ಆಂಬ್ರೋಸ್ ಗ್ವಿನ್ನೆಟ್ಟ್ ಬೀಎರ್ಸ್
From Wikipedia, the free encyclopedia
ಆಂಬ್ರೋಸ್ ಗ್ವಿನ್ನೆಟ್ಟ್ ಬೀಎರ್ಸ್ ರವರು ೨೪ ಜೂನ್, ೧೮೪೨ರಂದು ಹಾರ್ಸ್ ಕ್ರೇವ್ ಕ್ರಿಕ್ನಲ್ಲಿ ಜನಿಸಿದರು. ಅವರ ತಂದೆಯ ಹೆಸರು ಲಾರ ಶರ್ವುಡ್ ಮತ್ತು ತಾಯಿಯ ಹೆಸರು ಮಾರ್ಕಸ್ ಆರೀಲಿಯಸ್ ಬೀಎರ್ಸ್. ತಂದೆ ತಾಯಿ ಬಡವರಾಗಿದ್ದರು ಸಹ, ವಿದ್ಯಾವಂತರಾಗಿದ್ದರು. ಆಂಬ್ರೋಸ್ರಲ್ಲಿ ಪುಸ್ತಕದ ಬಗ್ಗೆ, ಹಾಗು ಬರವಣಿಗೆಯ ಕುರಿತಾಗಿ ಪ್ರೆಮ ಹುಟ್ಟಲು ಕಾರಣರಾದರು. ಅವರಿಗೆ ಹದಿಮೂರು ಜನ ಮಕ್ಕಳು, ಆಂಬ್ರೋಸ್ ಹತ್ತನೇಯವರಾಗಿದ್ದರು. ಬಾಲ್ಯವನ್ನು ಇಂಡಿಯಾನ ಎಂಬ ಊರಿನಲ್ಲಿ ಕಳೆದರು. ಹದಿನೈದು ವರ್ಷದಲ್ಲಿ ಆಂಬ್ರೋಸ್ರವರು, ಓಹಿಯೋನ ಚಿಕ್ಕ ಪತ್ರಿಕೆಯಲ್ಲಿ, "ಪ್ರಿಂಟರ್'ಸ್ ಡೆವಿಲ್" ಆಗಿ ಕೆಲಸನಿರ್ವಹಿಸಲು ಮನೆ ತೊರೆದರು.[1]