ಟೆಕ್ಸಾಸ್ ಇಂಸ್ಟ್ರುಮೆಂಟ್ಸ್
From Wikipedia, the free encyclopedia
ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ (ಟಿ.ಐ.) ಒಂದು ಪ್ರಮುಖ ಅಮೆರಿಕನ್ ತಂತ್ರಜ್ಞಾನ ಸಂಸ್ಥೆ. ಅದರ ಮುಖ್ಯ ತಯಾರಿಕೆ ಸೆಮಿಕಂಡಕ್ಟರ್ ಉತ್ಪನ್ನಗಳು. ಇವುಗಳು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಕೆಯಾಗುತ್ತವೆ.[4] ಮುಖ್ಯ ಕಚೇರಿಡ್ಯಾಲಸ್ ನಗರ, ಟೆಕ್ಸಾಸ್, ಅಮೆರಿಕಾ ಸಂಸ್ಥಾನ. ಮಾರಾಟದ ಸಂಖ್ಯೆ ಗಮನದಲ್ಲಿಟ್ಟುಕೊಂಡು ಜಗತ್ತಿನ ಹತ್ತು ಪ್ರಮುಖ ಸೆಮಿಕಂಡಕ್ಟರ್ ಕಂಪನಿಗಳಲ್ಲಿ ಟಿ.ಐ. ಕೂಡಾ ಒಂದು.[5] ಟೆಕ್ಸಾಸ್ ಇಂಸ್ಟ್ರುಮೆಂಟ್ಸ್ ಸಂಸ್ಥೆಯ ಮುಖ್ಯ ಉತ್ಪನ್ನಗಳೆಂದರೆ ಅನಲಾಗ್ ಸರ್ಕ್ಯೂಟ್ಗಳು ಮತ್ತು ಎಂಬೆಡೆಡ್ ಪ್ರಾಸೆಸರ್ಗಳು, ಕಂಪನಿಯ ಆದಾಯದ ೮೫% ಇವುಗಳಿಂದಲೇ ಕೂಡಿದೆ.[6] ಟಿ.ಐ. ಇನ್ನಿತರ ತಯಾರಿಕೆಗಳೆಂದರೆ ಡಿಜಿಟಲ್ ಲೈಟ್ ಪ್ರಾಸೆಸರ್ [6], ಕ್ಯಾಲ್ಕ್ಯುಲೇಟರ್, ಮೈಕ್ರೋಕಂಟ್ರೋಲರ್ ಮತ್ತು ಮಲ್ಟಿಕೋರ್ ಪ್ರಾಸೆಸರ್. ಟಿ.ಐ. 43,000ಕ್ಕೂ ಹೆಚ್ಚು ಪೇಟೆಂಟ್ ಗಳನ್ನು ಹೊಂದಿದೆ.[7]
ಸಂಸ್ಥೆಯ ಪ್ರಕಾರ | Public |
---|---|
ಪೂರ್ವಾಧಿಕಾರಿ | Geophysical Service |
ಸ್ಥಾಪನೆ | ಟೆಂಪ್ಲೇಟು:ಪ್ರಾರಂಭ (ಪೂರ್ವನಾಮ ಜಿಯೋಫಿಸಿಕಲ್ ಸರ್ವಿಸ್ ಇಂಕ್.)[1] 1951 (as Texas Instruments) |
ಮುಖ್ಯ ಕಾರ್ಯಾಲಯ | ಡ್ಯಾಲಸ್, ಟೆಕ್ಸಾಸ್, ಅಮೆರಿಕಾ ಸಂಯುಕ್ತ ಸಂಸ್ಥಾನ |
ಪ್ರಮುಖ ವ್ಯಕ್ತಿ(ಗಳು) | ರಿಚ್ ಟೆಂಪಲ್ಟನ್ [2] (ಚೇರ್ಮನ್, ಪ್ರೆಸಿಡೆಂಟ್ ಮತ್ತು ಸಿಈಓ) |
ಉದ್ಯಮ | ಸೆಮಿಕಂಡಕ್ಟರ್ |
ಉತ್ಪನ್ನ | ಅನಲಾಗ್ ಎಲೆಕ್ಟ್ರಾನಿಕ್ಸ್ ಕ್ಯಾಲ್ಕ್ಯುಲೇಟರ್ ಡಿಜಿಟಲ್ ಸಿಗ್ನಲ್ ಪ್ರಾಸೆಸರ್ Digital light processors ಇಂಟೆಗ್ರೇಟೆಡ್ ಸರ್ಕ್ಯೂಟ್ ಎಂಬೆಡೆಡ್ ಪ್ರಾಸೆಸರ್ |
ಆದಾಯ | ಟೆಂಪ್ಲೇಟು:ಇಳಿಕೆ ಟೆಂಪ್ಲೇಟು:ಡಾಲರ್ (2016)[3] |
ಆದಾಯ(ಕರ/ತೆರಿಗೆಗೆ ಮುನ್ನ) | ಟೆಂಪ್ಲೇಟು:ಏರಿಕೆ ಟೆಂಪ್ಲೇಟು:ಡಾಲರ್ (2016)[3] |
ನಿವ್ವಳ ಆದಾಯ | ಟೆಂಪ್ಲೇಟು:ಏರಿಕೆ US$೨.೯೮ ಬಿಲಿಯನ್ (2016)[3] |
ಒಟ್ಟು ಆಸ್ತಿ | ಟೆಂಪ್ಲೇಟು:ಇಳಿಕೆ US$೧೬.೨೩ ಬಿಲಿಯನ್ (2016)[3] |
ಒಟ್ಟು ಪಾಲು ಬಂಡವಾಳ | ಟೆಂಪ್ಲೇಟು:ಇಳಿಕೆ US$೯.೯೪ ಬಿಲಿಯನ್ (2016)[3] |
ಉದ್ಯೋಗಿಗಳು | 29,977 ಉದ್ಯೋಗಿಗಳು (2016)[3] |
ಜಾಲತಾಣ | www |
೧೯೫೧ರಲ್ಲಿ ಜಿಯೋಫಿಸಿಕಲ್ ಸರ್ವಿಸ್ ಇಂಕ್ ಎಂಬ ಸಂಸ್ಥೆಯನ್ನು ಪುನರ್ ಸಂಘಟಿಸಿ ಟೆಕ್ಸಾಸ್ ಇಂಸ್ಟ್ರುಮೆಂಟ್ಸ್ ಎಂಬ ಕಂಪನಿಯನ್ನು ಹುಟ್ಟುಹಾಕಲಾಯಿತು. ಜಿಯೋಫಿಸಿಕಲ್ ಸರ್ವಿಸ್ ಇಂಕ್ ಎಂಬ ಸಂಸ್ಥೆ ೧೯೩೦ರಲ್ಲಿ ಪ್ರಾರಂಭವಾಗಿತ್ತು. ಭೂಗರ್ಭದಲ್ಲಿರುವ ಪೆಟ್ರೋಲಿಯಂ ಖನಿಜವನ್ನು ಹುಡುಕಾಡಲು ಸಾಧನಗಳನ್ನು ಈ ಸಂಸ್ಥೆ ತಯಾರಿಸುತ್ತಿತ್ತು. ಇದಲ್ಲದೆ ಅಮೆರಿಕಾ ದೇಶದ ರಕ್ಷಣಾ ವಿಭಾಗಕ್ಕಾಗಿ ಬೇಕಾದ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನೂ ಈ ಸಂಸ್ಥೆ ತಯಾರಿಸುತ್ತಿತ್ತು.[8] ೧೯೫೦ರಲ್ಲಿ ಜಗತ್ತಿನ ಪ್ರಥಮ ಸಿಲಿಕಾನ್ ಟ್ರಾನ್ಸಿಸ್ಟರ್ ಉತ್ಪಾದಿಸಿ ಟಿ.ಐ. ದಾಖಲೆ ಸ್ಥಾಪಿಸಿತು. ಇದನ್ನು ಬಳಸಿ ೧೯೫೪ರಲ್ಲಿ ಜಗತ್ತಿನ ಪ್ರಥಮ ಟ್ರಾನ್ಸಿಸ್ಟರ್ ರೇಡಿಯೋ ತಯಾರಿಸಿತು. ಜ್ಯಾಕ್ ಕಿಲ್ಬಿ ಎಂಬ ಟೆಕ್ಸಾಸ್ ಇಂಸ್ಟ್ರುಮೆಂಟ್ಸ್ ಸಂಸ್ಥೆಯ ಇಂಜಿನಿಯರ್ ಇಂಟೆಗ್ರೇಟೆಡ್ ಸರ್ಕ್ಯೂಟ್ ಎಂಬ ಸಾಧನವನ್ನು 1958ರಲ್ಲಿ ಅನ್ವೇಷಿಸಿದ. ೧೯೬೭ರಲ್ಲಿ ಟಿ.ಐ. ಜಗತ್ತಿನ ಪ್ರಥಮ ಕೈಪಿಡಿ ಕ್ಯಾಲ್ಕ್ಯುಲೇಟರ್ ಅನ್ವೇಷಿಸಿತು. ಜಗತ್ತಿನ ಪ್ರಥಮ ಏಕ-ಸರ್ಕ್ಯೂಟ್ ಮೈಕ್ರೋಕಂಟ್ರೋಲರ್ ಕೂಡಾ ಟಿ.ಐ. ಹೆಗ್ಗಳಿಕೆಗಳಲ್ಲಿ ಒಂದು (೧೯೬೭).[9]
೧೯೮೭ರಲ್ಲಿ ಟಿ.ಐ. “ಡಿಜಿಟಲ್ ಲೈಟ್ ಪ್ರಾಸೆಸಿಂಗ್” (DLP) ಅಥವಾ ಬೆಳಕನ್ನು ಸಂಸ್ಕರಿಸುವ ಸಾಧನವನ್ನು ಅನ್ವೇಷಿಸಿತು. ಈ ತಂತ್ರಜ್ಞಾನವು ಕಂಪನಿಯ DLP ತಂತ್ರಜ್ಞಾನದ ಅಡಿಗಲ್ಲು. DLP ಸಿನೆಮಾಗಳಲ್ಲಿ ಬಳಕೆಯಾಗುವ ಈ ತಂತ್ರಜ್ಞಾನ ಆಸ್ಕರ್ ಪ್ರಶಸ್ತಿಯನ್ನೂ ಒಳಗೊಂಡು ಅನೇಕ ಪುರಸ್ಕಾರಗಳಿಗೆ ಪಾತ್ರವಾಗಿದೆ. 1990ರಲ್ಲಿ TI-81 ಎಂಬ ಗ್ರಾಫಿಂಗ್ ಕ್ಯಾಲ್ಕ್ಯುಲೇಟರ್ ಮೂಲಕ ಟೆಕ್ಸಾಸ್ ಇಂಸ್ಟ್ರುಮೆಂಟ್ಸ್ ಕ್ಯಾಲ್ಕ್ಯುಲೇಟರ್ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತು. 1997ರಲ್ಲಿ ಟಿ.ಐ. ತನ್ನ “ರಕ್ಷಣಾ ಎಲೆಕ್ಟ್ರಾನಿಕ್ಸ್” ವಿಭಾಗವನ್ನು ರೇಥಿಯಾನ್ ಎಂಬ ಕಂಪನಿಗೆ ಮಾರಿತು. ಈ ಮೂಲಕ ಟಿ.ಐ. ಡಿಜಿಟಲ್ ಉತ್ಪನ್ನಗಳ ಮೇಲೆ ಹೆಚ್ಚಿನ ಗಮನ ನೀಡತೊಡಗಿತು.[10] 2011ರಲ್ಲಿ ನ್ಯಾಷನಲ್ ಸೆಮಿಕಂಡಕ್ಟರ್ ಎಂಬ ಕಂಪನಿಯನ್ನು ಖರೀದಿಸಿತು. ಹೀಗೆ ನ್ಯಾಟ್ ಸೆಮ್ ಕಂಪನಿಯ 45,000 ಅನಲಾಗ್ ಎಲೆಕ್ಟ್ರಾನಿಕ್ ಉತ್ಪನ್ನಗಳು ಮತ್ತು ವಿನ್ಯಾಸ ತಂತ್ರಾಂಶಗಳನ್ನು ತನ್ನ ಮಡಿಲಿಗೆ ಸೇರಿಸಿಕೊಳ್ಳುವ ಮೂಲಕ ಟಿ.ಐ. ಅನಲಾಗ್ ಎಲೆಕ್ಟ್ರಾನಿಕ್ ಉತ್ಪನ್ನಗಳ ಕ್ಷೇತ್ರದಲ್ಲಿ ಅಗ್ರಮಾನ್ಯವೆನ್ನಿಸಿಕೊಂಡಿತು.[11]