ಡೆನಿಸ್ ಡಿಡೆರೋಟ್
From Wikipedia, the free encyclopedia
ಡೆನಿಸ್ ಡಿಡೆರೋಟ್ (ಫ್ರೆಂಚ್: [dəni did(ə)ʁo]; ೫ ಅಕ್ಟೋಬರ್ ೧೭೧೩- ೩೧ ಜುಲೈ ೧೭೮೪) ಒಬ್ಬ ಫ್ರೆಂಚ್ ತತ್ವಜ್ಞಾನಿ, ಕಲಾ ವಿಮರ್ಶಕ ಮತ್ತು ಬರಹಗಾರ, ಸಹ-ಸಂಸ್ಥಾಪಕರಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.[1]
ಡೆನಿಸ್ ಡಿಡೆರೋಟ್ ಆರಂಭದಲ್ಲಿ ಜೆಸ್ಯೂಟ್ ಕಾಲೇಜಿನಲ್ಲಿ ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದರು. ನಂತರ ಸಂಕ್ಷಿಪ್ತವಾಗಿ ಕಾನೂನನ್ನು ಅಧ್ಯಯನ ಮಾಡುವ ಮೊದಲು ಚರ್ಚ್ ಪಾದ್ರಿಗಳಾಗಿ ಕೆಲಸ ಮಾಡಿದರು. ೧೭೪೮ ರ ಕಾದಂಬರಿ ಲೆಸ್ ಬಿಜೌಕ್ಸ್ ಇಂಡಿಸ್ಕ್ರೀಟ್ಸ್ (ದಿ ಇಂಡಿಸ್ಕ್ರೀಟ್ ಜ್ಯುವೆಲ್ಸ್) ಸೇರಿ ಡೆನಿಸ್ ಡಿಡೆರೋಟ್ ಅವರು ಅನೇಕ ಕಾಲ್ಪನಿಕ ಮತ್ತು ಕಾಲ್ಪನಿಕವಲ್ಲದ ಕೃತಿಗಳನ್ನು ಬರೆದಿದ್ದಾರೆ. ಜಾಕ್ವೆಸ್ ದಿ ಫ್ಯಾಟಲಿಸ್ಟ್, ರಾಮೌಸ್ ನೆಫ್ಯೂ, ಪ್ಯಾರಡಾಕ್ಸ್ ಆಫ್ ದಿ ಆಕ್ಟರ್, ಮತ್ತು ಡಿ'ಅಲೆಂಬರ್ಟ್ಸ್ ಡ್ರೀಮ್ ಸೇರಿದಂತೆ ಅವರ ಹಲವು ಪ್ರಮುಖ ಕೃತಿಗಳು ಅವರ ಮರಣದ ನಂತರವೇ ಪ್ರಕಟಗೊಂಡವು.
೧೭೫೧ ರಲ್ಲಿ ಡಿಡೆರೋಟ್ ಅವರು ಜೀನ್ ಲೆ ರಾಂಡ್ ಡಿ'ಅಲೆಂಬರ್ಟ್ ಜೊತೆಗೂಡಿ ಎನ್ಸೈಕ್ಲೋಪೀಡಿಯ ಅನ್ನು ಸಹ-ಸಂಪಾದಿಸಿದ್ದಾರೆ.[2]