ಅಡೋಬ್ ಸಿಸ್ಟಮ್ಸ್
From Wikipedia, the free encyclopedia
ಅಡೋಬ್ ಸಿಸ್ಟಮ್ಸ್ ಇನ್ಕಾರ್ಪೊರೇಟೆಡ್ (pronounced /əˈdoʊbiː/ ə-DOE-bee) (NASDAQ: ADBE) ಒಂದು ಅಮೆರಿಕನ್ ಕಂಪ್ಯೂಟರ್ ಸಾಫ್ಟ್ವೇರ್ ಕಂಪನಿ, ಇದರ ಪ್ರಧಾನ ಕಛೇರಿ USA ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ನಲ್ಲಿದೆ. ಈ ಕಂಪನಿಯು ಮೊದಲಿನಿಂದಲೂ ತಯಾರಿಸುತ್ತಿರುವ ಮಲ್ಟಿಮೇಡಿಯಾ ಮತ್ತು ಕ್ರಿಯಾತ್ಮಕ ಸಾಫ್ಟ್ವೇರ್ ಉತ್ಪನ್ನಗಳ ಜೊತೆಯಲ್ಲಿ ಇತ್ತೀಚೆಗೆ ರಿಚ್ ಇಂಟರ್ನೆಟ್ ಅಪ್ಲಿಕೇಷನ್ ಸಾಫ್ಟ್ವೇರ್ ಡೆವಲಂಪ್ಮೆಂಟ್ನೆಡೆಗೆ ಲಗ್ಗೆ ಇಟ್ಟಿದೆ. ಡಿಸೆಂಬರ್ 1982[3] ರಲ್ಲಿ ಜಾನ್ ವರ್ನೋಕ್ ಮತ್ತು ಚಾರ್ಲ್ಸ್ ಗೆಸ್ಚ್ಕೆ ಯವರು ಅಡೋಬ್ ಅನ್ನು ಸ್ಥಾಪಿಸಿದರು, ಜೆರಾಕ್ಸ್ PARC ಕಂಪನಿಯನ್ನು ಬಿಟ್ಟು ಇವರು ಪೋಸ್ಟ್ಸ್ಕ್ರಿಪ್ಟ್ನ ಪುಟ ವಿವರಣೆ ಭಾಷೆಯ ಅಭಿವೃದ್ಧಿ ಹಾಗೂ ಮಾರಾಟಮಾಡಲು ತಮ್ಮದೇ ಕಂಪನಿಯನ್ನು ಪ್ರಾರಂಭಿಸಿದರು. 1985ರಲ್ಲಿ, ಆಪಲ್ ಕಂಪ್ಯೂಟರ್ ಅದರ ಲೇಸರ್ ರೈಟರ್ ಪ್ರಿಂಟರ್ಗಳಲ್ಲಿ ಪೋಸ್ಟ್ಸ್ಕ್ರಿಪ್ಟ್ ಬಳಸಲು ಪರವಾನಗಿ ನೀಡಿತು, ಇದು ಡೆಸ್ಕ್ಟಾಪ್ ಪಬ್ಲಿಷಿಂಗ್ ಕ್ರಾಂತಿಗೆ ಹೊಳಪು ತಂದಿತು. ಲಾಸ್ ಆಲ್ಟೋಸ್, ಕ್ಯಾಲಿಫೋರ್ನಿಯಾದ ಅಡೋಬ್ ಕ್ರೀಕ್ನಿಂದ ಈ ಕಂಪನಿಗೆ ಅಡೋಬ್ ಹೆಸರು ಬಂದಿದೆ, ಇದು ಕಂಪನಿಯ ಸ್ಥಾಪಕರಲ್ಲೊಬ್ಬರ ಮನೆಯ ಹಿಂದೆ ನಡೆಯುತ್ತಿತ್ತು.[3] ಅಡೋಬ್ ತನ್ನ ಹಿಂದಿನ ಪ್ರತಿಸ್ಪರ್ಧಿ ಮ್ಯಾಕ್ರೊಮೀಡಿಯಾವನ್ನು ಡಿಸೆಂಬರ್ 2005ರಲ್ಲಿ ತನ್ನ ವಶಕ್ಕೆ ತೆಗೆದುಕೊಂಡಿತು, ಇದರಿಂದಾಗಿ ಹೊಸ ಉತ್ಪನ್ನಗಳು ಮತ್ತು ಪ್ಲಾಟ್ಫಾರ್ಮ್ಗಳು ಅದರ ಉತ್ಪನ್ನಗಳ ಖಾತೆಗೆ ಸೇರಿಕೊಂಡವು ಅವೆಂದರೆ ಅಡೋಬ್ ಕೋಲ್ಡ್ಫ್ಯೂಶನ್, ಅಡೋಬ್ ಡ್ರೀಮ್ವೇವರ್, ಅಡೋಬ್ ಫ್ಲಾಷ್ ಮತ್ತು ಅಡೋಬ್ ಫ್ಲೆಕ್ಸ್. ಆಗಸ್ಟ್ 2009ರಂತೆ, ಅಡೋಬ್ ಸಿಸ್ಟಮ್ಸ್ 7,564 ಉದ್ಯೋಗಿಗಳನ್ನು ಹೊಂದಿದೆ,[3] ಅದರಲ್ಲಿ ಸುಮಾರು 40%ರಷ್ಟು ಜನರು ಸ್ಯಾನ್ ಜೋಸ್ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಒರ್ಲ್ಯಾಂಡೊ, FL; ಸೀಟಲ್, WA; ಸ್ಯಾನ್ ಫ್ರಾನ್ಸಿಸ್ಕೊ, CA; ಒಟ್ಟಾವ, ಒಂಟಾರಿಯೊ; ಮಿನ್ನೆಯಪೋಲಿಸ್, MN; ನ್ಯೂಟೌನ್, MA; ಸ್ಯಾನ್ ಲೂಯಿಸ್ ಒಬಿಸ್ಪೊ, CA; ಹ್ಯಾಂಬರ್ಗ್, ಜರ್ಮನಿ; ನೋಯ್ಡಾ, ಭಾರತ; ಬೆಂಗಳೂರು, ಭಾರತ; ಬುಚಾರೆಸ್ಟ್, ರೊಮೇನಿಯಾ; ಬೀಜಿಂಗ್, ಚೈನಾ ನಗರಗಳಲ್ಲಿ ಅಡೋಬ್ ತನ್ನ ಪ್ರಧಾನ ಅಭಿವೃದ್ಧಿ ಕಾರ್ಯಚಟುವಟಿಕೆಗಳನ್ನು ಹೊಂದಿದೆ.
ಸಂಸ್ಥೆಯ ಪ್ರಕಾರ | Public (NASDAQ: ADBE) |
---|---|
ಸ್ಥಾಪನೆ | Mountain View, California (1982) |
ಸಂಸ್ಥಾಪಕ(ರು) | Charles Geschke John Warnock |
ಮುಖ್ಯ ಕಾರ್ಯಾಲಯ | San Jose, California, U.S. |
ವ್ಯಾಪ್ತಿ ಪ್ರದೇಶ | Worldwide |
ಪ್ರಮುಖ ವ್ಯಕ್ತಿ(ಗಳು) | Charles Geschke, Founder John Warnock, Founder Shantanu Narayen, President & CEO |
ಉದ್ಯಮ | Computer software[1] |
ಉತ್ಪನ್ನ | See List of Adobe products |
ಆದಾಯ | $ 3.579 billion (2008)[2] |
ಆದಾಯ(ಕರ/ತೆರಿಗೆಗೆ ಮುನ್ನ) | $ 1.028 billion (2008)[2] |
ನಿವ್ವಳ ಆದಾಯ | $ 871.8 million (2008)[2] |
ಒಟ್ಟು ಆಸ್ತಿ | $ 5.821 billion (2008)[2] |
ಒಟ್ಟು ಪಾಲು ಬಂಡವಾಳ | $ 4.410 billion (2008)[2] |
ಉದ್ಯೋಗಿಗಳು | 8,660 (December 2009)[3] |
ಜಾಲತಾಣ | Adobe.com |