ದಕ್ಷಿಣ ಕನ್ನಡ
ಕರ್ನಾಟಕದ ಒಂದು ಜಿಲ್ಲೆ / From Wikipedia, the free encyclopedia
ದಕ್ಷಿಣ ಕನ್ನಡ (ತುಳು: ಕುಡ್ಲ) ಕರ್ನಾಟಕ ರಾಜ್ಯದ ಒಂದು ಕರಾವಳಿ ಜಿಲ್ಲೆ. ಈ ಜಿಲ್ಲೆಯ ಕೇಂದ್ರಸ್ಥಳ ಹಾಗೂ ಮುಖ್ಯ ನಗರ ಮಂಗಳೂರು. ದಕ್ಷಿಣ ಕನ್ನಡ ಜಿಲ್ಲೆಯ ಜನಸಂಖ್ಯೆ ೨೦,೮೯,೬೪೯ ಆಗಿದ್ದು ಇದರಲ್ಲಿ ಪುರುಷರು ೧೦,೩೪,೭೧೪ ಹಾಗೂ ಮಹಿಳೆಯರು ೧೦,೫೪,೯೩೫ (೨೦೧೧ರ ಜನಗಣತಿಯಂತೆ)[2] . ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಳು ತಾಲ್ಲೂಕುಗಳಿವೆ. ಅವೆಂದರೆ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ಬೆಳ್ತಂಗಡಿ, ಮೂಡಬಿದಿರೆ,ಹಾಗೂ ಕಡಬ.
Quick Facts ದಕ್ಷಿಣ ಕನ್ನಡ, ದೇಶ ...
ದಕ್ಷಿಣ ಕನ್ನಡ | |
---|---|
ಜಿಲ್ಲೆ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ ಕೇಂದ್ರ | ಮಂಗಳೂರು |
Population (2011) | |
• Total | ೨೦,೮೩,೬೨೫[1] |
Time zone | UTC+5:30 (IST) |
ಪಿನ್ ಕೋಡ್ | 5750xx(Mangalore), 574xxx |
ದೂರವಾಣಿ ಕೋಡ್ | + 91 (082xx) |
Vehicle registration | KA 19, KA 21, KA 62 KA70 |
Website | www |
Close
ಕೆಲವು ವರ್ಷಗಳ ಹಿಂದೆ ಉಡುಪಿ, ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳೂ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ್ದವು . ಆಗಸ್ಟ್ ೧೯೯೭ ರಲ್ಲಿ ಈ ತಾಲೂಕುಗಳನ್ನು ಉಡುಪಿ ಜಿಲ್ಲೆಯ ಭಾಗವಾಗಿ ಘೋಷಿಸಲಾಯಿತು.