ಕ್ರಿಯಾವರ್ಧಕ (ಕ್ಯಾಟಲೇಸ್)
From Wikipedia, the free encyclopedia
ಕ್ರಿಯಾವರ್ಧಕ ವೆಂಬುದು ಆಮ್ಲಜನಕದ ಸಹಾಯದಿಂದ ಜೀವಿಸುವ ಎಲ್ಲಾ ಸಜೀವಿಗಳಲ್ಲಿ ಕಂಡುಬರುವ ಕಿಣ್ವವಾಗಿದೆ. ಇದು ನೀರು ಮತ್ತು ಆಮ್ಲಜನಕಕ್ಕೆ ಹೈಡ್ರೋಜನ್ ಪರಾಕ್ಸೈಡ್ ನ ವಿಭಜನೆಯ ವೇಗವನ್ನು ವರ್ಧಿಸುವ ಕಾರ್ಯನಿರ್ವಹಿಸುತ್ತದೆ.[1] ಎಲ್ಲಾ ಕಿಣ್ವಗಳಲ್ಲಿ ಕ್ರಿಯಾವರ್ಧಕ ಅತ್ಯಂತ ಅಧಿಕ ಬಳಕೆಯ ಸಂಖ್ಯಾಬಲಗಳನ್ನು ಒಳಗೊಂಡಿದೆ; ಕ್ರಿಯಾವರ್ಧಕದ ಒಂದು ಕಣ ಹೈಡ್ರೋಜನ್ ಪರಾಕ್ಸೈಡ್ ನ ಮಿಲಿಯನ್ ಗಟ್ಟಲೆ ಕಣವನ್ನು ಒಂದು ಸೆಕೆಂಡಿನಲ್ಲಿ ನೀರು ಮತ್ತು ಆಮ್ಲಜನಕವಾಗಿ ಬದಲಾಯಿಸಬಲ್ಲದು.[2]
ಟೆಂಪ್ಲೇಟು ಆವರ್ತನೆ ಪತ್ತೆಯಾಗಿದೆ: ಟೆಂಪ್ಲೇಟು:Enzyme |
ಟೆಂಪ್ಲೇಟು:PBB/847 |
ಕ್ರಿಯಾವರ್ಧಕವು ನಾಲ್ಕು ಪಾಲಿಪೆಪ್ಟೈಡ್ ಸರಣಿ ಗಳ ಟೆಟ್ರಾಮರ್ ಆಗಿದೆ. ಪ್ರತಿಯೊಂದು ಸುಮಾರು 500 ಅಮೈನೊ ಆಮ್ಲಗಳಷ್ಟು ಸಮೀಕರಣದ ಉದ್ದವಿದೆ.[3] ಇದು ನಾಲ್ಕುಪೊರ್ಫಿರಿನ್ ಹೀಮ್ (ಕಬ್ಬಿಣ)ನ ಗುಂಪುಗಳನ್ನು ಒಳಗೊಂಡಿದೆ. ಅಲ್ಲದೇ ಕಿಣ್ವವವು ಹೈಡ್ರೋಜನ್ ಪರಾಕ್ಸೈಡ್ ನೊಂದಿಗೆ ಕ್ರಿಯೆನಡೆಸಲು ಅವಕಾಶನೀಡುತ್ತದೆ. ಸರಿಸುಮಾರು 7,[4] ರಷ್ಟು pH(ಪಿಎಚ್) ಪ್ರಮಾಣ ಮಾನವ ಕ್ರಿಯಾವರ್ಧಕಕ್ಕೆ ಅನುಕೂಲಕರವಾಗಿದೆ. ಅಲ್ಲದೇ ಇದು ಉತ್ತಮ ಪ್ರಮಾಣದ ಗರಿಷ್ಠ ವಿಸ್ತಾರವನ್ನು ಹೊಂದಿರುತ್ತದೆ.(6.8 ಮತ್ತು 7.5 ನಡುವೆ ಇರುವ pHs ಗಳಲ್ಲಿ ಕ್ರಿಯೆಯ ಪ್ರಮಾಣ ಗಣನೀಯವಾಗಿ ಬದಲಾಗುವುದಿಲ್ಲ).[5] ಆಯಾ ವಿಭಿನ್ನ ಜಾತಿಗಳ ಆಧರಿಸಿ ಇತರ ಕ್ರಿಯಾವರ್ಧಕಗಳಿಗೆ ಅನುಕೂಲಕರವಾದ pH 4 ಮತ್ತು 11 ನಡುವೆ ವ್ಯತ್ಯಾಸ ಹೊಂದುತ್ತದೆ.[6] ಈ ಬದಲಾವಣೆಯಿಂದಾಗಿ ಹಿತಕರವಾದ ಉಷ್ಣಾಂಶವೂ ಕೂಡ ಬದಲಾಗುತ್ತದೆ.[7]