ಕೊಚ್ಚಿ
ಭಾರತದ ನಗರ / From Wikipedia, the free encyclopedia
ಕೊಚ್ಚಿ (ಮಲಯಾಳಂ: കൊച്ചി, pronounced [koˈtʃːi] ( listen))ಮುಂಚೆ ಕೊಚ್ಚಿನ್ ಎಂದು ಹೆಸರಾಗಿತ್ತು. ಇದು ಭಾರತದ ಕೇರಳ ರಾಜ್ಯದ ಒಂದು ನಗರ. ಈ ನಗರವು, ರಾಷ್ಟ್ರದ ಪ್ರಧಾನ ಬಂದರುಗಳಲ್ಲಿ ಒಂದಾಗಿದೆ ಹಾಗು ಇದು ಎರ್ನಾಕುಲಂ ಜಿಲ್ಲೆಯಲ್ಲಿ ನೆಲೆ ಹೊಂದಿರುವುದರ ಜೊತೆಗೆ, ಸುಮಾರು220 kilometres (137 mi)ರಷ್ಟು ರಾಜ್ಯದ ರಾಜಧಾನಿ ತಿರುವನಂತಪುರಂನ ಉತ್ತರ ಭಾಗದಲ್ಲಿದೆ. ನಗರವು ಅಂದಾಜು 600,000ದಷ್ಟು ಜನಸಂಖ್ಯೆಯನ್ನು ಹೊಂದಿರುವುದರ ಜೊತೆಗೆ 1.5 ದಶಲಕ್ಷ ವಿಸ್ತಾರವಾದ ಮೆಟ್ರೋಪಾಲಿಟನ್ ಜನಸಂಖ್ಯೆಯನ್ನು ಹೊಂದಿದೆ. ಇದು ನಗರವನ್ನು ಅತಿ ದೊಡ್ಡ ವಿಸ್ತರಿತ ನಗರವನ್ನಾಗಿ ಮಾಡುವುದರ ಜೊತೆಗೆ ರಾಜ್ಯದ ರಾಜಧಾನಿಯ ನಂತರ ಕೇರಳದ ಎರಡನೇ ಅತಿ ದೊಡ್ಡ ನಗರವೆನಿಸಿದೆ.
ಕೊಚ್ಚಿ
ಕೊಚ್ಚಿ | |
---|---|
city | |
Nickname: ಅರಬ್ಬಿ ಸಮುದ್ರದ ರಾಣಿ | |
Population (2001) | |
• city | ೫,೬೪,೫೮೯ |
• Metro | ೧೫,೪೧,೧೭೫ |
Website | www.corporationofcochin.org |
ಕಳೆದ 1102 CEಯಲ್ಲಿ, ಕೊಚ್ಚಿಯು ಕೊಚ್ಚಿನ್ ಸಾಮ್ರಾಜ್ಯದ ಸ್ಥಾನವಾಗಿತ್ತು. ಒಂದು ರಾಜಪ್ರಭುತ್ವದಲ್ಲಿದ್ದ ಈ ನಗರದ ವಂಶಾವಳಿಯ ಕುರುಹು ಕುಲಶೇಖರ ಸಾಮ್ರಾಜ್ಯದ ಜೊತೆಗೆ ಸಿಗುತ್ತದೆ. ಕ್ವೀನ್ ಆಫ್ ಅರೇಬಿಯನ್ ಸೀ ಎಂಬ ಪ್ರಶಂಸೆಯನ್ನು ಪಡೆದಿದ್ದ ಕೊಚ್ಚಿ ನಗರವು 14ನೇ ಶತಮಾನದಿಂದೀಚೆಗೆ ಅರಬ್ಬೀ ಸಮುದ್ರದ ಕರಾವಳಿ ತೀರದ ಪ್ರಮುಖ ಸಂಬಾರ-ಪದಾರ್ಥಗಳ ವ್ಯಾಪಾರ ಕೇಂದ್ರವಾಗಿತ್ತು. ಪುರಾತನ ಪ್ರವಾಸಿಗಳು ಹಾಗು ವ್ಯಾಪಾರಸ್ಥರು ಕೊಚ್ಚಿ ನಗರವನ್ನು ತಮ್ಮ ಬರವಣಿಗೆಗಳ ಮೂಲಕ ಉಲ್ಲೇಖಿಸಿದ್ದಾರೆ, ನಗರವನ್ನು ವಿಧವಿಧವಾಗಿ ಕೋಸಿಂ , ಕೊಚ್ಯಂ , ಕೊಚ್ಚಿನ್ , ಹಾಗು ಕೊಚ್ಚಿ ಎಂದು ಕರೆಯಲಾಗಿದೆ. ಪೋರ್ಚುಗೀಸರಿಂದ 1503ರಲ್ಲಿ ಆಕ್ರಮಣಕ್ಕೊಳಗಾದ ಕೊಚ್ಚಿ ನಗರವು ಭಾರತದಲ್ಲಿ ಯುರೋಪಿಯನ್ ವಸಾಹತು ನೆಲೆಯ ಮೊದಲ ಪ್ರದೇಶವಾಗಿದೆ. ಕಳೆದ 1530ರವರೆಗೂ ಪೋರ್ಚುಗೀಸ್ ಇಂಡಿಯಾದ ರಾಜಧಾನಿಯಾಗಿ ಉಳಿದಿತ್ತು, ಅವರು ನಂತರ ಗೋವಾವನ್ನು ತಮ್ಮ ರಾಜಧಾನಿಯನ್ನಾಗಿ ಆಯ್ಕೆ ಮಾಡಿದರು. ನಗರವು ನಂತರದಲ್ಲಿ ಡಚ್, ಮೈಸೂರು ಹಾಗು ಬ್ರಿಟಿಶ್ ರ ಸ್ವಾಧೀನಕ್ಕೆ ಒಳಪಟ್ಟಿತು.
ಕೊಚ್ಚಿ ನಗರವು 2000ದ ನಂತರ ಆರ್ಥಿಕ ಬೆಳವಣಿಗೆಯ ಅವಧಿಯನ್ನು ಪ್ರವೇಶಿಸಿತು, ಇದು ನಗರದ ಬಿರುಸಿನ ಬೆಳವಣಿಗೆಗೆ ದಾರಿ ಕಲ್ಪಿಸಿತು. ಹಡಗು ನಿರ್ಮಾಣ, ಅಂತಾರಾಷ್ಟ್ರೀಯ ವ್ಯಾಪಾರ, ಪ್ರವಾಸೋದ್ಯಮ ಹಾಗು ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯ ಕೇಂದ್ರವಾದ ಕೊಚ್ಚಿಯು ಕೇರಳದ ವಾಣಿಜ್ಯ ಕೇಂದ್ರವಾಗಿದೆ, ಜೊತೆಗೆ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎರಡನೆ-ಶ್ರೇಣಿಯ ಮೆಟ್ರೋ ಗಳಲ್ಲಿ ಒಂದಾಗಿದೆ. ಅಭಿವೃದ್ಧಿಶೀಲ ಜಗತ್ತಿನ ಇತರ ದೊಡ್ಡ ನಗರಗಳಂತೆ, ಕೊಚ್ಚಿಯು ಸಹ ಸಂಚಾರ ದಟ್ಟಣೆ ಹಾಗು ಪರಿಸರ ನಾಶದಂತಹ ನಗರೀಕರಣ ಸಮಸ್ಯೆಗಳ ಜೊತೆ ಹೋರಾಟವನ್ನು ಮುಂದುವರೆಸಿದೆ.
ಹಲವಾರು ಸಹಸ್ರಮಾನಗಳಲ್ಲಿ ಯಶಸ್ವೀ ವಲಸೆಗಾರರ ಗುಂಪುಗಳು ಕೊಚ್ಚಿ ನಗರವನ್ನು ಒಂದು ಸಾಂಸ್ಕೃತಿಕ ಮೂಸೆಯನ್ನಾಗಿಸಿದೆ. ಅತಿಯಾದ ಅಭಿವೃದ್ಧಿಯಿಂದಾಗುವ ಅಪಾಯದ ಹೊರತಾಗಿಯೂ, ನಗರವು ತನ್ನ ವಿಶಿಷ್ಟವಾದ ವಸಾಹತಿನ ಪರಂಪರೆಯನ್ನು ಹಾಗು ಸಾಂಪ್ರದಾಯಿಕ ಹಾಗು ಆಧುನಿಕತೆಯ ಮಿಶ್ರಣವನ್ನು ಹಾಗೆ ಉಳಿಸಿಕೊಂಡಿದೆ.