ಕಾಗೆ
From Wikipedia, the free encyclopedia
other uses ಗಾಗಿ, ಕಾಗೆ (disambiguation) ನೋಡಿ.
ಕೋರ್ವಿಡೇ ಪಕ್ಷಿ ಸಂತತಿ ಕುಲಕ್ಕೆ ಸೇರಿದ ಒಂದು ಹಕ್ಕಿ. ಈ ಹಕ್ಕಿಗಳು ದಕ್ಷಿಣ ಅಮೇರಿಕಾದ ದಕ್ಷಿಣದ ಭಾಗ ] ಬಿಟ್ಟರೆ, ಜಗತ್ತಿನ ಮತ್ತೆಲ್ಲ ಕಡೆಗಳಲ್ಲೂ ಕಾಣಸಿಗುತ್ತವೆ. ಅದರಲ್ಲಿಯೂ ದಕ್ಷಿಣ ಅಮೇರಿಕಾ, ಮಧ್ಯ ಅಮೇರಿಕಾ, ಯೂರೋಪ್ ಮತ್ತು ಏಷಿಯಾಗಳಲ್ಲಿ ಇವು ಪ್ರಧಾನವಾಗಿ ಕಂಡು ಬರುತ್ತವೆ. ಕಾಗೆಗಳಲ್ಲಿ ಕ್ರೋ (ಭಾರತದ ಕಾಗೆ), ರೂಕ್, ಜಾಕ್ ಡಾ, ಜೇ, ಮ್ಯಾಗ್ ಪೈ, ಟ್ರೀ ಪೈ ಇತ್ಯಾದಿ ಒಟ್ಟು ನೂರಿಪ್ಪತ್ತು ಪ್ರಭೇದಗಳಿವೆ. ಪ್ರತಿ ಖಂಡದಲ್ಲಿ ಸುಮಾರು ಹತ್ತು ಪ್ರಭೇದಗಳು ಕಾಣಸಿಕ್ಕರೆ, ಇಥಿಯೋಪಿಯಾ ದ ಮೇಲ್ಭಾಗದ ಪಕ್ಷಿಗಳ ತಾಣ ರೆವೆನ್ ನಲ್ಲಿ ೪೦ಕ್ಕೂ ಹೆಚ್ಚಿನ ಪ್ರಬೇಧಗಳು ಇಲ್ಲಿ ವಾಸಿಸುತ್ತವೆ. ಕಾಗೆಗಳನ್ನು ಹಕ್ಕಿ ಜಗತ್ತಿನಲ್ಲಿಯೇ ಅತಿ ಬುದ್ಧಿವಂತ ಪಕ್ಷಿ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ ಇವು ಪ್ರಾಣಿಜಗತ್ತಿನಲ್ಲಿಯೂ ಅತಿ ಬುದ್ಧಿವಂತ ಪ್ರಾಣಿಗಳಲ್ಲಿ ಒಂದು. ಇದು ವರ್ಷವಿಡೀ ಕಾಣಲು ಸಿಗುವ ಪಕ್ಷಿ.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (July ೨೦೦೭) |
Quick Facts ಕಾಗೆ, Scientific classification ...
ಕಾಗೆ | |
---|---|
hooded crow (Corvus corone cornix) | |
Scientific classification | |
ಸಾಮ್ರಾಜ್ಯ: | animalia |
ವಿಭಾಗ: | ಖೋರ್ಡಾಟ |
ವರ್ಗ: | ಪಕ್ಷಿವರ್ಗ |
ಗಣ: | ಪಸ್ಸೇರಿಫರ್ಮಿಸ್ |
ಕುಟುಂಬ: | ಕೊರ್ವಿಡೆ |
ಕುಲ: | ಕೊರ್ವಸ್ Linnaeus, ೧೭೫೮ |
Species | |
See text. |
Close