ಲೀಸ್ ಮೇಟ್ನರ್
From Wikipedia, the free encyclopedia
ಲೀಸ್ ಮೇಟ್ನರ್ (ನವೆಂಬರ್ ೭, ೧೮೭೮ - ಅಕ್ಟೋಬರ್ ೨೭, ೧೯೬೮) ಒಬ್ಬ ಮೇಧಾವಿ ಆಸ್ಟ್ರಿಯನ್ ಭೌತಶಾಸ್ತ್ರಜ್ಞರು.
ಲೀಸ್ ಮೇಟ್ನರ್ | |
---|---|
ಜನನ | ನವೆಂಬರ್ ೭, ೧೮೭೮ ವಿಯೆನ್ನಾ |
ಮರಣ | ಅಕ್ಟೋಬರ್ ೨೭, ೧೯೬೮ ಕೇಂಬ್ರಿಡ್ಜ್ |
ಕಾರ್ಯಕ್ಷೇತ್ರ | ಭೌತಶಾಸ್ತ್ರ |
ಪ್ರಭಾವಿತರು | ಒಟ್ಟೋ ಹಾನ್ |
ಹಸ್ತಾಕ್ಷರ |
ಮೇರಿ ಕ್ಯೂರಿಯ (1867-1934) ಉಜ್ವಲ ಆದರ್ಶ ಈಕೆಯ ಭವಿಷ್ಯವನ್ನು ರೂಪಿಸಿತು.
೧೯೦೭ರಲ್ಲಿ ಇವರು ಆ ವೇಳೆಗೆ ಶಕಲ ಸಿದ್ಧಾಂತದ ಜನಕರೆಂದು ಪ್ರಸಿದ್ಧರಾದ ಭೌತಶಾಸ್ತ್ರಜ್ಞ ಮ್ಯಾಕ್ಸ್ ಪ್ಲಾಂಕ್ನೊಡನೆ ಕೆಲಸ ಮಾಡಿದರು. ಪ್ಲ್ಯಾಂಕರ ದಿಗ್ದರ್ಶನದಲ್ಲಿ ಈಕೆ ಅತಿ ವೇಗದಿಂದ ಮುಂದುವರಿದಳು. ಅನಂತರ, ಬರ್ಲಿನ್ನಿನ ಕೆ. ಡಬ್ಲ್ಯೂ. ಇನ್ಸ್ಟಿಟ್ಯೂಟಿನಲ್ಲಿ ವಿಕಿರಣಶೀಲ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆಯಾದರು.
ಪ್ರೊಟಾಕ್ಟಿನಿಯಮ್ ಮೂಲಧಾತುವನ್ನು ಕಂಡುಹಿಡಿದರು. ಆದರೆ ೧೯೪೪ರಲ್ಲಿ ಈಕೆಯ ಜೊತೆ ಕೆಲಸ ಮಾಡಿದ ಓಟೋ ಹಾನ್ಗೆ ನೊಬೆಲ್ ಪಾರಿತೋಷಿಕ ದೊರೆಯಿತು, ಸರಿಸಮಾನವಾಗಿ ದುಡಿದ ಲೀಸ್ ಮೇಟ್ನರ್ರ ಹೆಸರೇ ಇರಲಿಲ್ಲ. ಪರಮಾಣು ವಿಭಜನೆಯಲ್ಲಿ ಮೊತ್ತಮೊದಲಿಗರಾದರೂ ಈ ವಿಜ್ಞಾನಿ ಅಣುಬಾಂಬ್ ತಯಾರಿಸಲು ನಿರಾಕರಿಸಿದರು. ಮೈಟಿನಿರ್ ಅವರನ್ನು ನೊಬೆಲ್ ಸಮಿತಿಯು ಮಹಿಳಾ ವೈಜ್ಞಾನಿಕ ಸಾಧನೆಯನ್ನು ಕಡೆಗಣಿಸಿರುವ ಉದಾಹರಣೆಯಾಗಿ ಪ್ರಸ್ತಾವಿಸಿದರು[1][2].
೧೯೯೭ರಲ್ಲಿ ಫಿಸಿಕ್ಸ್ ಟುಡೆ ಅಧ್ಯಯನದಲ್ಲಿ ಮೈಟಿನಿರ್ ಅವರನ್ನು ಕಡೆಗಣಿಸಿದ ವಿಷಯದ ಬಗ್ಗೆ "ವೈಯಕ್ತಿಕ ನಕಾರಾತ್ಮಕ ಅಭಿಪ್ರಾಯಗಳಿಂದ ಅರ್ಹ ವಿಜ್ಞಾನಿಯನ್ನು ಹೊರಗಿಡಲು ಕಾರಣವಾಯಿತು, ಇದು ಒಂದು ಅಪುರೂಪದ ಉದಾಹರಣೆ" ಎಂದು ನೊಬೆಲ್ ತೀರ್ಮಾನಿಸಿದ್ದಾರೆ. ಎಲಿಮೆಂಟ್ ೧೦೯, ಅನ್ನು "ಮೀಟ್ನೇರಿಯಮ್" ಎಂದು ಅವರ ಗೌರವಾರ್ಥವಾಗಿ ಹೆಸರಿಸಲಾಗಿದೆ.