ಜೂಲಿಯಾ ರಾಬರ್ಟ್ಸ್
ನಟಿ / From Wikipedia, the free encyclopedia
ಜೂಲಿಯಾ ಫಿಯೋನಾ ರಾಬರ್ಟ್ಸ್ (ಜನನ ಅಕ್ಟೋಬರ್ 28, 1967) ಒಬ್ಬ ಅಮೆರಿಕದ ಅಭಿನೇತ್ರಿ. ರಿಚರ್ಡ್ ಗೆರೆಯೊಡನೆ ಪ್ರಣಯ-ಹಾಸ್ಯಭರಿತ ಚಿತ್ರವಾದ, ವಿಶ್ವದಾದ್ಯಂತ ಪ್ರದರ್ಶನ ಕಂಡು $463 ಮಿಲಿಯನ್ ಗಳಿಸಿದ, ಪ್ರೆಟಿ ವುಮನ್ ನಲ್ಲಿನ ಇವಳ ಅಭಿನಯ ಜೂಲಿಯಾಗೆ ಹೆಸರು ತಂದುಕೊಟ್ಟಿತು. 1990ರಲ್ಲಿ ಸ್ಟೀಲ್ ಮ್ಯಾಗ್ನೋಲಿಯಾಸ್ ನ ಅಭಿನಯಕ್ಕಾಗಿ ಮತ್ತು 1991ರಲ್ಲಿ ಪ್ರೆಟಿ ವುಮನ್ ನ ಅಭಿನಯಕ್ಕಾಗಿ ಅಕಾಡಮಿ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯಲ್ಲಿ ಇದ್ದ ಜೂಲಿಯಾ, 2001ರ ಎರಿನ್ ಬ್ರೋಕೋವಿಚ್ ಚಿತ್ರದಲ್ಲಿನ ಅಭಿನಯಕ್ಕಾಗಿ ಅಕಾಡಮಿಯ ಅತ್ಯುತ್ತಮ ಅಭಿನೇತ್ರಿ ಪ್ರಶಸ್ತಿಯನ್ನು ಪಡೆದಳು. ಜೂಲಿಯಾ ಅಭಿನಯದ ರೋಚಕ-ಹಾಸ್ಯಪ್ರಧಾನ ಚಿತ್ರಗಳಾದ ಮೈ ಬೆಸ್ಟ್ ಫ್ರೆಂಡ್'ಸ್ ವೆಡ್ಡಿಂಗ್ , ಮಿಸ್ಟಿಕ್ ಪಿಝಾ , ನಾಟಿಂಗ್ ಹಿಲ್ , ರನವೇ ಬ್ರೈಡ್ ಮತ್ತು ಅಪರಾಧ ಪ್ರಧಾನವಾದ ದ ಪೆಲಿಕಾನ್ ಬ್ರೀಫ್ ಮತ್ತು ಓಷನ್'ಸ್ ಇಲೆವೆನ್ ಎಂಡ್ ಟ್ವೆಲ್ವ್ ಚಿತ್ರಗಳು ಒಟ್ಟಾರೆ $೨ ಬಿಲಿಯನ್ ಗಿಂತಲೂ ಹೆಚ್ಚು ಹಣ ಗಳಿಸಿ,ಹಣಗಳಿಕೆಯ ದೃಷ್ಟಿಯಿಂದ ಅವಳು ಅತ್ಯಂತ ಯಶಸ್ವಿ ನಟಿ ಎಂಬ ಹಿರಿಮೆಗೆ ಪಾತ್ರಳಾದಳು.[1]
ರಾಬರ್ಟ್ಸ್ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದು, ಹಾಲಿವುಡ್ ರಿಪೋರ್ಟರ್ ನ ವಾರ್ಷಿಕ "ಪವರ್ ಲಿಸ್ಟ್"ನ ಗರಿಷ್ಠ ಗಳಿಕೆ ಹೊಂದಿರುವ ಮಹಿಳಾ ತಾರೆಯಾಗಿ, 2006ರಲ್ಲಿ ನಿಕೋಲೆ ಕಿಡ್ ಮನ್ ಆ ಔನ್ನತ್ಯವನ್ನು ಮುಟ್ಟುವವರೆಗೂ, 2002ರಿಂದ 2005ರವರೆಗೂ ಗರಿಷ್ಠ ಗಳಿಕೆಯ ಮೊದಲ ಸ್ಥಾನವನ್ನಲಂಕರಿಸಿದ್ದಳು .1990ರ ಪ್ರೆಟಿ ವುಮನ್ ಗೆ ಅವಳು ಪಡೆದ ಸಂಭಾವನೆ {/0{2}}$300,೦೦೦;2003ರಲ್ಲಿ ಮೋನಾ ಲಿಸಾ ಸ್ಮೈಲ್ ಚಿತ್ರಕ್ಕೆ ಅಂದಿನವರೆಗೂ ಯಾವ ನಟಿಯೂ ಪಡೆಯದಿದ್ದ ಮೊತ್ತವಾದ $25 ಮಿಲಿಯನ್ ಗಳನ್ನು ಅವಳು ಸಂಭಾವನೆಯಾಗಿ ಪಡೆದಳು.' 2007ರಲ್ಲಿ ರಾಬರ್ಟ್ಸ್ ಳ ಒಟ್ಟು ಗಳಿಕೆ ಸುಮಾರು $140 ಮಿಲಿಯನ್ ಎಂದು ಅಂದಾಜಿಸಲಾಗಿತ್ತು.[2]
ರಾಬರ್ಟ್ಸ್ ವೋಗ್ ಪತ್ರಿಕೆಯ ರಕ್ಷಾಪುಟದ ಮೇಲೆ ಗೋಚರಿಸಿದ ಮೊಟ್ಟಮೊದಲ ನಟಿ. GQ ಸಹ ಒಮ್ಮೆ ರಾಬರ್ಟ್ಸ್ ತಮ್ಮ ಪತ್ರಿಕೆಯ ಮುಖಪುಟವನ್ನು ಅಲಂಕರಿಸಿದ ಮೊದಲ ಮಹಿಳೆ ಎಂದು ಹೇಳಿಕೆ ನೀಡಿದ್ದರೂ, ನಂತರ ಆ ವರದಿ ತಪ್ಪೆಂದೂ, ಕೆರಾಲ್ ಚಾನ್ನಿಂಗ್ ಇವಳಿಗೂ ಮುಂಚೆ, 1964ರಲ್ಲಿ GQ ಮುಖಪುಟದಲ್ಲಿ ಗೋಚರಿಸಿದ್ದಳೆಂದೂ ಹೇಳಿಕೆ ನೀಡಿ ತನ್ನ ಮುಂಚಿನ ಹೇಳಿಕೆಯನ್ನು ಹಿಂತೆಗೆದುಕೊಂಡಿತು.[3] ಪೀಪಲ್ ಪತ್ರಿಕೆಯು ಅವಳನ್ನು "ಜಗತ್ತಿನ ೫೦ ಬಲು ಸುಂದರ ವ್ಯಕ್ತಿಗಳು" ಪಟ್ಟಿಯಲ್ಲಿ ೧೧ ಬಾರಿ ಪ್ರಕಟಿಸಿದೆ; ಹಲ್ಲೆ ಬೆರ್ರಿಯೂ ಇಷ್ಟೇ ಬಾರಿ ಈ ಗೌರವಕ್ಕೆ ಪಾತ್ರಳಾಗಿದ್ದಾಳೆ. 2001ರಲ್ಲಿ ಲೇಡೀಸ್ ಹೋಮ್ ಜರ್ನಲ್ ಅವಳನ್ನು ಅಮೆರಿಕದ ಶ್ರೇಷ್ಠ ಪ್ರಭಾವಶಾಲಿ ಮಹಿಳೆಯರ ಪೈಕಿ11ನೆಯವಳೆಂದು ಘೋಷಿಸಿ, ರಾಷ್ಟ್ರೀಯ ಭದ್ರತಾ ಸಲಹೆಗಾರ್ತಿ ಕಾಂಡೊಲೀಝಾ ರೈಸ್ ಮತ್ತು ಮೊದಲ ಲೇಡಿ ಲಾರಾ ಬುಷ್ ಗಿಂತಲೂ ಉನ್ನತ ಸ್ಥಾನದಲ್ಲಿ ಇವಳನ್ನು ಗುರುತಿಸಿತು.[4] ರಾಬರ್ಟ್ಸ್ ಳು ರೆಡ್ ಓಮ್ ಫಿಲಂಸ್ ಎಂಬ ನಿರ್ಮಾಣಸಂಸ್ಥೆಯನ್ನು ನಡೆಸುತ್ತಿದ್ದಾಳೆ. (ರೆಡ್ ಓಂ ಎಂಬುದು ಅವಳ ಪತಿಯ ಅಂತ್ಯನಾಮವಾದ ಮಾಡರ್ ಎಂಬುದರ ತಿರುವುಮುರುವಾದ ರೂಪ.