ದಿಲೀಪ್ ಕುಮಾರ್ (ಚಿತ್ರ ನಟ)
ಭಾರತೀಯ ಚಿತ್ರ ನಟ (೧೯೨೨-೨೦೨೧) / From Wikipedia, the free encyclopedia
ದಿಲೀಪ್ ಕುಮಾರ್ (೧೧ ಡಿಸೆಂಬರ್ ೧೯೨೨ - ೦೭ ಜುಲೈ, ೨೦೨೧) ಹಿಂದಿ ಚಲನಚಿತ್ರ ರಂಗದ ಅಭಿನೇತೃ. ತಮ್ಮ ಕಾಲದ ಶ್ರೇಷ್ಠ ನಟರಲ್ಲಿ ಒಬ್ಬರೆಂದು ಅವರನ್ನು ಪರಿಗಣಿಸಲಾಗುತ್ತದೆ. ೧೯೪೪ರಿಂದ ೧೯೯೬ರವರೆಗೆ ಸುಮಾರು ೬೨ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಶೋಕರಸ ಪ್ರಧಾನ ಭೂಮಿಕೆಗಳಲ್ಲಿ ಪ್ರಸಿದ್ಧರಾದ ಕಾರಣ ಅವರನ್ನು ದುರಂತ ನಾಯಕನೆಂದೂ ಕರೆಯುತ್ತಾರೆ. ಅನೇಕ ಪ್ರಶಸ್ತಿಗಳಿಂದ ಮಾನಿತರಾದ ಇವರು ಭಾರತೀಯ ಚಲನಚಿತ್ರ ರಂಗದ ಸರ್ವೋಚ್ಚ ಸನ್ಮಾನವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರೂ ಆಗಿದ್ದಾರೆ. ಅವರು ಭಾರತದ ರಾಜ್ಯಸಭೆಯ ಸದಸ್ಯರೂ ಆಗಿದ್ದರು.
Quick Facts 'ದಿಲೀಪ್ ಕುಮಾರ್, ಜನನ ...
'ದಿಲೀಪ್ ಕುಮಾರ್ | |
---|---|
ಜನನ | ಮೊಹಮ್ಮದ್ ಯೂಸುಫ್ ಖಾನ್ ಡಿಸೆಂಬರ್ ೧೧, ೧೯೨೨ ಪೇಶಾವರ, ಪಾಕಿಸ್ತಾನ |
ಮರಣ | ಮುಂಬಯಿನ ಹಿಂದೂಜಾ ಆಸ್ಪತ್ರೆ. ವಯಸ್ಸು : ೯೮. ಜುಲೈ,೦೭, ೨೦೨೧ |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ(ಗಳು) | ಚಲನಚಿತ್ರ ನಟ ನಿರ್ಮಾಪಕ ರಾಜಕಾರಣಿ |
Years active | ೧೯೪೪ – ೧೯೯೮ |
ಸಂಗಾತಿ(s) | ಸಾಯಿರಾ ಬಾನು (೧೯೬೬ - present) Asmaa (೧೯೮೨ - present) |
Close