ಅರಿಸ್ಟಾಟಲ್
From Wikipedia, the free encyclopedia
ಅರಿಸ್ಟಾಟಲ್ (Greek: Ἀριστοτέλης , ಅರಿಸ್ಟಾಟೆಲೆಸ್ ) (384 BC – 322 BC) ಒಬ್ಬ ಗ್ರೀಕ್ ದಾರ್ಶನಿಕ ಮಾತ್ರವಲ್ಲದೆ, ಪ್ಲೇಟೋನ ಓರ್ವ ವಿದ್ಯಾರ್ಥಿ ಹಾಗೂ ಅಲೆಕ್ಸಾಂಡರ್ನ ಗುರುವಾಗಿದ್ದ. ಭೌತಶಾಸ್ತ್ರ, ತತ್ತ್ವಮೀಮಾಂಸೆ, ಕವಿತೆ, ರಂಗಭೂಮಿ, ಸಂಗೀತ, ತರ್ಕಶಾಸ್ತ್ರ, ಭಾಷಣಶಾಸ್ತ್ರ, ರಾಜಕಾರಣ, ಸರ್ಕಾರ, ನೀತಿಶಾಸ್ತ್ರ, ಜೀವಶಾಸ್ತ್ರ, ಮತ್ತು ಪ್ರಾಣಿಶಾಸ್ತ್ರ ಇವೇ ಮೊದಲಾದವನ್ನು ಒಳಗೊಂಡಂತೆ ಅನೇಕ ವಿಷಯಗಳ ಕುರಿತು ಆತ ಬರೆದ. ಪ್ಲೇಟೋನ ಗುರುವಾದ ಸಾಕ್ರಟಿಸ್ ಮತ್ತು ಪ್ಲೇಟೋನ ಜೊತೆಜೊತೆಗೆ, ಪಾಶ್ಚಿಮಾತ್ಯ ತತ್ತ್ವಶಾಸ್ತ್ರದಲ್ಲಿನ ಅತಿ ಪ್ರಮುಖ ಪ್ರಸಿದ್ಧ ಸಂಸ್ಥಾಪಕರಲ್ಲಿ ಅರಿಸ್ಟಾಟಲ್ ಕೂಡಾ ಒಬ್ಬನಾಗಿದ್ದಾನೆ. ಪಾಶ್ಚಿಮಾತ್ಯ ತತ್ತ್ವಶಾಸ್ತ್ರದ ಒಂದು ವ್ಯಾಪಕವಾದ ಪದ್ಧತಿಯನ್ನು ಸೃಷ್ಟಿಸುವಲ್ಲಿ ಆತ ಮೊದಲಿಗನಾಗಿದ್ದು, ನೀತಿಶಾಸ್ತ್ರ ಮತ್ತು ಸೌಂದರ್ಯ ಮೀಮಾಂಸೆ, ತರ್ಕಶಾಸ್ತ್ರ ಮತ್ತು ವಿಜ್ಞಾನ, ರಾಜಕಾರಣ ಮತ್ತು ತತ್ತ್ವಮೀಮಾಂಸೆ ಇವೇ ಮೊದಲಾದವುಗಳನ್ನು ಈ ಪದ್ಧತಿಯು ಒಳಗೊಂಡಿದೆ. ಭೌತಿಕ ವಿಜ್ಞಾನಗಳ ಕುರಿತಾದ ಅರಿಸ್ಟಾಟಲ್ನ ದೃಷ್ಟಿಕೋನಗಳು ಮಧ್ಯಯುಗದ ಪಾಂಡಿತ್ಯಕ್ಕೆ ಗಾಢವಾದ ಸ್ವರೂಪವನ್ನು ನೀಡಿದವು. ಅಂತಿಮವಾಗಿ ಅವು ನ್ಯೂಟನ್ನನ ಭೌತಶಾಸ್ತ್ರದಿಂದ ಸ್ಥಾನಪಲ್ಲಟಗೊಂಡರೂ ಸಹ, ಅವುಗಳ ಪ್ರಭಾವವು ನವೋದಯ ಕಾಲಕ್ಕೂ ವಿಸ್ತರಿಸಿತು ಎಂದು ಹೇಳಬಹುದು. ಜೈವಿಕ ವಿಜ್ಞಾನಗಳಲ್ಲಿನ ಆತನ ಕೆಲವೊಂದು ವೀಕ್ಷಣೆಗಳು ತುಂಬಾ ನಿಖರವಾಗಿವೆ ಎಂದು ಕೇವಲ ಹತ್ತೊಂಬತ್ತನೇ ಶತಮಾನದಲ್ಲಿ ದೃಢೀಕರಿಸಲ್ಪಟ್ಟವು. ಅತಿ ಮುಂಚಿನದು ಎಂದು ಹೇಳಲಾದ ತರ್ಕಶಾಸ್ತ್ರದ ಔಪಚಾರಿಕ ಅಧ್ಯಯನವು ಆತನ ಕೃತಿಗಳಲ್ಲಿ ಸೇರಿಕೊಂಡಿದ್ದು, ಅದನ್ನು ಹತ್ತೊಂಬತ್ತನೇ ಶತಮಾನದ ಅಂತ್ಯದ ವೇಳೆಗೆ ಆಧುನಿಕ ಔಪಚಾರಿಕ ತರ್ಕಶಾಸ್ತ್ರದೊಳಗೆ ಅಳವಡಿಸಲಾಯಿತು. ತತ್ತ್ವಮೀಮಾಂಸೆಗೆ ಸಂಬಂಧಿಸಿ ಹೇಳುವುದಾದರೆ, ಮಧ್ಯ ಯುಗಗಳಲ್ಲಿನ ಇಸ್ಲಾಂ ಹಾಗೂ ಯೆಹೂದೀಯ ಸಂಪ್ರದಾಯಗಳಲ್ಲಿರುವ ತತ್ವಶಾಸ್ತ್ರದ ಮತ್ತು ದೇವತಾಶಾಸ್ತ್ರದ ಚಿಂತನಾ ಲಹರಿಗಳ ಮೇಲೆ ಅರಿಸ್ಟಾಟಲ್ ಸಿದ್ಧಾಂತವು ವ್ಯಾಪಕವಾದ ಪ್ರಭಾವವನ್ನು ಹೊಂದಿತ್ತು. ಇದು ಇಷ್ಟಕ್ಕೇ ನಿಲ್ಲದೇ, ಕ್ರೈಸ್ತ ದೇವತಾಶಾಸ್ತ್ರದ, ಅದರಲ್ಲೂ ವಿಶೇಷವಾಗಿ ಪೌರಸ್ತ್ಯ ಸಾಂಪ್ರದಾಯಿಕ ದೇವತಾಶಾಸ್ತ್ರ, ಮತ್ತು ಕೆಥೊಲಿಕ್ ಚರ್ಚ್ನ ವಿದ್ವತ್ಪೂರ್ಣ ಸಂಪ್ರದಾಯದ ಮೇಲೂ ಪ್ರಭಾವವನ್ನು ಬೀರುತ್ತಿದೆ. ಆತನ ನೀತಿಶಾಸ್ತ್ರ ಯಾವಾಗಲೂ ಪ್ರಭಾವಶಾಲಿಯಾಗಿದ್ದರೂ ಸಹ, ಆಧುನಿಕ ಸದ್ಗುಣ ನೀತಿಶಾಸ್ತ್ರದ ಉದಯವಾಗುವುದರೊಂದಿಗೆ ಹೊಸಚೈತನ್ಯದೊಂದಿಗಿನ ಆಸಕ್ತಿಯನ್ನು ಗಳಿಸಿದವು. ಅರಿಸ್ಟಾಟಲ್ನ ತತ್ತ್ವಶಾಸ್ತ್ರದ ಎಲ್ಲಾ ಮಗ್ಗುಲುಗಳೂ, ವಿದ್ವತ್ಪೂರ್ಣವಾದ ಅಥವಾ ಪ್ಲೇಟೋವಿನ ತಾತ್ವಿಕ ಪಂಥಕ್ಕೆ ಸಂಬಂಧಿಸಿದ ಇಂದಿನ ಕ್ರಿಯಾಶೀಲ ಅಧ್ಯಯನದ ಕೇಂದ್ರವಸ್ತುವಾಗಿಯೇ ಮುಂದುವರಿದುಕೊಂಡು ಬಂದಿವೆ. ಸುಸಂಸ್ಕೃತವಾದ ಅನೇಕ ಪ್ರಕರಣ ಗ್ರಂಥಗಳು ಹಾಗೂ ಸಂಭಾಷಣಾ ರೂಪದ ಗ್ರಂಥಗಳನ್ನು ಅರಿಸ್ಟಾಟಲ್ ಬರೆದನಾದರೂ, (ಆತನ ಸಾಹಿತ್ಯಿಕ ಶೈಲಿಯನ್ನು "ಬಂಗಾರದ ಒಂದು ನದಿ" ಎಂದು ಸಿಸೆರೊ ವರ್ಣಿಸಿದ್ದಾನೆ),[1] ಆತನ ಬಹುಪಾಲು ಬರಹಗಳು ಈಗ ಇಲ್ಲವಾಗಿವೆ ಮತ್ತು ಆತನ ಮೂಲಕೃತಿಗಳ ಪೈಕಿ ಕೇವಲ ಮೂರನೇ ಒಂದು ಭಾಗ ಮಾತ್ರವೇ ಸದ್ಯಕ್ಕೆ ಲಭ್ಯವಿವೆ ಎಂಬ ಅಭಿಪ್ರಾಯವೂ ಚಾಲ್ತಿಯಲ್ಲಿದೆ.[2]
ಜನನ | 384 BC ಸ್ಟಾಗಿರ, Chalcidice |
---|---|
ಮರಣ | 322 BC ಯೂಬಿಯ |
ಕಾಲಮಾನ | Ancient philosophy |
ಪ್ರದೇಶ | Western philosophy |
ಪರಂಪರೆ | Peripatetic school Aristotelianism |
ಮುಖ್ಯ ಹವ್ಯಾಸಗಳು | ಭೌತಶಾಸ್ತ್ರ, Metaphysics, ಕಾವ್ಯ, ರಂಗಭೂಮಿ, ಸಂಗೀತ, Rhetoric, ರಾಜಕಾರಣ, ಸರಕಾರ, ಮೌಲ್ಯ, ಜೀವಶಾಸ್ತ್ರ, Zoology |
ಗಮನಾರ್ಹ ಚಿಂತನೆಗಳು | Golden mean, Reason, Logic, Passion |
ಪ್ರಭಾವಕ್ಕೋಳಗಾಗು
| |
ಪ್ರಭಾವ ಬೀರು
|