ಆಧುನಿಕ ವಿಜ್ಞಾನ
From Wikipedia, the free encyclopedia
ವಿಜ್ಞಾನದ ಇತಿಹಾಸ ಎಂದರೆ ನೈಸರ್ಗಿಕ ವಿಶ್ವವನ್ನು ಮನುಷ್ಯರು ಅರ್ಥಮಾಡಿಕೊಳ್ಳುವಿಕೆಯ ಐತಿಹಾಸಿಕ ಬೆಳವಣಿಗೆಯ ಅಧ್ಯಯನ ಎನ್ನಬಹುದು. 20ನೇ ಶತಮಾನದ ಕೊನೆಯವರೆಗೆ ವಿಜ್ಞಾನದ ಇತಿಹಾಸ, ವಿಶೇಷವಾಗಿ ಭೌತಿಕ ಮತ್ತು ಜೀವಶಾಸ್ತ್ರೀಯ ವಿಜ್ಞಾನಗಳು ತಪ್ಪು ಸಿದ್ಧಾಂತಗಳ ಮೇಲೆ ನೈಜ ಸಿದ್ಧಾಂತಗಳ ವಿಜಯವನ್ನು ಸಾರುವ ನಿರೂಪಣೆಗಳ ಹಾಗೆ ಕಾಣಲಾಗುತ್ತಿತ್ತು. ವಿಜ್ಞಾನವು ನಾಗರಿಕತೆಯ ಪ್ರಗತಿಯ ಒಂದು ಬಹುಮುಖ್ಯ ಆಯಾಮವೆಂದೇ ಚಿತ್ರಿತವಾಗಿದೆ. ಇತ್ತೀಚಿನ ದಶಕಗಳಲ್ಲಿ, ಆಧುನಿಕೋತ್ತರ ದೃಷ್ಟಿಕೋನಗಳು, ಮುಖ್ಯವಾಗಿ ಥಾಮಸ್ ಕ್ಹುನ್ ಅವರ ದಿ ಸ್ಟ್ರಕ್ಚರ್ ಆಫ್ ಸೈಂಟಿಫಿಕ್ ರೆವಲ್ಯೂಶನ್ಸ್ (1962)ನಿಂದ ಪ್ರಭಾವಿತಗೊಂಡಿದೆ. ಇತಿಹಾಸವನ್ನು ಶುದ್ಧ ವಿಜ್ಞಾನದ ಹೊರಗೆ ಬೌದ್ಧಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ವಸ್ತುಗಳನ್ನು ಒಳಗೊಳ್ಳುವ ವಿಶಾಲ ಮಾತೃಕೆಯಲ್ಲಿ ಬೌದ್ಧಿಕ ಪಾರಮ್ಯಕ್ಕಾಗಿ ಹೋರಾಡುವ ಸ್ಪರ್ಧಾತ್ಮಕ ಮಾದರಿಗಳು ಅಥವಾ ಪರಿಕಲ್ಪನಾತ್ಮಕ ವ್ಯವಸ್ಥೆಗಳು ಎಂಬಂತೆ ನೋಡಲಾಗುತ್ತಿದೆ. ವಿಜ್ಞಾನದ ಹೊರಗಿನ ಪಾಶ್ಚಿಮಾತ್ಯ ಯುರೋಪ್ನ ಸಂದರ್ಭಕ್ಕೆ ಹೆಚ್ಚಿನ ಗಮನವನ್ನು ನೀಡಲಾಗುತ್ತಿದೆ. ವಿಜ್ಞಾನ ವು ನೈಸರ್ಗಿಕ ವಿಶ್ವದ ಕುರಿತು ಪ್ರಯೋಗವಾದಿ, ಸೈದ್ಧಾಂತಿಕ, ಮತ್ತು ಪ್ರಾಯೋಗಿಕ ಜ್ಞಾನದ ಒಂದು ವ್ಯವಸ್ಥೆಯಾಗಿದೆ. ಇದನ್ನು ಸಂಶೋಧಕರು ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಂಡು ಹುಟ್ಟುಹಾಕುತ್ತಾರೆ. ಈ ವಿಧಾನಗಳು ವೀಕ್ಷಣೆ, ವಿವರಣೆ ಮತ್ತು ನೈಜ ಜಗತ್ತಿನ ಪ್ರತ್ಯಕ್ಷ ವಿಚಾರಗಳನ್ನು ಪ್ರಯೋಗಗಳ ಮೂಲಕ ಊಹೆ ಮಾಡುವುದಕ್ಕೆ ಒತ್ತುನೀಡುತ್ತದೆ. ವಿಜ್ಞಾನವು ವಸ್ತುನಿಷ್ಠ ಜ್ಞಾನವೂ ಆಗಿದೆ ಮತ್ತು ಮನುಷ್ಯರಚಿತ ಜ್ಞಾನವೂ ಆಗಿದೆ, ವಿಜ್ಞಾನದ ಈ ದ್ವಂದ್ವ ಸ್ಥಿತಿಯಲ್ಲಿ, ವಿಜ್ಞಾನದ ಉತ್ತಮ ಚರಿತ್ರೆ ರಚನೆಯು ಬೌದ್ಧಿಕ ಇತಿಹಾಸ ಮತ್ತು ಸಾಮಾಜಿಕ ಇತಿಹಾಸ, ಈ ಎರಡೂ ಐತಿಹಾಸಿಕ ವಿಧಾನಗಳ ಮೇಲೆ ರೂಪಿತವಾಗುತ್ತದೆ. ಆಧುನಿಕ ವಿಜ್ಞಾನದ ನಿಖರವಾದ ಮೂಲಗಳನ್ನು ಗುರುತಿಸುವುದು ಶಾಸ್ತ್ರೀಯಗ್ರಂಥ ಜಗತ್ತಿನಲ್ಲಿ ಉಳಿದುಕೊಂಡಿರುವ ಅನೇಕ ಮುಖ್ಯವಾದ ಗ್ರಂಥಗಳ ಮೂಲಕ ಸಾಧ್ಯವಿದೆ. ಆದರೆ ಸೈಂಟಿಸ್ಟ್ (ವಿಜ್ಞಾನಿ) ಎಂಬ ಪದವು ಇತ್ತೀಚೆಗೆ ವ್ಯುತ್ಪನ್ನಗೊಂಡಿದೆ. ಇದನ್ನು ಮೊದಲು ವಿಲಿಯಂ ವ್ಹೆವೆಲ್ 19ನೇ ಶತಮಾನದಲ್ಲಿ ಮೊದಲು ಬಳಸಿದನು. ಅದಕ್ಕಿಂತ ಮೊದಲು, ನಿಸರ್ಗವನ್ನು ಪರಿಶೀಲಿಸುವ ಜನರು ತಮ್ಮನ್ನು ತಾವು ನೈಸರ್ಗಿಕ ತತ್ವಶಾಸ್ತ್ರಜ್ಞರು ಎಂದು ಕರೆದುಕೊಂಡಿದ್ದರು. ನೈಸರ್ಗಿಕ ವಿಶ್ವದ ಪ್ರಯೋಗವಾದಿ ಶೋಧಗಳನ್ನು ಶಾಸ್ತ್ರೀಯ ಪ್ರಾಚೀನ ಕಾಲ (ಕ್ಲಾಸಿಕಲ್ ಆಂಟಿಕ್ವಿಟಿ)ದಿಂದಲೂ ವಿವರಿಸಲಾಗಿದೆ. (ಉದಾಹರಣೆಗೆ, ಥೇಲ್ಸ್, ಅರಿಸ್ಟಾಟಲ್ ಮತ್ತು ಇನ್ನಿತರರಿಂದ). ಅಲ್ಲದೇ ವೈಜ್ಞಾನಿಕ ವಿಧಾನಗಳನ್ನು ಮಧ್ಯಕಾಲೀನ ಯುಗದಿಂದ ಅಳವಡಿಸಿಕೊಳ್ಳಲಾಗಿದೆ. (ಉದಾಹರಣೆಗೆ ಇಬ್ನ್ ಅಲ್ ಹೇಥಮ್, ಅಬು ರೇಹಾನ್ ಅಲ್-ಬಿರೂನಿ ಮತ್ತು ರೋಜರ್ ಬೇಕನ್ ನ). ಆಧುನಿಕ ವಿಜ್ಞಾನದ ಆರಂಭವನ್ನು ಸಾಮಾನ್ಯವಾಗಿ ಆರಂಭಿಕ ಆಧುನಿಕ ಕಾಲಘಟ್ಟದಿಂದ ಎನ್ನಲಾಗುತ್ತದೆ. ಆಗ ವೈಜ್ಞಾನಿಕ ಕ್ರಾಂತಿಯು 16ನೇ ಮತ್ತು 17ನೇ ಶತಮಾನದ ಯೂರೋಪ್ನಲ್ಲಿ ಜರುಗಿತು. ವೈಜ್ಞಾನಿಕ ವಿಧಾನಗಳನ್ನು ಆಧುನಿಕ ವಿಜ್ಞಾನಕ್ಕೆ ತುಂಬಾ ಮೂಲಭೂತವಾದದ್ದು ಎಂದು ಪರಿಗಣಿಸಲಾಗುತ್ತದೆ. ಎಷ್ಟರಮಟ್ಟಿಗೆ ಎಂದರೆ ಕೆಲವು, ವಿಶೇಷವಾಗಿ, ವಿಜ್ಞಾನದ ತತ್ವಶಾಸ್ತ್ರಜ್ಞರು ಮತ್ತು ವೃತ್ತಿನಿರತ ವಿಜ್ಞಾನಿಗಳು —ನಿಸರ್ಗದ ಕುರಿತ ಹಿಂದಿನ ಪರಿಶೋಧನೆಗಳನ್ನು ವೈಜ್ಞಾನಿಕ-ಪೂರ್ವ ಎಂದೇ ಪರಿಗಣಿಸುತ್ತಾರೆ. ಸಾಂಪ್ರದಾಯಿಕವಾಗಿ, ವಿಜ್ಞಾನದ ಇತಿಹಾಸಕಾರರು ವಿಜ್ಞಾನವನ್ನು ಆ ಹಿಂದಿನ ಪರಿಶೋಧನೆಗಳನ್ನು ಒಳಗೊಳ್ಳುವ ಹಾಗೆ ವಿಸ್ತೃತವಾಗಿ ವ್ಯಾಖ್ಯಾನಿಸುತ್ತಾರೆ.[1]