ಕೆಪ್ಲರ್-೬೨ಎಫ್
From Wikipedia, the free encyclopedia
ಸೂಪರ್ ಅರ್ಥ್ ಎಕ್ಸೊಪ್ಲನೆಟ್ ಎಂದು ಕರೆಯಲಾದ ಕೆಪ್ಲರ್-೬೨ಎಫ್ (KOI-701.04) , ವಾಸಯೋಗ್ಯ ವಲಯದಲ್ಲಿ ಪರಿಭ್ರಮಿಸುತ್ತದೆ. ನಾಸಾದ ಕೆಪ್ಲೆರ್ ಉಪಗ್ರಹದಿಂದ ಕಂಡುಹಿಡಿದ ಐದು ಗ್ರಹಗಳ ಪೈಕಿ ಇದು ಒಂದು. ಈ ಸೌರಾತೀತ ಗ್ರಹ ಹೊರವಲಯದ ಕಕ್ಷೆಯಲ್ಲಿ ಪರಿಭ್ರಮಿಸುತ್ತಿದೆ. ಈ ಗ್ರಹವನ್ನು ಏಪ್ರಿಲ್ ೨೦೧೩ರಲ್ಲಿ ಕಂಡುಹಿಡಿದರು. ಇದು ಲೈರಾ[1] ಎಂಬ ನಕ್ಷತ್ರಪುಂಜದಲ್ಲಿದೆ ಮತ್ತು ಭೂಮಿಯಿಂದ ೧೨೦೦ ಜ್ಯೋತಿರ್ವರ್ಷಗಳ (ಸುಮಾರು ೧.೧೩೫x೧೦೧೬ ಕಿ.ಮಿ) ದೂರದಲ್ಲಿದೆ. ಈ ಸೌರಾತೀತ ಗ್ರಹ, ಬಂಡೆ ಮತ್ತು ನೀರಿನಿಂದ ತುಂಬಿಕೊಂಡಿದೆ.