂತ ಮೊದಲಾಗಿದೆ.
ನಂತರ ಇವರು ಆಡಿದ ೧೫೧ ಟೆಸ್ಟ್ ಗಳು ಮತ್ತು ೩೫೨ ಏಕದಿನ ಪಂದ್ಯಗಳಿಂದಾಗಿ ಆಸ್ಟ್ರೇಲಿಯಾ ತಂಡದಲ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ಗಳಿಸಿದ ಕ್ರಿಕೆಟಿಗೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ೨೦೧೦ರ ಜುಲೈ ವೇಳೆಗೆ ೨೫,೦೦೦ಕ್ಕೂ ಹೆಚ್ಚು ರನ್ಗಳನ್ನು ಅಂತಾರಾಷ್ಟ್ರೀಯ ಪಂದ್ಯದಲ್ಲಿ ಗಳಿಸಿದ್ದಾರೆ. ಇವರು ಟೆಸ್ಟ್ ಕ್ರಿಕೆಟ್ನಲ್ಲಿ ೩೯ ಶತಕ ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ (೫೦) ಮತ್ತು ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ (೪೦)[1] ಶತಕಗಳನ್ನು ಗಳಿಸಿದ್ದಾರೆ. ಹಾಗೂ ಏಕದಿನ ಪಂದ್ಯದಲ್ಲಿ ಹೆಚ್ಚು ರನ್ಗಳಿಸಿದವರಲ್ಲಿ ಇವರು ೩ನೇ ಸ್ಥಾನ ಪಡೆದಿದ್ದಾರೆ. ಮೊದಲಿಗರಾಗಿ ಸಚಿನ್ ತೆಂಡೂಲ್ಕರ್ ಮತ್ತು ಎರಡನೆಯವರಾಗಿ ಸನತ್ ಜಯಸೂರ್ಯ ಇದ್ದಾರೆ.[2]
ರಿಕಿ ಪಾಂಟಿಂಗ್ ಎಲ್ಲ ಸಮಯದಲ್ಲೂ ಆಸ್ಟ್ರೇಲಿಯಾ ತಂಡದ ಯಶಸ್ವಿ ನಾಯಕ ಎಂದು ಗುರುತಿಸಲ್ಪಡುತ್ತಾರೆ. ೨೦೦೪ರಿಂದ ೨೦೧೦ರ ಡಿಸೆಂಬರ್ ೩೧ರ ವರೆಗೆ ಆಡಿದ ೭೭ ಟೆಸ್ಟ್ ಪಂದ್ಯಗಳಲ್ಲಿ ೪೮ ಪಂದ್ಯಗಳಲ್ಲಿ ಜಯಸಾಧಿಸಿದ್ದಾರೆ. ಇವರನ್ನು ಆಟಗಾರರನ್ನಾಗಿ ನೋಡಿದರೆ ಒಟ್ಟು ೯೯ ಪಂದ್ಯಗಳ ಜಯದಲ್ಲಿ ಇವರು ಪಾಲ್ಗೊಂಡಿದ್ದಾರೆ. ಇದು ಕ್ರಿಕೆಟ್ ಇತಿಹಾಸದಲ್ಲೇ ಎಲ್ಲರಿಗಿಂತ ಹೆಚ್ಚಿನ ಸಾಧನೆಯಾಗಿದೆ.[3]