ಟಹೀಟಿ
From Wikipedia, the free encyclopedia
ಟಹೀಟಿ ಎಂಬುದು ದಕ್ಷಿಣ ಶಾಂತ ಸಾಗರದಲ್ಲಿರುವ ಒಂದು ದ್ವೀಪ. ಇದು ಸೊಸೈಟಿ ಐಲೆಂಡ್ಸ್ ದ್ವೀಪಸಮೂಹದಲ್ಲಿರುವ ಫ್ರೆಂಚ್ ಪಾಲಿನೇಷ್ಯಾದ ವಿಂಡ್ವಾರ್ಡ್ ಗುಂಪಿನ ಅತಿದೊಡ್ಡ ದ್ವೀಪ. ಇದು ಫ್ರೆಂಚ್ ಪಾಲಿನೇಷ್ಯಾದ ಆರ್ಥಿಕ, ಸಾಂಸ್ಕೃತಿ ಮತ್ತು ರಾಜಕೀಯ ಕೇಂದ್ರವಾಗಿದೆ. ಸಕ್ರಿಯ ಜ್ವಾಲಾಮುಖಿಯೊಂದರಿಂದ ಈ ದ್ವೀಪವು ರಚನೆಯಾಯಿತು. ಇದು ಎತ್ತರವಿದ್ದು, ಪರ್ವತಮಯವಾಗಿದೆ. ಇದರ ಸುತ್ತಲ ಹವಳಗಳ ಸಮೂಹವಿದೆ. 2007ರ ಜನಗಣತಿಯ ಪ್ರಕಾರ ಜನಸಂಖ್ಯೆಯು 178,133ರಷ್ಟಿದೆ.[1] ಇದು ಫ್ರೆಂಚ್ ಪಾಲಿನೇಷ್ಯಾದ ಅತಿ ಜನನಿಬಿಡ ದ್ವೀಪವಾಗಿದೆ. ದ್ವೀಪಸಮೂಹದ ಒಟ್ಟು ಜನಸಂಖ್ಯೆಯ 68.6%ರಷ್ಟು ಈ ದ್ವೀಪದಲ್ಲಿದೆ.
Geography | |
---|---|
Location | Pacific Ocean |
Archipelago | Society Islands |
Major islands | tahiti |
ವಿಸ್ತೀರ್ಣ | ೧,೦೪೫ km೨ (೪೦೩.೫ sq mi) |
ಸಮುದ್ರ ಮಟ್ಟದಿಂದ ಎತ್ತರ | ೨,೨೪೧ m (೭,೩೫೨ ft) |
ಸಮುದ್ರ ಮಟ್ಟದಿಂದ ಎತ್ತರದ ಸ್ಥಳ | Mont Orohena |
Country | |
Overseas collectivity | French Polynesia |
Largest city | Papeete (pop. 131,695 urban) |
Demographics | |
Population | 178,133[1] (as of August 2007 census) |
ಸಾಂದ್ರತೆ | ೧೭೦ /km೨ (೪೪೦ /sq mi) |
ಟಹೀಟಿಯ ರಾಜಧಾನಿ ಪಪೀಟ್ ವಾಯುವ್ಯ ಕಡಲತೀರದಲ್ಲಿದೆ. ಈ ವಲಯದ ಏಕೈಕ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಇಲ್ಲಿದೆ. ಫಾ'ಆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ನಗರದ ಮಧ್ಯದಿಂದ 5 km (3.11 mi) ದೂರದಲ್ಲಿದೆ. ಮೂಲತಃ ಪಾಲಿನೇಷ್ಯನ್ನರು ಕ್ರಿಸ್ತ ಶಕ 300ರಿಂದ 800ರ ವರೆಗೆ ಟಹೀಟಿಯಲ್ಲಿ ನೆಲೆಸಿದರು. ಪಾಲಿನೇಷ್ಯನ್ನರು ಈ ದ್ವೀಪದ ಜನಸಂಖ್ಯೆಯ 70%ರಷ್ಟಿದ್ದಾರೆ. ಜನಸಂಖ್ಯೆಯಲ್ಲಿ ಉಳಿದವರು ಯುರೋಪಿಯನ್ನರು, ಚೀನೀಯರು ಮತ್ತು ಮಿಶ್ರಿತ ಜನಾಂಗದವರು ಇಲ್ಲಿ ವಾಸಿಸುತ್ತಿದ್ದಾರೆ. 1880ರಲ್ಲಿ ಈ ದ್ವೀಪವನ್ನು ಫ್ರ್ಯಾನ್ಸ್ನ ಒಂದು ವಸಾಹತು ಎಂದು ಘೋಷಿಸಲಾಯಿತು. ಆದರೂ, 1946ರಲ್ಲಿ ಸ್ಥಳೀಯ ಟಹೀಟಿಯನ್ನರು ಫ್ರೆಂಚ್ ನಾಗರಿರಾಗಲು ಅನುಮತಿ ನೀಡಲಾಯಿತು. ಟಹೀಟಿಯಲ್ಲಿ ಫ್ರೆಂಚ್ ಏಕೈಕ ಅಧಿಕೃತ ಭಾಷೆಯಾಗಿದೆ. ಆದರೂ ಇಲ್ಲಿ ಬಹಳಷ್ಟು ಜನರು ರಿಯೊ ಟಹೀಟಿ ಎಂಬ ಟಹೀಟಿಯನ್ ಭಾಷೆ ಮಾತನಾಡುವರು.