ದಿ ಅಂಡರ್ಟೇಕರ್
From Wikipedia, the free encyclopedia
ಮಾರ್ಕ್ ವಿಲಿಯಂ ಕ್ಯಾಲವೆ ರವರು (ಜನನ ಮಾರ್ಚ್ ೨೪, ೧೯೬೫)[1] ಅಮೇರಿಕಾದ ಓರ್ವ ವೃತ್ತಿಪರ ಕುಸ್ತಿಪಟು ಆಗಿದ್ದು, ತನ್ನ ಅಖಾಡದ ಹೆಸರಾದ ದಿ ಅಂಡರ್ಟೇಕರ್ ಎಂಬ ನಾಮದಿಂದ ಪ್ರಸಿದ್ಧವಾಗಿದ್ದಾರೆ. ಅವರು ವರ್ಲ್ಡ್ ರೆಸ್ಲಿಂಗ್/ಕುಸ್ತಿ ಎಂಟರ್ಟೇನ್ಮೆಂಟ್ಗೆ (WWE) ಸಹಿ ಹಾಕಿದ್ದು, ಸದ್ಯಕ್ಕೆ ಸ್ಮ್ಯಾಕ್ಡೌನ್ ರೆಸ್ಲಿಂಗ್ ವಿಭಾಗದಲ್ಲಿ [ಇದ್ದಾರೆ
ಕ್ಯಾಲವೆ ೧೯೮೪ ರಲ್ಲಿ ನಡೆದ ವರ್ಡ್ ಕ್ಲಾಸ್ ಚಾಂಪಿಯನ್ಷಿಪ್ ರೆಸ್ಲಿಂಗ್ನಿಂದ ತನ್ನ ಕುಸ್ತಿಯನ್ನು ವೃತ್ತಿಯಾಗಿ ಆರಂಭಿಸಿದರು. ವರ್ಲ್ಡ್ ಚಾಂಪಿಯನ್ಷಿಪ್ ರೆಸ್ಲಿಂಗ್ಗೆ (WCW) ೧೯೮೯ ರಲ್ಲಿ "ಮೀನ್" ಮಾರ್ಕ್ ಕ್ಯಾಲಸ್ ಎಂಬ ಹೆಸರಿನಲ್ಲಿ ಸೇರಿದರು. ೧೯೯೦ ರಲ್ಲಿ WCW ಕ್ಯಾಲವೆರವರ ಕರಾರನ್ನು ನವೀಕರಿಸಲಿಲ್ಲವಾದುದರಿಂದ, ಅವರು ಅದೇ ವರ್ಷದ ನವೆಂಬರ್ನಲ್ಲಿ ದಿ ಅಂಡರ್ಟೇಕರ್ ಆಗಿ ವರ್ಲ್ಡ್ ರೆಸ್ಲಿಂಗ್ ಫೆಡರೇಶನ್ಗೆ (ನಂತರ ೨೦೦೨ ರಲ್ಲಿ ವರ್ಲ್ಡ್ ರೆಸ್ಲಿಂಗ್ ಎಂಟರ್ಟೇನ್ಮೆಂಟ್ ಎಂದು ಬದಲಾಯಿತು) ಸೇರ್ಪಡೆಯಾದರು. ಆಗಿನಿಂದಲೂ ಅದೇ ಕಂಪನಿಯಲ್ಲಿ ಇರುವುದರಿಂದ, ಪ್ರಚಲಿತ ಕ್ಯಾಲವೆ WWEನ ಹಿರಿಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಮಂಡೇ ನೈಟ್ ರಾ ಕಾರ್ಯಕ್ರಮದ ಪ್ರಪ್ರಥಮ ಭಾಗದಲ್ಲಿ ಕಾಣಿಸಿಕೊಂಡಿದ್ದು, ಈಗಲೂ ಅದೇ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಪೂರ್ಣಾವಧಿಯ ಕುಸ್ತಿಪಟುಗಳಲ್ಲಿ ಒಬ್ಬರಾದ ಷಾನ್ ಮೈಕೆಲ್ಸ್ನೊಂದಿಗೆ ಅಂಡರ್ಟೇಕರ್ ಇದ್ದಾರೆ.
ಅಂಡರ್ಟೇಕರ್ ಎರಡು ವಿಭಿನ್ನ ತಂತ್ರ/ಚಳಕಗಳನ್ನು ಅನುಸರಿಸಿದ್ದಾರೆ: ದಿ ಡೆಡ್ಮ್ಯಾನ್ ಹಾಗೂ ದಿ ಅಮೇರಿಕನ್ ಬ್ಯಾಡ್ ಆಸ್. ಅಂಡರ್ಟೇಕರ್ (ಅಥವಾ ನಿರ್ದಿಷ್ಟವಾಗಿ ಅವರ "ಡೆಡ್ಮ್ಯಾನ್" ರೂಪ) ಆಡಿದ ವಿಶಿಷ್ಟ ಪಂದ್ಯಗಳು ಎಂದರೆ ಕ್ಯಾಸ್ಕೆಟ್ ಪಂದ್ಯ, ಬರೀಡ್ ಅಲೈವ್) ಪಂದ್ಯ, ಕುಖ್ಯಾತ ಹೆಲ್ ಇನ್ ಸೆಲ್, ಹಾಗೂ ಲಾಸ್ಟ್ ರೈಡ್ ಪಂದ್ಯಗಳು.ಬ್ರದರ್ಸ್ ಆಫ್ ಡಿಸ್ಟ್ರಕ್ಷನ್ನಲ್ಲಿ ಅಂಡರ್ಟೇಕರ್ ಕಥಾಭಾಗದಲ್ಲಿನ ತನ್ನ ಮಲ ಸಹೋದರ ಕೇನ್ ಜೊತೆಗೂಡಿ ಪಂದ್ಯ ಆಡಿದರು. ಅಂಡರ್ಟೇಕರ್ ರೆಸಲ್ಮೇನಿಯಾದಲ್ಲಿ ೨೦–೦ ದಾಖಲೆಯೊಂದಿಗೆ ಜಯಗಳಿಸಿದ್ದರು ಹಾಗೂ WWE ಅವರನ್ನು ಏಳು ಬಾರಿ ವಿಶ್ವ ಚಾಂಪಿಯನ್ ಎಂದು ಗುರುತಿಸಿದ್ದು, ಅದರಲ್ಲಿ ನಾಲ್ಕು ಬಾರಿ WWE ಚಾಂಪಿಯನ್ಷಿಪ್ ಜಯಗಳಿಸಿದರೆ ಮೂರು ಬಾರಿ ವಿಶ್ವ ಹೆವಿವೈಟ್ ಚಾಂಪಿಯನ್ಷಿಪ್ನಲ್ಲಿ ವಿಜಯಿಯಾಗಿದ್ದರು. ಅವರು ಒಂದು ಬಾರಿ WWF ಹಾರ್ಡ್ಕೋರ್ ಚಾಂಪಿಯನ್, ಹಾಗೂ ಆರು ಬಾರಿ WWF ಟ್ಯಾಗ್ ಟೀಮ್ ಚಾಂಪಿಯನ್ಷಿಪ್ ಪಟ್ಟವನ್ನು ಮತ್ತು ಒಂದು ಬಾರಿ WCW ಟ್ಯಾಗ್ ಟೀಮ್ ಚಾಂಪಿಯನ್ಷಿಪ್ ಪಟ್ಟವನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಅಂಡರ್ಟೇಕರ್ ೨೦೦೭ ರಲ್ಲಿ ನಡೆದ ರಾಯಲ್ ರಂಬಲ್ನಲ್ಲಿ ವಿಜಯ ಗಳಿಸಿದ್ದು, ೩೦ ನೇ ಸ್ಥಾನದಲ್ಲಿದ್ದು ರಂಬಲ್ಅನ್ನು ಪಟ್ಟವನ್ನು ಗಿಟ್ಟಿಸಿಕೊಂಡ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.