ಡ್ರೀಮ್ ಥಿಯೇಟರ್
From Wikipedia, the free encyclopedia
ಡ್ರೀಮ್ ಥಿಯೇಟರ್ 1985ರಲ್ಲಿ ನಿರ್ಮಾಣಗೊಂಡ ಅಮೆರಿಕಾದ ಪ್ರಗತಿಪರವಾದ ಮೆಟಲ್ ಬಾಂಡ್ ಆಗಿದ್ದು, ಇದು ಮೆಜಸ್ಟಿ ಹೆಸರ ಅಡಿಯಲ್ಲಿ ಜಾನ್ ಪೊಟ್ರೋಚಿ, ಜಾನ್ ಮಯೋಂಗ್ ಹಾಗೂ ಮೈಕ್ ಪೊರ್ಟ್ನೊಯ್ ಇವರುಗಳಿಂದ ನಿರ್ಮಿತವಾಗಿದೆ. ಇದು ಅವರು ಮ್ಯಸಚೂಸಿಟ್ಸ್ನ ಬರ್ಕಲಿ ಸಂಗೀತದ ಕಾಲೇಜಿನ ದಿನಗಳಲ್ಲಿ ಆರಂಭಿಸಿ ನಂತರ ಅಲ್ಲಿಂದ ಹೊರಗೆ ಬಂದು ಪೂರ್ತಿಯಾಗಿ ಬ್ಯಾಂಡ್ನ ಕಾರ್ಯಗಳಲ್ಲಿ ತೊಡಗಿದರು. ಹಲವು ಸರಣಿ ಬದಲಾವಣೆಗಳನ್ನು ಅನುಸರಿಸಿದರೂ ಸಹ, ಆರಂಭದ ಮೂರು ಸದಸ್ಯರು ಇಂದಿಗೂ ಜೆಮ್ಸ್ ಲಬ್ರಿ ಹಾಗೂ ಜಾರ್ಡನ್ ರುಡ್ಸ್ ಜೊತೆಗೆ ಉಳಿದಿದ್ದಾರೆ.ಡ್ರೀಮ್ ಥಿಯೇಟರ್ ಒಂದು ಯಶಸ್ವಿ ಪ್ರಗತಿಪರ ಮೆಟಲ್ ಬ್ಯಾಂಡ್ ಆಗಿದೆ. ಈ ಬ್ಯಾಂಡ್ ಬರಿ ಒಂದು ಜನಪ್ರಿಯ ಯಶಸ್ಸನ್ನು ಹೊಂದಿದ್ದರೂ ಸಹ ("ಪುಲ್ ಮಿ ಅಂಡರ್" 1992ರಲ್ಲಿ, ಇದಕ್ಕೆ ವಿಶಿಷ್ಟವಾಗಿ MTV ಆವೃತ್ತಿಯು ದೊರಕಿತು), ಇವರು ತುಲನಾತ್ಮಕವಾಗಿ ಮುಖ್ಯ ವಾಹಿನಿಯಿಂದ ಹೊರಗಿದ್ದಾರೆ.[ಸೂಕ್ತ ಉಲ್ಲೇಖನ ಬೇಕು].ಈ ಬ್ಯಾಂಡ್ ತನ್ನ ವಾದ್ಯಪರಿಣಿತರ ತಾಂತ್ರಿಕ ಕುಶಲತೆಗೆ ಪ್ರಚಲಿತವಾಗಿದೆ ಹಾಗೂ ಇವರುಗಳು ಸಂಗೀತದ ಸೂಚನೆಗಳ ಪತ್ರಿಕೆಗಳಿಂದ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಡ್ರೀಮ್ ಥಿಯೇಟರ್ನ ಸದಸ್ಯರು ಇತರ ಗಣನೀಯ ಸಂಗೀತಗಾರರ ಜೊತೆ ಕಾರ್ಯನಿರ್ವಹಿಸಿದ್ದಾರೆ. ಗಿಟಾರ್ ವಾದ್ಯರಾದ ಜಾನ್ ಪೊಟ್ರೂಚಿ G3 ಪ್ರವಾಸದಲ್ಲಿ ಮೂರನೇಯ ಕಲೆಗಾರನೆಂದು ಆರು ಬಾರಿ ಹೆಸರು ಪಡೆದಿದ್ದಾರೆ, ಎರಿಕ್ ಜಾನ್ಸನ್ ಹಾಗೂ ರಾಬರ್ಟ್ ಫ್ರಿಪ್ರ ಹೆಜ್ಜೆ ಗುರುತನ್ನು ಅನುಸರಿಸಿ ಇವರನ್ನು ಇತರ ಗಿಟಾರ್ ವಾದ್ಯರನ್ನು ಹೋಲಿಸಿದರೆ ಹೆಚ್ಚು ಬಾರಿ ಆಮಂತ್ರಿಸಲಾಗಿದೆ. ಡ್ರಮ್ ವಾದ್ಯರಾದ ಮೈಕ್ ಪೋರ್ಟ್ನೊಯ್ ಮಾಡರ್ನ್ ಡ್ರಮ್ಮರ್ ಪತ್ರಿಕೆಯಿಂದ 23 ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಹಾಗೂ ಇವರು ರಾಕ್ ಡ್ರಮ್ಮರ್ರ ಹೆಮ್ಮೇಯ ಸರಣಿಯಲ್ಲಿ ಎರಡನೇಯ ಕಿರಿಯ ವ್ಯಕ್ತಿ (37 ರ ವಯಸ್ಸಿನಲ್ಲಿ) ಕೂಡ.ಈ ಬ್ಯಾಂಡಿನ ಅತಿ ಹೆಚ್ಚು ಮಾರಾಟಗೊಂಡ ಆಲ್ಬಂ ಇಮೇಜಸ್ ಎಂಡ್ ವರ್ಡ್ಸ್ (1992), ಇದು ಬಿಲ್ಬೋರ್ಡ್ನ 200 ಅತ್ಯುತಮ ಸರಣಿಯಲ್ಲಿ #61 ಅನ್ನು ಪಡೆದಿತ್ತು.[1] 1994ರಲ್ಲಿ ಬಿಡುಗಡೆಯಾದ ಅವೇಕ್ ಹಾಗೂ 2002ರಲ್ಲಿ ಬಿಡುಗಡೆಯಾದ ಸಿಕ್ಸ್ ಡಿಗ್ರೀಸ್ ಒಫ್ ಇನ್ನರ್ ಟರ್ಬುಲೆನ್ಸ್ ಎರಡೂ ಕೂಡ ಈ ಸರಣಿಯನ್ನು #32 ಹಾಗೂ #46 ಕ್ರಮವಾಗಿ ಪ್ರವೇಶಿಸಿ ಬಹುಪಾಲು ಸಕಾರಾತ್ಮಕ ಸಮೀಕ್ಷೆಗಳನ್ನೆ ಪಡೆದಿವೆ. ಸಿಕ್ಸ್ ಡಿಗ್ರೀಸ್ ಒಫ್ ಇನ್ನರ್ ಟರ್ಬುಲೆನ್ಸ್ , ಎಂಟರ್ಟೆನ್ಮೆಂಟ್ ವೀಕ್ಲಿ ಪತ್ರಿಕೆಯ ಸಂಗೀತದ ವಿಭಾಗದಲ್ಲಿ ಡ್ರೀಮ್ ಥಿಯೇಟರ್ ಸಮೀಕ್ಷೆ ಪಡೆದ ಆರಂಭದ ಬ್ಯಾಂಡ್ ಆಗಲು ದಾರಿ ಮಾಡಿಕೊಟ್ಟಿತು, ಇದು ಅದರ ಬಿಡುಗಡೆಯ ವಾರದಲ್ಲೇ ಪ್ರಕಟಗೊಂಡಿತು. ವಾಸ್ತವದಲ್ಲಿ ಈ ಪತ್ರಿಕೆಯು ಸಾಮಾನ್ಯವಾಗಿ ಮುಖ್ಯ ವಾಹಿನಿಯ ಸಂಗೀತಕ್ಕೆ ಹೆಚ್ಚು ಆಧ್ಯತೆ ಕೊಡುತಿತ್ತು. 2007ರಲ್ಲಿ ಸಿಸ್ಟೆಮ್ಯಾಟಿಕ್ ಚಾವೋಸ್ US ಬಿಲ್ಬೋರ್ಡ್ನ 200 ರ ಸರಣಿಯ #19 ಸ್ಥಾನವನ್ನು ಪ್ರವೇಶಿಸಿತು.[1] ಡ್ರೀಮ್ ಥಿಯೇಟರ್ U.S.ನಲ್ಲಿ ಎರಡು ಮಿಲಿಯನ್ಗಿಂತ ಹೆಚ್ಚು ಆಲ್ಬಂಗಳ ಮಾರಾಟ ಮಾಡಿದ್ದು[2] ಜಗತ್ತಿನಾದ್ಯಂತ 8 ಮಿಲಿಯನ್ ರೆಕಾರ್ಡ್ಗಳನ್ನು ಮಾರಾಟ ಮಾಡಿದೆ.[ಸೂಕ್ತ ಉಲ್ಲೇಖನ ಬೇಕು] ಈ ಬ್ಯಾಂಡ್ನ ಹತ್ತನೇಯ ಸ್ಟೂಡಿಯೋ ಆಲ್ಬಂ, ಬ್ಲ್ಯಾಕ್ ಕ್ಲೌಡ್ಸ್ & ಸಿಲ್ವರ್ ಲೈನಿಂಗ್ಸ್ 23 ಜೂನ್ 2009ರಲ್ಲಿ ಬಿಡುಗಡೆ ಆಯಿತು. ಇದು US ಬಿಲ್ಬೋರ್ಡ್ನ 200ರ ಸರಣಿಯಲ್ಲಿ #6 ಸ್ಥಾನ ಹಾಗೂ ಯುರೋಚಾರ್ಟ್ 100ರ ಸರಣಿಯಲ್ಲಿ #1 ಸ್ಥಾನವನ್ನು ಪ್ರವೇಶಿಸಿತು, ಇದು ಎರಡು ಸರಣಿಗಳಲ್ಲಿ ಇವರ ಉನ್ನತ ಸ್ಥಾನವನ್ನು ಸೂಚಿಸುತ್ತದೆ.
Dream Theater | |
---|---|
ಹಿನ್ನೆಲೆ ಮಾಹಿತಿ | |
ಅಡ್ಡಹೆಸರು | Majesty (1985-1989) |
ಮೂಲಸ್ಥಳ | Long Island, New York, United States |
ಸಂಗೀತ ಶೈಲಿ | Progressive metal, progressive rock, heavy metal |
ಸಕ್ರಿಯ ವರ್ಷಗಳು | 1985-Present |
Labels | Roadrunner, Elektra, EastWest, Atco, Mechanic |
Associated acts | Liquid Tension Experiment, Explorers Club, MullMuzzler, Nightmare Cinema, OSI, Platypus, The Jelly Jam, Transatlantic, True Symphonic Rockestra, Chroma Key, Avenged Sevenfold, Queensryche |
ಅಧೀಕೃತ ಜಾಲತಾಣ | www.dreamtheater.net |
ಸಧ್ಯದ ಸದಸ್ಯರು | James Labrie John Myung John Petrucci Mike Portnoy Jordan Rudess |
ಮಾಜಿ ಸದಸ್ಯರು | Chris Collins Charlie Dominici Kevin Moore Derek Sherinian |