ಕೆಂಪು ಸಮುದ್ರ
ಕೆ೦ಪು ಸಮುದ್ರ ಭರತೀಯ ಸಮುದ್ರದ ಒಳಹರಿವು / From Wikipedia, the free encyclopedia
Lua error in package.lua at line 80: module 'Module:Pagetype/setindex' not found.
Red Sea | |
---|---|
ನಿರ್ದೇಶಾಂಕಗಳು | 22°00′N 38°00′E |
ಗರಿಷ್ಠ ಉದ್ದ | 2,250 km (1,400 mi) |
ಗರಿಷ್ಠ ಅಗಲ | 355 km (221 mi) |
ಮೇಲ್ಮೈ ಪ್ರದೇಶ | 438,000 km2 (169,000 sq mi) |
ಸರಾಸರಿ ಆಳ | 490 m (1,610 ft) |
ಗರಿಷ್ಠ ಆಳ | 2,211 m (7,254 ft) |
ನೀರಿನ ಪ್ರಮಾಣ | 233,000 km3 (56,000 cu mi) |
ಕೆಂಪು ಸಮುದ್ರವು ಹಿಂದೂ ಮಹಾಸಾಗರದ ಕಡಲಾಚೆಯ ಆಫ್ರಿಕಾ ಮತ್ತು ಏಷ್ಯಾ ಖಂಡದ ನಡುವೆ ಇರುವ ಸಮುದ್ರವಾಗಿದೆ. ಬಾಬ್ ಎಲ್ ಮಾನ್ಡೆಬ್ ಮತ್ತು ಆಡೆನ್ ಕೊಲ್ಲಿ ಮೂಲಕ ದಕ್ಷಿಣದಲ್ಲಿ ಸಂಪರ್ಕವನ್ನು ಪಡೆದಿದೆ. ಉತ್ತರದಲ್ಲಿ ಸಿನಾಯ್ ಪರ್ಯಾಯದ್ವೀಪ ಅಖಾಬಾ ಕೊಲ್ಲಿ ಮತ್ತು ಸುಯೋಜ್ ಕೊಲ್ಲಿ ಸುಯೋಜ್ ಕಾಲುವೆಗೆ ಸೇರುತ್ತದೆ). ಕೆಂಪು ಸಮುದ್ರವು ಜಾಗತಿಕವಾಗಿ 200 ಪರಿಸರ ಪ್ರದೇಶವಾಗಿದೆ. ರಿಫ್ಟ್ ವ್ಯಾಲಿಯ ಒಂದು ಭಾಗವನ್ನು ವ್ಯಾಪಿಸಿರುವ ಕೆಂಪು ಸಮುದ್ರದವು ಸುಮಾರು 438,000 ಕಿ.ಮೀ² 169,100 ಮೈಲಿಗಳು) ವಿಸ್ತೀರ್ಣ ಪ್ರದೇಶವವನ್ನು ಹೊಂದಿದೆ.[1][2] ಇದು ಸುಮಾರು 2250 ಕಿಮೀ(1398 ಮೈಲಿಗಳು) ಉದ್ದ, ಮತ್ತು ಇದರ ವಿಶಾಲ 355 ಕಿಮೀ (220.6 ಮೈಲಿಗಳು) ಹೊಂದಿದೆ. ಇದರ ಗರಿಷ್ಟ ಆಳ ಮಧ್ಯದ ಕಂದಕದಲ್ಲಿ ಸುಮಾರು 2211 ಮೀಟರ್, ಮತ್ತು ಸರಾಸರಿ ಆಳ 490(1,608 ಅಡಿ) ಮೀಟರ್ಗಳಾಗಿವೆ. ಆದಾಗ್ಯೂ, ವ್ಯಾಪಕವಾದ ಆಳವಲ್ಲದ ಮರಳುದಂಡೆಯನ್ನು ಹೊಂದಿದ್ದು ಇದರಿಂದಾಗಿ ಸಮುದ್ರ ಜೀವಿಗಳು ಮತ್ತು ಹವಳಗಳಿಗೆ ಹೆಸರು ಪಡೆದಿದೆ. ಸಮುದ್ರವು 1,000 ಅಕಶೇರುಕಗಳು ಮತ್ತು 200 ಮೃದುವಾದ ಮತ್ತು ಕಠಿಣವಾದ ಹವಳಗಳಿವೆ ಆವಾಸಸ್ಥಾನವಾಗಿದೆ. ಇದು ಪ್ರಪಂಚದ ಅತ್ಯಂತ ಉತ್ತರದಲ್ಲಿರುವ ಉಷ್ಣವಲಯದ ಸಮುದ್ರವಾಗಿದೆ.