ಕೊಲ್ಲಿ ಯುದ್ಧ
ಇರಾಕ್ ಮತ್ತು ಸಮಿಶ್ರ ಬಣಗಳ ನಡುವಿನ 1990-1991 ರ ಯುದ್ಧ / From Wikipedia, the free encyclopedia
ಕೊಲ್ಲಿ ಯುದ್ಧ ವು (ಮೊದಲ ಕೊಲ್ಲಿ ಯುದ್ಧ ಎಂದೂ ಸಹ ಇದನ್ನು ಉಲ್ಲೇಖಿಸಲಾಗುತ್ತದೆ) (ಆಗಸ್ಟ್ 2, 1990 – ಫೆಬ್ರುವರಿ 28, 1991), ಅಮೆರಿಕಾ ಸಂಯುಕ್ತ ಸಂಸ್ಥಾನಗಳ ನೇತೃತ್ವವನ್ನು ಹೊಂದಿದ್ದ ಮೂವತ್ನಾಲ್ಕು ರಾಷ್ಟ್ರಗಳಿಗೆ ಸೇರಿದ್ದ, U.N.-ಅಧಿಕಾರ ಪಡೆದ ಒಕ್ಕೂಟ ಪಡೆಯೊಂದರಿಂದ ಇರಾಕ್ ವಿರುದ್ಧ ನಡೆಸಲ್ಪಟ್ಟ ಒಂದು ಯುದ್ಧವಾಗಿತ್ತು; 1990ರ ಆಗಸ್ಟ್ 2ರಂದು ನಡೆದ ಕುವೈಟ್ ಮೇಲಿನ ಇರಾಕಿನ ಪಡೆಗಳ ಆಕ್ರಮಣ ಮತ್ತು ವಶಪಡಿಸಿಕೊಳ್ಳುವಿಕೆಯ ನಂತರ, ಕುವೈಟ್ನಿಂದ ಇರಾಕಿನ ಪಡೆಗಳನ್ನು ಹೊರದೂಡುವುದರ ಒಂದು ಪ್ರಕಟಪಡಿಸಲ್ಪಟ್ಟ ಉದ್ದೇಶವು ಈ ಯುದ್ಧದ ಹಿಂದಿತ್ತು.
| ||||||||||||||||||||||||||||||
ಟೆಂಪ್ಲೇಟು:Campaignbox Arabian Gulf Wars | ||||||||||||||||||||||||||||||
ಈ ಯುದ್ಧವು (ಇರಾಕಿನ ನಾಯಕ ಸದ್ದಾಂ ಹುಸೇನ್ನಿಂದ) ಎಲ್ಲ ಕದನಗಳ ತಾಯಿ [12] ಎಂಬುದಾಗಿಯೂ ಉಲ್ಲೇಖಿಸಲ್ಪಟ್ಟಿದೆ. ಅಷ್ಟೇ ಅಲ್ಲ, ಸೇನಾ ಪ್ರತಿಕ್ರಿಯೆಯ[13] ಕಾರ್ಯಾಚರಣೆಗೆ ಸಂಬಂಧಿಸಿದಂತೆ ಇದು ಡಸರ್ಟ್ ಸ್ಟಾರ್ಮ್ ಎಂಬ ಹೆಸರಿನಿಂದ, ಅಥವಾ ಇರಾಕ್ ಯುದ್ಧ ಎಂಬುದಾಗಿ ಸಾಮಾನ್ಯವಾಗಿ ಚಿರಪರಿಚಿತವಾಗಿದೆ.[14][15][16]
1990ರ ಆಗಸ್ಟ್ 2ರಂದು ಪ್ರಾರಂಭಗೊಂಡ ಇರಾಕಿನ ಪಡೆಗಳಿಂದ ಆದ ಕುವೈಟ್ನ ಆಕ್ರಮಣವು ಅಂತರರಾಷ್ಟ್ರೀಯ ಛೀಮಾರಿಗೆ ಈಡಾಯಿತು, ಮತ್ತು UN ಭದ್ರತಾ ಮಂಡಳಿಯ ಸದಸ್ಯರಿಂದ ಇರಾಕ್ ವಿರುದ್ಧವಾಗಿ ತತ್ಕ್ಷಣದ ಆರ್ಥಿಕ ನಿರ್ಬಂಧಗಳು ಹೇರಲ್ಪಡಲು ಅದು ಕಾರಣವಾಯಿತು. ಅಮೆರಿಕಾದ ಪಡೆಗಳನ್ನು ಸಜ್ಜುಗೊಳಿಸಿ ಸೌದಿ ಅರೇಬಿಯಾಗೆ ಕಳಿಸಿದ U.S. ಅಧ್ಯಕ್ಷ ಜಾರ್ಜ್ H. W. ಬುಷ್, ಸದರಿ ರಂಗಸ್ಥಲಕ್ಕೆ ತಂತಮ್ಮ ಪಡೆಗಳನ್ನು ಕಳಿಸಬೇಕೆಂದು ಇತರ ದೇಶಗಳನ್ನು ಒತ್ತಾಯಿಸಿದ. ರಾಷ್ಟ್ರಗಳ ಒಂದು ಸೇನಾವ್ಯೂಹವು ಕೊಲ್ಲಿ ಯುದ್ಧದ ಒಕ್ಕೂಟವನ್ನು ಸೇರಿಕೊಂಡಿತು. ಒಕ್ಕೂಟದಲ್ಲಿನ ಸೇನಾ ಪಡೆಗಳಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಪಡೆಗಳ ಮಹಾನ್ ಬಾಹುಳ್ಯವು ಕಂಡುಬಂದಿದ್ದರೆ, ಸೌದಿ ಅರೇಬಿಯಾ, ಯುನೈಟೆಡ್ ಕಿಂಗ್ಡಂ ಮತ್ತು ಈಜಿಪ್ಟ್ ಮೊದಲಾದ ರಾಷ್ಟ್ರಗಳು ಇದೇ ಅನುಕ್ರಮದಲ್ಲಿ ಅಗ್ರಗಣ್ಯ ಕೊಡುಗೆದಾರರಾಗಿದ್ದವು. 60 ಶತಕೋಟಿ USನಷ್ಟು ವೆಚ್ಚದ ಪೈಕಿ ಸುಮಾರು 40 ಶತಕೋಟಿ US$ನಷ್ಟು ಮೊತ್ತವು ಸೌದಿ ಅರೇಬಿಯಾದಿಂದ ಪಾವತಿಸಲ್ಪಟ್ಟಿತು.[17]
ಕುವೈಟ್ನಿಂದ ಇರಾಕಿನ ಪಡೆಗಳನ್ನು ಹೊರದೂಡುವುದಕ್ಕೆ ಸಂಬಂಧಿಸಿದ ಆರಂಭಿಕ ತಿಕ್ಕಾಟವು, 1991ರ ಜನವರಿ 17ರಂದು ವಿಮಾನದಿಂದ ಮಾಡಿದ ಒಂದು ಬಾಂಬ್ದಾಳಿಯೊಂದಿಗೆ ಪ್ರಾರಂಭವಾಯಿತು. ಇದಾದ ನಂತರ ಫೆಬ್ರುವರಿ 23ರಂದು ನೆಲದ ಮೇಲಿನ ಆಕ್ರಮಣವೊಂದನ್ನು ಶುರುಮಾಡಲಾಯಿತು. ಕುವೈಟ್ನ್ನು ವಿಮೋಚನೆಗೊಳಿಸಿ ಇರಾಕಿನ ಸೀಮೆಯೊಳಗೆ ಮುಂದುವರಿದ ಒಕ್ಕೂಟ ಪಡೆಗಳಿಗೆ ಸಂಬಂಧಿಸಿದಂತೆ ಇದೊಂದು ನಿರ್ಣಾಯಕ ವಿಜಯವಾಗಿತ್ತು. ಒಕ್ಕೂಟವು ತನ್ನ ಮುಂದುವರಿಕೆಯನ್ನು ನಿಲ್ಲಿಸಿತು, ಮತ್ತು ನೆಲದ ಮೇಲಿನ ಸೈನಿಕ ಕಾರ್ಯಾಚರಣೆಯು ಪ್ರಾರಂಭವಾದ 100 ಗಂಟೆಗಳ ನಂತರ ಒಂದು ಕದನ-ವಿರಾಮವನ್ನು ಘೋಷಿಸಿತು. ಇರಾಕ್, ಕುವೈಟ್, ಮತ್ತು ಸೌದಿ ಅರೇಬಿಯಾದ ಗಡಿಯ ಮೇಲಿರುವ ಪ್ರದೇಶಗಳಿಗೆ ವೈಮಾನಿಕ ಯುದ್ಧ ಮತ್ತು ನೆಲದ ಯುದ್ಧವನ್ನು ಸೀಮಿತಗೊಳಿಸಲಾಗಿತ್ತು. ಆದಾಗ್ಯೂ, ಸೌದಿ ಅರೇಬಿಯಾದಲ್ಲಿದ್ದ ಒಕ್ಕೂಟ ಸೇನಾ ಗುರಿಗಳ ವಿರುದ್ಧ ಇರಾಕ್ ಕ್ಷಿಪಣಿಗಳನ್ನು ಉಡಾಯಿಸಿತು.