ಡಬ್ಲಿನ್
From Wikipedia, the free encyclopedia
ಡಬ್ಲಿನ್ (pronounced /ˈdʌblɨn/, /ˈdʊblɨn/ಅಥವಾ /ˈdʊbəlɪn/) ಒಂದು ದೊಡ್ಡ ನಗರ (ಒಂದು ಪ್ರಮುಖ ನಗರವಾಗಿದೆ[2][3]) ಹಾಗು ಐರ್ಲೆಂಡ್ ನ ರಾಜಧಾನಿ. ಐರಿಶ್ ಭಾಷೆಯಲ್ಲಿ ಇದನ್ನು ಅಧಿಕೃತವಾಗಿ ವಾಲ್ಯಾಹಾ ಕ್ಲೀಯ [bˠalʲə aːha klʲiəh] ಅಥವಾ ಅಥ್ ಕ್ಲಯಾಥ್ [aːh cliə(ɸ)] ಎಂದು ಕರೆಯಲಾಗುತ್ತದೆ; ಹೆಸರಿನ ಆಂಗ್ಲ ರೂಪಾಂತರವು ಐರಿಶ್ ಭಾಷೆಯ ದುಬ್ಹ್ ಲಿನ್ನ್ ಎಂಬ ಪದದಿಂದ ವ್ಯುತ್ಪತ್ತಿ ಹೊಂದಿದೆ. ಇದು "ಕಪ್ಪು ಕೊಳ" ಎಂಬ ಅರ್ಥವನ್ನು ನೀಡುತ್ತದೆ. ಈ ನಗರವು ಐರ್ಲೆಂಡ್ ನ ಪೂರ್ವ ಕಡಲ ತೀರದ ಮಧ್ಯಭಾಗದಲ್ಲಿ, ರಿವರ್ ಲಿಫಿ ಯ ಮುಖಭಾಗದಲ್ಲಿ ಹಾಗು ಡಬ್ಲಿನ್ ಪ್ರದೇಶದ ಮಧ್ಯದಲ್ಲಿ ನೆಲೆಗೊಂಡಿದೆ. ಮೂಲವಾಗಿ ಒಂದು ವೈಕಿಂಗ್ ನೆಲೆಯಾಗಿ ಸ್ಥಾಪನೆಗೊಂಡರೂ, ಡಬ್ಲಿನ್ ನ ಸಾಮ್ರಾಜ್ಯವಾಗಿ ಹೊರಹೊಮ್ಮಿ ನಾರ್ಮನ್ ಆಕ್ರಮಣದ ನಂತರ ದ್ವೀಪದ ಒಂದು ಪ್ರಮುಖ ನಗರವಾಯಿತು. ಇಂದು, ನಗರವು ಗ್ಲೋಬಲ್ ಫೈನಾನ್ಶಿಯಲ್ ಸೆಂಟರ್ಸ್ ಇಂಡೆಕ್ಸ್ ನಲ್ಲಿ 23ನೇ ಸ್ಥಾನವನ್ನು ಗಳಿಸಿದೆ,[4][5] ಹಾಗು ಯಾವುದೇ ಯುರೋಪಿಯನ್ ರಾಜಧಾನಿಗಳಿಗಿಂತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯನ್ನು ಹೊಂದಿದೆ[6][7]. ಇದಲ್ಲದೆ ಒಂದು ಗ್ಲೋಬಲ್ ಸಿಟಿ ಎಂದು GaWC ಪಟ್ಟಿ ಮಾಡಿರುವುದರ ಜೊತೆಗೆ,[8][9] ಆಲ್ಫಾದ ಸ್ಥಾನವನ್ನು ಗಳಿಸಿದೆ - ಇದು ಡಬ್ಲಿನ್ ನಗರವನ್ನು ವಿಶ್ವದ ಅಗ್ರ 25 ನಗರಗಳಲ್ಲಿ ಒಂದೆಂಬ ಸ್ಥಾನವನ್ನು ಗಳಿಸಿಕೊಟ್ಟಿದೆ.[10] ಡಬ್ಲಿನ್, ಐರ್ಲೆಂಡ್ ದ್ವೀಪಕ್ಕೆ ಒಂದು ಐತಿಹಾಸಿಕ ಹಾಗು ಸಮಕಾಲೀನ ಸಂಸ್ಕೃತಿಯ ಕೇಂದ್ರವಾಗಿರುವುದರ ಜೊತೆಗೆ ಶಿಕ್ಷಣ, ಕಲೆ, ಆಡಳಿತ ಚಟುವಟಿಕೆ, ಆರ್ಥಿಕತೆ ಹಾಗು ಕೈಗಾರಿಕೆಗೆ ಒಂದು ಆಧುನಿಕ ಕೇಂದ್ರವಾಗಿದೆ.
Dublin
Baile Átha Cliath | |
---|---|
Top: Dublin Custom House, Middle: O'Connell Street, Bottom left: Temple Bar, Bottom right: Phoenix Park. | |
Motto(s): Obedientia Civium Urbis Felicitas Latin: literally, "The citizens' obedience is the city's happiness" (rendered more loosely as "Happy the city where citizens obey" by the council itself[1]) | |
Country | Ireland |
Province | Leinster |
Government | |
• Type | City |
• Lord Mayor | Emer Costello (Labour) |
Area | |
• City | ೧೧೪.೯೯ km೨ (೪೪.೪೦ sq mi) |
• Urban | ೯೨೧ km೨ (೩೫೬ sq mi) |
Population | |
• City | ೫,೦೬,೨೧೧ |
• Density | ೪,೩೯೮/km೨ (೧೧,೩೯೦/sq mi) |
• Urban | ೧೦,೪೫,೭೬೯ |
• Metro | ೧೬,೬೧,೧೮೫ |
• Demonym | Dubliner Dub |
• Ethnicity (2006 Census) | Ethnic groups
|
Time zone | UTC0 (WET) |
• Summer (DST) | UTC+1 (IST) |
Postal districts | D1-18, 20, 22, 24, D6W |
Area code | 01 |
Website | www.dublincity.ie |