ಇಮಾ ಮಾರುಕಟ್ಟೆ
From Wikipedia, the free encyclopedia
ಇಮಾ ಕೇಥಲ್ (ಅಮ್ಮಂದಿರ ಮಾರುಕಟ್ಟೆ) (ಇಮಾ ಮಾರುಕಟ್ಟೆ ಅಥವಾ ನೂಪಿ ಕೇಥಲ್ ಎಂದೂ ಪರಿಚಿತವಾಗಿದೆ) ಮಣಿಪುರ ರಾಜ್ಯದ ಇಂಫಾಲದಲ್ಲಿರುವ ಕೇವಲ ಮಹಿಳೆಯರು ನಡೆಸುವ ಒಂದು ಮಾರುಕಟ್ಟೆಯಾಗಿದೆ.[1][2] ಇದು ಮಣಿಪುರ ರಾಜ್ಯದಲ್ಲಿ ಒಂದು ವಾಣಿಜ್ಯ ಕೇಂದ್ರ ಮತ್ತು ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಇದು ತನ್ನ ಸ್ಥಳವನ್ನು ಇಂಫಾಲ್ ನಗರದೊಳಗೆ ಬದಲಾಯಿಸಿದೆ ಮತ್ತು ಪ್ರಸಕ್ತವಾಗಿ ಖವೈರಾಬಂದ್ ಬಜ಼ಾರ್ನಲ್ಲಿ ಸ್ಥಿತವಾಗಿದೆ.[3] ಇದನ್ನು ೧೬ನೇ ಶತಮಾನದಲ್ಲಿ ಸ್ಥಾಪಿಸಲಾಯಿತು ಮತ್ತು ವಿವಿಧ ಉತ್ಪನ್ನಗಳನ್ನು ಮಾರುವ ಸುಮಾರು ೫,೦೦೦-೬,೦೦೦ ಮಹಿಳಾ ಮಾರಾಟಗಾರರನ್ನು ಹೊಂದಿದೆ.[4][5] ಈ ಮಾರುಕಟ್ಟೆಯಲ್ಲಿ ತರಕಾರಿಗಳು, ಹಣ್ಣುಗಳು, ವಸ್ತ್ರಗಳು, ಆಟಿಕೆಗಳು, ಮೀನು, ಸಂಬಾರ ಪದಾರ್ಥಗಳು ಮತ್ತು ಪಾತ್ರೆಪಡಗಗಳಂತಹ ಉತ್ಪನ್ನಗಳು ಲಭ್ಯವಿವೆ.[6] ಇದು ಏಷ್ಯಾದಲ್ಲಿನ ಅತಿ ದೊಡ್ಡ ಮಹಿಳಾ ಮಾರುಕಟ್ಟೆಯಾಗಿದೆ.[7]