ಗ್ರ್ಯಾಫೈಟ್
From Wikipedia, the free encyclopedia
ಗ್ರ್ಯಾಫೈಟ್ ಎಂಬ ಖನಿಜವು ಇಂಗಾಲದ ಭಿನ್ನರೂಪಗಳಲ್ಲೊಂದು. ಲೋಹವಸ್ತು 'ಸೀಸ' (lead) ಇಂದ ಭಿನ್ನವಾಗಿ ಗುರುತಿಸಲು, ಅಬ್ರಹಾಮ್ ಗೊಟ್ಲೊಬ್ ವರ್ನರ್ 1789ರಲ್ಲಿ ಗ್ರ್ಯಾಫೈಟ್ ಎಂಬ ಪದವನ್ನು ಗ್ರೀಕ್ ಭಾಷೆಯ γράφειν (ಗ್ರಾಫೀನ್) ಪದದಿಂದ ಪಡೆದರು. ಇದರ ಅರ್ಥ, 'ಚಿತ್ರರಚನೆ ಮಾಡುವುದು/ಬರೆಯುವುದು' ಎಂದು. ಇದನ್ನು ಸಾಮಾನ್ಯವಾಗಿ ಪೆನ್ಸಿಲ್ಗಳಲ್ಲಿ ಬಳಸಲಾಗಿ, ಲೆಡ್ ಎನ್ನಲಾಗುತ್ತದೆ. ಇಂಗಾಲದ ಇನ್ನೊಂದು ಭಿನ್ನರೂಪವಾದ ವಜ್ರಕ್ಕಿಂತಲೂ ಭಿನ್ನವಾಗಿ, ಗ್ರ್ಯಾಫೈಟ್ ವಿದ್ಯುತ್ ವಾಹಕವಾಗಿದೆ. ಇದು ಅರೆಲೋಹವೂ ಆಗಿದ್ದು, ಎರಡು ಎಲೆಕ್ಟ್ರೊಡ್ ಗಳ ಮಧ್ಯೆ ವಿದ್ಯುತ್ ಹರಿದಾಗ ಬೆಳಗುವ ದೀಪಚಾಪದೀಪಗಳಲ್ಲಿನ ವಿದ್ಯುದ್ವಾರಗಳಲ್ಲಿ ಇದನ್ನು ಬಳಸಬಹುದಾಗಿದೆ. ಪ್ರಮಾಣಿತ ಸ್ಥಿತಿಗಳಲ್ಲಿ ಗ್ರ್ಯಾಫೈಟ್ ಅತಿ ಹೆಚ್ಚಿನ ಸ್ಥಿರ ರೂಪವಾಗಿದೆ. ಇದರಿಂದಾಗಿ, ಇಂಗಾಲ ಸಂಯುಕ್ತಗಳ ರಚನೆಯ ಉಷ್ಣಾಂಶವನ್ನು ವ್ಯಾಖ್ಯಾನಿಸಲು ಗ್ರ್ಯಾಫೈಟ್ನ್ನು ಪ್ರಮಾಣಿತ ಸ್ಥಿತಿಯೆಂದು ಉಷ್ಣರಸಾಯನ ವಿಜ್ಞಾನದಲ್ಲಿ ಬಳಸಲಾಗಿದೆ. ಗ್ರ್ಯಾಫೈಟ್ನ್ನು ಇದ್ದಿಲಿನ ಅತ್ಯುನ್ನತ ವರ್ಗದ್ದು ಎನ್ನಬಹುದು. ಪರ್ಯಾಯವಾಗಿ, ಆಂಥ್ರ್ಯಾಸೈಟ್ಗಿಂತಲೂ ಉನ್ನತವಾಗಿರುವ ಇದನ್ನು ಮೆಟಾ-ಆಂಥ್ರ್ಯಾಸೈಟ್ ಎನ್ನಲಾಗಿದೆ. ಇದನ್ನು ದಹಿಸುವುದು ಕಷ್ಟವಾಗಿರುವುದರಿಂದ, ಇದನ್ನು ಸಾಮಾನ್ಯವಾಗಿ ಇಂಧನದ ರೂಪದಲ್ಲಿ ಬಳಸಲಾಗುವುದಿಲ್ಲ.
Graphite | |
---|---|
General | |
ವರ್ಗ | Native mineral |
ರಾಸಾಯನಿಕ ಸೂತ್ರ | C |
Identification | |
ಬಣ್ಣ | Steel black, to gray |
ಸ್ಫಟಿಕ ಗುಣಲಕ್ಷಣ | Tabular, six-sided foliated masses, granular to compacted masses |
ಸ್ಫಟಿಕ ಪದ್ಧತಿ | Hexagonal (6/m 2/m 2/m) |
ಸೀಳು | Perfect in one direction |
ಬಿರಿತ | Flaky, otherwise rough when not on cleavage |
ಮೋಸ್ ಮಾಪಕ ಗಡಸುತನ | 1–2 |
ಹೊಳಪು | metallic, earthy |
ಪುಡಿಗೆರೆ | Black |
ಸಾಂದ್ರತೆ | 2.09–2.23 g/cm3 |
ವಕ್ರೀಕರಣ ಸೂಚಿ | Opaque |
ಬಹುವರ್ಣಕತೆ | None |
ಕರಗುವಿಕೆ | Molten Ni |
ಉಲ್ಲೇಖಗಳು | [1][2] |
ನೈಸರ್ಗಿಕ ಗ್ರ್ಯಾಫೈಟ್ನಲ್ಲಿ ಮೂರು ಪ್ರಮುಖ ರೀತಿಗಳಿವೆ. ಈ ಮೂರಲ್ಲಿ ಪ್ರತಿಯೊಂದೂ ಸಹ ಮೂರು ವಿಭಿನ್ನ ಅದಿರು ನಿಕ್ಷೇಪಗಳಲ್ಲಿ ಕಾಣಸಿಗುತ್ತದೆ.
- ಹರಳಿನಾಕಾರದ ಹೊಟ್ಟಿನ ಗ್ರ್ಯಾಫೈಟ್ (ಇದನ್ನು ಹ್ರಸ್ವವಾಗಿ ಹೊಟ್ಟಿನ ಗ್ರ್ಯಾಫೈಟ್ ಎನ್ನಲಾಗಿದೆ) ಇವು ಪ್ರತ್ಯೇಕಿತ, ಚಪ್ಪಟೆಯಾದ, ಕಣಗಳು. ಮುರಿಯದ ಸ್ಥಿತಿಯಲ್ಲಿ ಇವು ಆರು ಭುಜಗಳಿರುತ್ತವೆ, ಮುರಿದ ಸ್ಥಿತಿಯಲ್ಲಿ ಇವುಗಳು ನಿಗದಿತ ಆಕಾರವನ್ನು ಹೊಂದಿರುವುದಿಲ್ಲ ಅಥವಾ ಆಂಗ್ಯುಲರ್ ಆಗಿರುತ್ತವೆ.
- ಅರೂಪದ ಗ್ರ್ಯಾಫೈಟ್ ಸಣ್ಣ ಕಣಗಳ ರೂಪದಲ್ಲಿರುತ್ತವೆ. ಇದು ಇದ್ದಿಲಿನ ರಚನೆಯ ಕೊನೆಯ ಹಂತವಾದ ಉಷ್ಣ ಪರಿವರ್ತನೆಯ ಪರಿಣಾಮವಿದು. ಇದನ್ನು ಕೆಲವೊಮ್ಮೆ ಮೆಟಾ-ಆಂಥ್ರ್ಯಾಸೈಟ್ ಎನ್ನಲಾಗಿದೆ. ಅತಿ ಸಣ್ಣ ಕಣಗಳ ಗ್ರ್ಯಾಫೈಟ್ನ್ನು ಕೆಲವೊಮ್ಮೆ ವಾಣಿಜ್ಯದಲ್ಲಿ ಅರೂಪ ಎನ್ನಲಾಗುತ್ತದೆ.
- ಉಂಡೆ ಗ್ರ್ಯಾಫೈಟ್ (ಸಿರೆ ಗ್ರ್ಯಾಫೈಟ್) ಸಿರೆಗಳ ಸೀಳುಗಳು ಮತ್ತು ಮುರಿತಗಳಲ್ಲಿ ಸಂಭವಿಸುತ್ತವೆ. ಇವು ದೊಡ್ಡ ಗಾತ್ರದ ನಾರುಗಳುಳ್ಳ ಅಥವಾ ಹರಳಿನಂತಹ ಸಂಗ್ರಹಗಳಂತೆ ಕಾಣುತ್ತವೆ. ಇವು ಮೂಲತಃ ಜಲೋಷ್ಣೀಯವಾಗಿವೆ.
'ಬಹಳಷ್ಟು ಸುವ್ಯವಸ್ಥೆಯಲ್ಲಿರುವ ಉಷ್ಣವಿಭಜನೆಯ ಗ್ರಾಫೈಟ್' ಅಥವಾ 'ಬಹಳಷ್ಟು ಸ್ಥಾನನಿರ್ಧರಿತ ಉಷ್ಣವಿಭಜನೆಯ ಗ್ರ್ಯಾಫೈಟ್' (HOPG) ಎಂದರೆ ನಡುವೆ ಆಂಗ್ಯುಲರ್ ಹರಡುವಿಕೆ 1°ಗಿಂತಲೂ ಕಡಿಮೆಯಿರುವಂತಹ ಗ್ರಾಫೈಟ್ ಹಾಳೆಗಳು. ಈ ಅತ್ಯುತ್ತಮ ಗುಣಮಟ್ಟದ ಸಂಶ್ಲೇಷಿತ ರೂಪವನ್ನು ವೈಜ್ಞಾನಿಕ ಸಂಶೋಧನೆಯಲ್ಲಿ ಬಳಸಲಾಗಿದೆ.[3] ಇಂಗಾಲದ ನಾರು ಅಥವಾ ನಾರಿನಿಂದ ಬಲಪಡಿಸಲಾದ ಇಂಗಾಲವನ್ನು ಉಲ್ಲೇಖಿಸಲು ಗ್ರ್ಯಾಫೈಟ್ ಫೈಬರ್ ಎಂದು ಕೆಲವೊಮ್ಮೆ ಉಲ್ಲೇಖಿಸಿದ್ದುಂಟು.