ಲಿಯೊನೆಲ್ ಮೆಸ್ಸಿ
From Wikipedia, the free encyclopedia
ಲಿಯೋನೆಲ್ ಆಂಡ್ರೇಸ್ ಮೆಸ್ಸಿ (Spanish pronunciation: [ljoˈnel anˈdɾes ˈmesi];ಜನನ 24 ಜೂನ್ 1987) ಅರ್ಜಂಟೀನಾ ಫುಟ್ಬಾಲ್ ಆಟಗಾರ. ಈತ ಸದ್ಯಕ್ಕೆ MLS ದ Inter Miami CF ತಂಡಕ್ಕೆ ಮತ್ತು ಅರ್ಜೇಂಟೀನ ರಾಷ್ಟ್ರೀಯ ತಂಡಕ್ಕೆ ಆಟವಾಡುತ್ತಾನೆ.
Personal information | |||
---|---|---|---|
Full name | Lionel Andrés Messi[1][2] | ||
Date of birth | (1987-06-24) ೨೪ ಜೂನ್ ೧೯೮೭ (ವಯಸ್ಸು ೩೬) | ||
Place of birth | Rosario, Argentina | ||
Height | 1.69 m (5 ft 7 in)[1] | ||
Playing position | Winger / Striker | ||
Club information | |||
Current club | Inter Miami | ||
Number | 10 | ||
Youth career | |||
1995–2000 | Newell's Old Boys | ||
2000–2004 |
Barcelona youthclubs3. = Paris Saint-German youthclubs4. = Inter Miami CF | ||
Senior career* | |||
Years | Team | Apps† | (Gls)† |
2004–2005 | Barcelona B | 5 | (0) |
2004– | Barcelona | 304 | (275) |
National team‡ | |||
2005 | Argentina U20 | 7 | (6) |
2008 | Argentina U23 | 5 | (2) |
2005– | Argentina | 97 | (45) |
Honours
| |||
† Appearances (Goals). |
ಮೆಸ್ಸಿಯನ್ನು ಅವನ ಪೀಳಿಗೆಯ ಅತ್ಯುತ್ತಮ ಫುಟ್ಬಾಲ್ ಆಟಗಾರರಲ್ಲಿ ಒಬ್ಬನೆಂದು ಪರಿಗಣಿಸಲಾಗಿದೆ[3][4][5]. ಇವನು 7 Ballon d'Or (ಚಿನ್ನದ ಚೆಂಡು)ಪ್ರಶಸ್ತಿಯ ಜೊತೆಗೆ FIFA ವರ್ಷದ ವಿಶ್ವ ಆಟಗಾರ ಎಂದು 21ನೇ ವಯಸ್ಸಿಗೆ ನಾಮನಿರ್ದೇಶನಗೊಂಡಿದ್ದಾನೆ.[6][7][8]
ಅವನ ಆಟದ ಶೈಲಿ ಹಾಗು ಸಾಮರ್ಥ್ಯವು ಫುಟ್ಬಾಲ್ ನ ದಂತಕಥೆ ಡೀಗೋ ಮರಡೋನನ ಆಟದ ಶೈಲಿಯನ್ನು ಹೋಲುತ್ತದೆ, ಮರಡೋನ ಮೆಸ್ಸಿಯನ್ನು ತನ್ನ "ಉತ್ತರಾಧಿಕಾರಿ" ಎಂದು ಸ್ವತಃ ಘೋಷಿಸಿದ್ದಾನೆ.[9][10]
ಮೆಸ್ಸಿ ಚಿಕ್ಕ ವಯಸ್ಸಿನಲ್ಲೇ ಫುಟ್ಬಾಲ್ ಆಡಲು ಪ್ರಾರಂಭಿಸಿದ ಮತ್ತು ಅವನ ಸಾಮರ್ಥ್ಯವನ್ನು ಬಾರ್ಸಿಲೋನಾ ಬೇಗನೆ ಗುರುತಿಸಿತು. ಅವನು 2000ದಲ್ಲಿ ರೊಸಾರಿಯೋ-ಮೂಲದ ನೆವೆಲ್'ಸ್ ಓಲ್ಡ್ ಬಾಯ್'ಸ್ ಯುವ ತಂಡವನ್ನು ತೊರೆದು ತನ್ನ ಕುಟುಂಬದ ಜೊತೆಗೆ ಯುರೋಪ್ಗೆ ವಲಸೆ ಹೋದ. ಬಾರ್ಸಿಲೋನಾ ಅವನ ಬೆಳವಣಿಗೆಯ ಹಾರ್ಮೋನ್ ಕೊರತೆಗೆ ಚಿಕಿತ್ಸೆಯನ್ನು ಕೊಡಿಸುವ ಪ್ರಸ್ತಾಪ ಮುಂದಿರಿಸಿತು. ತನ್ನ ಮೊದಲ ಪ್ರದರ್ಶನವನ್ನು 2004-05ರ ಕ್ರೀಡಾಋತುವಿನಲ್ಲಿ ನೀಡಿದ. ಒಂದು ಲೀಗ್ ಪಂದ್ಯದಲ್ಲಿ ಆಡಿದ ಅತಿ ಕಿರಿಯ ಫುಟ್ಬಾಲ್ ಆಟಗಾರ ಎಂದು ಲಾ ಲಿಗಾ ದಾಖಲೆ ಮುರಿಯುವುದರ ಜೊತೆಗೆ ಈತ ಪಂದ್ಯದಲ್ಲಿ ಲೀಗ್ ಗೋಲು ಹೊಡೆದ ಅತ್ಯಂತ ಕಿರಿಯ. ಮೆಸ್ಸಿಯ ಚೊಚ್ಚಲ ಕ್ರೀಡಾಋತುವಿನಲ್ಲಿ ಬಾರ್ಸಿಲೋನಾ ಲಾ ಲಿಗಾ ಗೆದ್ದಾಗ ಮೆಸ್ಸಿಗೆ ಪ್ರಮುಖ ಗೌರವಗಳು ಹಿಂಬಾಲಿಸಿದವು. ಜೊತೆಗೆ ಬಾರ್ಸಿಲೋನಾ ಲೀಗ್ನಲ್ಲಿ ಡಬಲ್ ಮತ್ತು 2006ರ UEFA ಚಾಂಪಿಯನ್ಸ್ ಲೀಗ್ ಗೆದ್ದುಕೊಂಡಿತು.
ಅವನಿಗೆ ಪ್ರಮುಖ ಪ್ರಗತಿಯನ್ನು ತಂದುಕೊಟ್ಟಿದ್ದು 2006-07ರ ಕ್ರೀಡಾಋತು: ಅವನು ಎಲ್ ಕ್ಲಾಸಿಕೊ ನಲ್ಲಿ ಮೂರು ಗೋಲು ಗಳನ್ನು ಗಳಿಸಿ ಜೊತೆಗೆ 26 ಲೀಗ್ ಪಂದ್ಯಗಳಲ್ಲಿ 14 ಗೋಲುಗಳೊಂದಿಗೆ ಗುರಿ ಮುಟ್ಟಿ ಮೊದಲ ತಂಡದ ಕಾಯಂ ಆಟಗಾರನಾದ. ಬಹುಶಃ 2008-09ರ ಕ್ರೀಡಾಋತು ಅವನ ಪಾಲಿಗೆ ಅತ್ಯಂತ ಯಶಸ್ವಿಯಾಗಿತ್ತು. ಇದರಲ್ಲಿ ಮೆಸ್ಸಿ 38 ಗೋಲುಗಳನ್ನು ಗಳಿಸುವ ಮೂಲಕ ತ್ರಿವಳಿ ಟ್ರೋಫಿಗಳ ಜಯದ ಅಭಿಯಾನದ ಅವಿಭಾಜ್ಯ ಅಂಗವಾಗಿದ್ದ.
ಮೆಸ್ಸಿ ಆರು ಗೋಲು ಗಳಿಸುವುದರೊಂದಿಗೆ ಅಗ್ರ ಸ್ಥಾನ ಗಳಿಸಿದ. ಇದರಲ್ಲಿ 2005ರ FIFA ವಿಶ್ವ ಯುವ ಚಾಂಪಿಯನ್ ಶಿಪ್ ನ ಕಡೆಯ ಪಂದ್ಯದಲ್ಲಿ ಎರಡು ಗೋಲು ಗಳಿಸಿದ. ಇದಾದ ಸ್ವಲ್ಪ ಸಮಯದಲ್ಲೇ, ಅವನು ಅರ್ಜಂಟೀನಾದ ಸೀನಿಯರ್ ಅಂತಾರಾಷ್ಟ್ರೀಯ ತಂಡದಲ್ಲಿ ಒಬ್ಬ ಸ್ಥಾಪಿತ ಸದಸ್ಯನಾದ. ಇವನು 2006ರಲ್ಲಿ ಅರ್ಜಂಟೀನಾ ಪರ FIFA ವಿಶ್ವ ಕಪ್ ನಲ್ಲಿ ಆಡಿದ ಅತಿ ಕಿರಿಯ ಆಟಗಾರನೆನಿಸಿಕೊಂಡ ಜೊತೆಗೆ ಮರು ವರ್ಷವೇ ಕೊಪಾ ಅಮೆರಿಕಾ ಪಂದ್ಯಾವಳಿಯಲ್ಲಿ ರನ್ನರ್ಸ್-ಅಪ್ ಪದಕವನ್ನು ಗೆದ್ದುಕೊಂಡ.
ಇವನು ೨೦೦೮ರ ಬೀಜಿಂಗ್ ಒಲಂಪಿಕ್ ಪಂದ್ಯಾವಳಿಗಳಲ್ಲಿಅರ್ಜೆಂಟಿನಾದ ಒಲಂಪಿಕ್ ಫುಟ್ಬಾಲ್ ತಂಡದ ಪರವಾಗಿ ಒಲಂಪಿಕ್ ಚಿನ್ನದ ಪದಕ ಗೆಲ್ಲುವುದರೊಂದಿಗೆ ಮೊದಲ ಅಂತಾರಾಷ್ಟ್ರೀಯ ಗೌರವಕ್ಕೆ ಪಾತ್ರನಾದ.
ಮತ್ತು ಅರ್ಜೆಂಟೀನಾ ರಾಷ್ಟ್ರೀಯ ಫುಟ್ಬಾಲ್ ತಂಡದೊಂದಿಗೆ ಅರ್ಜೆಂಟೀನಾದ ಅತ್ಯಂತ ಸೋತ ಪಾತ್ರವು 2008 ರಲ್ಲಿ ಬ್ರೆಜಿಲ್ನೊಂದಿಗೆ ಮೂರು ಕೋಪಾ ಅಮೆರಿಕವನ್ನು ಕಳೆದುಕೊಂಡಿತು. 2014 ರ ವಿಶ್ವಕಪ್ ಫೈನಲ್ನಲ್ಲಿ ಜರ್ಮನಿ ವಿರುದ್ಧ ಚಿಲಿ 2015 ಮತ್ತು 2016 ರಲ್ಲಿ ಫ್ರಾನ್ಸ್ ಕ್ವಾರ್ಟರ್ಫೈನಲ್ನಲ್ಲಿ ಸೋಲಿಸಿತು. 2018 ರಲ್ಲಿ ರಷ್ಯಾದ ವಿಶ್ವಕಪ್ನಲ್ಲಿ ಸಹ ಸೋಲನ್ನು ಅನುಭವಿಸಿತು. ಆಗಲೇ ಲಿಯೊನೆಲ್ ಮೆಸ್ಸಿ 3 ಬಾರಿ copa americaದ ಫೈನಲ್ಸ್ ನಲ್ಲಿ ಸೋಲು ಅನುಭವಿಸಿದ್ದ.
2020ರಿಂದ ಮೆಸ್ಸಿಯ ಪ್ರಶಸ್ತಿಗಳ ಬೇಟೆ ಶುರುವಾಯಿತು. 2021ರಲ್ಲಿ Brazilತಂಡವನ್ನು ಸೋಲಿಸಿ copa america ಟ್ರೋಫಿಯನ್ನು ಅರ್ಜೆಂಟೈನಾ ತಂಡಕ್ಕೆ ಗೆಲ್ಲಿಸಿದನು. 2022ರಲ್ಲಿ Italy (ಇಟಲಿ) ತಂಡವನ್ನು ಸೋಲಿಸಿ Finalissima ಪ್ರಶಸ್ತಿ ಗೆಲ್ಲಿಸಿದನು. ನಂತರ 2022ರ ಕತಾರ್ fifa ವಿಶ್ವಕಪ್ ನಲ್ಲಿ ಅರ್ಜೆಂಟೈನಾ ತಂಡಕ್ಕೆ 3ನೇ ವಿಶ್ವಕಪ್ ಗೆಲ್ಲಿಸುವುದರ ಮೂಲಕ ಜಗತ್ತಿನ ಶ್ರೇಷ್ಠ ಫುಟ್ಬಾಲ್ ಆಟಗಾರನೆಂಬ ಹೆಗ್ಗಳಿಕೆ ಪಾತ್ರನಾದನು. ಇತ್ತೀಚಿಗೆ ನಡೆದLeagues cupನಲ್ಲಿ Inter Miami CFತಂಡವನ್ನು ಪ್ರಥಮ ಬಾರಿಗೆ ಕಪ್ ಗೆಲ್ಲಿಸಿಕೊಟ್ಟನು.