Reiki (霊気?, English pronunciation: /ˈreɪkiː/)ಎಂಬುದು ಆಧ್ಯಾತ್ಮಿಕ ಅಭ್ಯಾಸ[1] ವಾಗಿದ್ದು, ಇದನ್ನು ೧೯೨೨ರಲ್ಲಿ ಜಪಾನಿನ ಬೌದ್ಧ ಮತೀಯ ಮಿಕಾವೊ ಉಸುಯಿ ಅಭಿವೃದ್ಧಿಪಡಿಸಿದರು. ಇದು ಸಾಮಾನ್ಯವಾಗಿ ಪಾಮ್ ಹೀಲಿಂಗ್ ಎಂದು ಕರೆಯಲ್ಪಡುವ ವಿಧಾನವನ್ನು ಪೂರಕ ಮತ್ತು ಪರ್ಯಾಯ ಚಿಕಿತ್ಸೆಯ ರೂಪದಲ್ಲಿ ಬಳಸುತ್ತದೆ ಹಾಗು ಕೆಲ ವೃತ್ತಿಪರರು ಇದನ್ನು ಕೆಲವೊಮ್ಮೆ ಪೌರಸ್ತ್ಯ ಚಿಕಿತ್ಸೆ ಎಂದು ವರ್ಗೀಕರಿಸುತ್ತಾರೆ.[2] ಈ ವಿಧಾನದ ಮೂಲಕ ವೈದ್ಯರು, ಗುಣಪಡಿಸುವ ಶಕ್ತಿಯನ್ನು ಕೀ ನ ರೂಪದಲ್ಲಿ ಅಂಗೈ ಮೂಲಕ ವರ್ಗಾವಣೆ ಮಾಡುತ್ತಾರೆ.[3]
Quick Facts Reiki, ಚೀನೀ ಹೆಸರು ...
Reiki |
ಚೀನೀ ಹೆಸರು |
ಸಾಂಪ್ರದಾಯಿಕ ಚೀನೀ |
靈氣 |
ಸರಳೀಕಸರಿಸಿದ ಚೀನೀ |
灵气 |
ಲಿಪ್ಯಂತರಗಳು |
Mandarin |
- Hanyu Pinyin |
língqì |
- Wade–Giles |
ling2-ch'i4 |
Cantonese |
- Jyutping |
ling4-hei3 |
|
ಜಪಾನೀ ಹೆಸರು |
ಹಿರಗನ |
れいき |
Kyūjitai |
靈氣 |
ಶಿಂಜಿತಾಯ್ |
霊気 |
Transliterations |
- Revised Hepburn |
Reiki |
|
Korean name |
Hangul |
영기 |
Hanja |
靈氣 |
Transliterations |
- Revised Romanization |
yeonggi |
- McCune- Reischauer |
yŏngki |
|
Vietnamese name |
Quốc ngữ |
linh khí |
Close
ರೇಖಿಯ ಎರಡು ಪ್ರಮುಖ ಶಾಖೆಗಳನ್ನು ಸಾಮಾನ್ಯವಾಗಿ ಸಾಂಪ್ರದಾಯಿಕ ಜಪಾನೀಸ್ ರೇಖಿ ಮತ್ತು ಪಾಶ್ಚಿಮಾತ್ಯ ರೇಖಿ ಎಂದು ಸೂಚಿಸಲಾಗುತ್ತದೆ. ರೇಖಿಯ ಸಾಂಪ್ರದಾಯಿಕ ಮತ್ತು ಪಾಶ್ಚಿಮಾತ್ಯ ರೂಪಗಳಲ್ಲಿ, ಮೂರು ರೀತಿಯ ಶೈಕ್ಷಣಿಕ ಹಂತಗಳಿವೆ.ಇವುಗಳನ್ನು ಸಾಮಾನ್ಯವಾಗಿ ಮೊದಲನೆಯದು,ಎರಡನೆಯದು ಮತ್ತು ತಜ್ಞ/ಶಿಕ್ಷಕ ಹಂತ ಎಂದು ಕರೆಯಲಾಗುತ್ತದೆ. ರೇಖಿ ವೈದ್ಯರು ಮತ್ತು ತಜ್ಞರ ಪ್ರಕಾರ, ಮೊದಲ ಹಂತದ ಪದವಿಯಲ್ಲಿ, ರೇಖಿಯನ್ನು ಅಭ್ಯಸಿಸುವವರು ಸ್ವತಃ ತಮ್ಮನ್ನು ಹಾಗು ಇತರರನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಎರಡನೆಯ ಪದವಿ ಹಂತದಲ್ಲಿ ವೈದ್ಯರು ವಿಶಿಷ್ಟ ಸಂಕೇತಗಳನ್ನು ಬಳಸಿಕೊಂಡು ದೂರದಿಂದಲೆ(ಸಾಮಾನ್ಯವಾಗಿದೂರ ಚಿಕಿತ್ಸೆ ) ಇತರರನ್ನು ಗುಣಪಡಿಸಬಲ್ಲರು. ಶಿಕ್ಷಕ ಹಂತದಲ್ಲಿ (ನಿರ್ದಿಷ್ಟವಾಗಿ ತಜ್ಞ/ಶಿಕ್ಷಕ ಹಂತ) ಅವರು ರೇಖಿಯನ್ನು ಇತರರಿಗೆ ಬೋಧಿಸಬಲ್ಲವರಾಗಿರುತ್ತಾರೆ ಹಾಗು ರೇಖಿಯನ್ನು ಇತರರಿಗೆ ಕಲಿಯಲು ಅನುವು ಮಾಡಿಕೊಡುತ್ತಾರೆ.
೨೦೦೮ರಲ್ಲಿ ನಡೆಸಲಾದ ಯಾದೃಚ್ಛೀಕರಿಸಲಾದ ಪ್ರಾಯೋಗಿಕ ಪರೀಕ್ಷೆಗಳ [4] ಒಂದು ಕ್ರಮಬದ್ಧ ವಿಮರ್ಶೆ ಕೆಳಕಂಡಂತೆ ತಿಳಿಸಿದೆ: "..ಅಧ್ಯಯನ ನಡೆಸಲಾದಂತಹ ಸ್ಥಿತಿಗಳನ್ನು(ಖಿನ್ನತೆ, ನೋವು ಹಾಗು ಆತಂಕ, ಹಾಗು ಇತರೆ) ಆಧಾರವಾಗಿಟ್ಟುಕೊಂಡು ರೇಖಿಯು ಒಂದು ಪರಿಣಾಮಕಾರಿ ಚಿಕಿತ್ಸೆಯೆಂದು ಸೂಚಿಸಲು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲ.."