ಪರಮಾಣು ಪ್ರಸರಣ-ಮಾಡದಿರುವ ಒಡಂಬಡಿಕೆ
From Wikipedia, the free encyclopedia
ಪರಮಾಣು ಶಸ್ತ್ರಾಸ್ತ್ರಗಳನ್ನು ಪ್ರಸರಣ-ಮಾಡದಿರುವುದರ ಮೇಲಿನ ಒಡಂಬಡಿಕೆ ಎಂದಷ್ಟೇ ಅಲ್ಲದೇ ಪರಮಾಣು ಪ್ರಸರಣ-ಮಾಡದಿರುವ ಒಡಂಬಡಿಕೆ (NPT ಅಥವಾ NNPT ) ಎಂದೂ ಕರೆಯಲ್ಪಡುವ ಈ ಒಪ್ಪಂದವು ಪರಮಾಣು ಶಸ್ತ್ರಾಸ್ತ್ರಗಳ ಹರಡುವಿಕೆಯನ್ನು (ಪ್ರಸರಣವನ್ನು) ಸೀಮಿತಗೊಳಿಸಲು ಇರುವ ಒಂದು ಒಡಂಬಡಿಕೆಯಾಗಿದೆ. 1970ರ ಮಾರ್ಚ್ 5ರಂದು ಈ ಒಡಂಬಡಿಕೆಯು ಜಾರಿಗೆ ಬಂತು ಮತ್ತು ಪ್ರಸ್ತುತ ಈ ಒಡಂಬಡಿಕೆಯಲ್ಲಿ 189 ರಾಷ್ಟ್ರಗಳು ಪಾಲ್ಗೊಳ್ಳುತ್ತಿದ್ದು, ಅವುಗಳ ಪೈಕಿ ಐದು ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರ ರಾಷ್ಟ್ರಗಳೆಂದು ಗುರುತಿಸಲ್ಪಟ್ಟಿವೆ. ಅವುಗಳೆಂದರೆ: ಅಮೆರಿಕಾ ಸಂಯುಕ್ತ ಸಂಸ್ಥಾನಗಳು, ರಷ್ಯಾ, ಯುನೈಟೆಡ್ ಕಿಂಗ್ಡಂ, ಫ್ರಾನ್ಸ್, ಮತ್ತು ಚೀನಾ (ಇವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ಕಾಯಂ ಸದಸ್ಯ ರಾಷ್ಟ್ರಗಳು ಕೂಡಾ ಆಗಿವೆ).
ಸಹಿ ಮಾಡಿದ ದಿನ | 1 July 1968 |
---|---|
ಸ್ಥಳ | New York, United States |
Effective | 5 March 1970 |
Condition | Ratification by the United Kingdom, the Soviet Union, the United States, and 40 other signatory states. |
Parties | 189 (Complete List) |
ಸದರಿ ಒಡಂಬಡಿಕೆಯಲ್ಲಿ ಪಾಲ್ಗೊಳ್ಳದ ನಾಲ್ಕು ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿವೆ ಎಂದು ತಿಳಿದುಬಂದಿದೆ ಅಥವಾ ನಂಬಲಾಗಿದೆ. ಭಾರತ, ಪಾಕಿಸ್ತಾನ ಮತ್ತು ಉತ್ತರ ಕೊರಿಯಾ ದೇಶಗಳು ಬಹಿರಂಗವಾಗಿ ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಗಳನ್ನು ನಡೆಸಿದ್ದರ ಜೊತೆಗೆ, ತಾವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವುದಾಗಿ ಘೋಷಿಸಿಕೊಂಡಿದ್ದರೆ, ಇಸ್ರೇಲ್ ದೇಶವು ತನ್ನ ಸ್ವಂತದ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಸೂಚಿಗೆ ಸಂಬಂಧಿಸಿದಂತೆ ಒಂದು ಅಪಾರದರ್ಶಕತೆಯ ಕಾರ್ಯನೀತಿಯನ್ನು ಹೊಂದಿದೆ. ಉತ್ತರ ಕೊರಿಯಾ ದೇಶವು ಒಡಂಬಡಿಕೆಗೆ ಸಮ್ಮತಿಸಿತು, ಅದನ್ನು ಉಲ್ಲಂಘಿಸಿತು, ಮತ್ತು 2003ರಲ್ಲಿ ಒಡಂಬಡಿಕೆಯಿಂದ ಹಿಂದೆ ಸರಿಯಿತು.
ಈ ಒಡಂಬಡಿಕೆಯು ಐರ್ಲೆಂಡ್ ಹಾಗೂ ಫಿನ್ಲೆಂಡ್ ದೇಶಗಳಿಂದ ಪ್ರಸ್ತಾವಿಸಲ್ಪಟ್ಟಿತು ಮತ್ತು ಅದಕ್ಕೆ ಮೊದಲಿಗೆ ಸಹಿಹಾಕಿದ ದೇಶಗಳೂ ಅವೇ ಆಗಿದ್ದವು.
NPTಯು ಒಂದು ಪೀಠಿಕಾಭಾಗ ಹಾಗೂ ಹನ್ನೊಂದು ಕಲಮುಗಳನ್ನು ಒಳಗೊಂಡಿದೆ. NPTಯಲ್ಲಿನ ಯಾವ ಭಾಗದಲ್ಲಿಯೂ "ಆಧಾರಸ್ತಂಭಗಳು" ಎಂಬ ಪರಿಕಲ್ಪನೆಯು ಕಾಣಿಸುವುದಿಲ್ಲವಾದರೂ, ಒಡಂಬಡಿಕೆಯನ್ನು ಕೆಲವೊಮ್ಮೆ ಒಂದು ಮೂರು ಆಧಾರಸ್ತಂಭ ದ ವ್ಯವಸ್ಥೆ ಎಂದು ವ್ಯಾಖ್ಯಾನಿಸಲಾಗುತ್ತದೆ ಮತ್ತು ಅವುಗಳ ನಡುವೆ ಒಂದು ಸೂಚ್ಯವಾದ ಅಥವಾ ಅಂತರ್ಗತವಾದ ಸಮತೋಲನವಿದೆ. ಆ ಮೂರು ಆಧಾರಸ್ತಂಭಗಳೆಂದರೆ:
- ಪ್ರಸರಣ-ಮಾಡದಿರುವಿಕೆ ,
- ನಿರಸ್ತ್ರೀಕರಣ , ಮತ್ತು
- ಪರಮಾಣು ತಂತ್ರಜ್ಞಾನವನ್ನು ಶಾಂತಿಯುತವಾಗಿ ಬಳಸುವ ಹಕ್ಕು .[1]
ಪರಮಾಣು ಶಸ್ತ್ರಾಸ್ತ್ರಗಳನ್ನು ಪ್ರಸರಣ-ಮಾಡದಿರುವ ಒಡಂಬಡಿಕೆಗೆ ಸಂಬಂಧಿಸಿದ, ಸಹಭಾಗಿಗಳ ಅವಲೋಕನದ ಸಮಾವೇಶಗಳೆಂದು ಕರೆಯಲ್ಪಡುವ ಸಭೆಗಳಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಒಡಂಬಡಿಕೆಯು ಅವಲೋಕಿಸಲ್ಪಡುತ್ತದೆ. ಇದರ ಜೊತೆಗೆ, ಅವಲೋಕನದ ಸಮಾವೇಶಕ್ಕಾಗಿರುವ ಪೂರ್ವಸಿದ್ಧತಾ ಸಮಿತಿಯ ಅಧಿವೇಶನಗಳು ಇದರ ನಡುವಣ ವರ್ಷಗಳಲ್ಲಿ ನಡೆಯುತ್ತವೆ. ಸಮಾನಕಾಲಿಕವಾಗಿ, ಪೂರ್ವಸಿದ್ಧತಾ ಸಮಿತಿಗಳಿಗೆ ಮೆಚ್ಚುಗೆ ಸೂಚಿಸುವ ವರದಿಗಳು ಹಾಗೂ ಶಿಫಾರಸುಗಳನ್ನು ಒದಗಿಸಲು ಸ್ವತಂತ್ರ ಸಂಸ್ಥೆಗಳು, ಪರಿಣಿತರ ಗುಂಪುಗಳು, ಚಿಂತಕರ ಚಾವಡಿಗಳು ಹಾಗೂ NGOಗಳಿಂದ ಸಂಘಟಿಸಲ್ಪಡುವ ಅನೇಕ ಘಟನೆಗಳು ಅಥವಾ ಕಾರ್ಯಕ್ರಮಗಳು ವಿಶ್ವಾದ್ಯಂತ ನಡೆಯುತ್ತವೆ.[2]
25 ವರ್ಷಗಳ ಒಂದು ಸೀಮಿತ ಅವಧಿಯೊಂದಿಗೆ ಒಡಂಬಡಿಕೆಯನ್ನು ಮೂಲತಃ ಗ್ರಹಿಸಲಾಗಿತ್ತಾದರೂ, 1995ರ ಮೇ 11ರಂದು ನ್ಯೂಯಾರ್ಕ್ ನಗರದಲ್ಲಿ ನಡೆದ ಅವಲೋಕನದ ಸಮಾವೇಶದ ಅವಧಿಯಲ್ಲಿ, ಸಹಿಹಾಕುವ ಸಹಭಾಗಿಗಳು ಬಹುಮತಾಭಿಪ್ರಾಯದ ಮೂಲಕ ಅನಿರ್ದಿಷ್ಟಾವಧಿಯವರೆಗೆ ಹಾಗೂ ಯಾವುದೇ ಷರತ್ತುಗಳಿಲ್ಲದೆಯೇ ಒಡಂಬಡಿಕೆಯನ್ನು ವಿಸ್ತರಿಸಲು ನಿರ್ಧರಿಸಿದರು.