ಪಿಸಿಐ ಎಕ್ಸ್ಪ್ರೆಸ್
From Wikipedia, the free encyclopedia
ಪಿಸಿಐ ಎಕ್ಸ್ಪ್ರೆಸ್ ಎಂದರೆ ಫೆರಿಫರಲ್ ಕಾಂಪೊನಂಟ್ ಇಂಟರ್ಕನೆಕ್ಟ್ ಎಕ್ಸಪ್ರೆಸ್ , ಅಧೀಕೃತವಾಗಿ ಇದು ಪಿಸಿಐಇ (ಅಥವಾ ಇದನ್ನು ಸಾಮಾನ್ಯವಾಗಿ ಪಿಸಿಐ-ಇ ಎಂದು ಕರೆಯಲಾಗುತ್ತದೆ) ಎಂದು ಸಂಕುಚಿಸಲ್ಪಟ್ಟಿದೆ, ಇದು ಹಳೆಯ ಪಿಸಿಐ, ಪಿಸಿಐ-ಎಕ್ಸ್, ಮತ್ತು ಎಜಿಪಿ ಸ್ಟ್ಯಾಂಡರ್ಡ್ಗಳನ್ನು ಬದಲಾಯಿಸಲು ರಚಿಸಲ್ಪಟ್ಟ ಒಂದು ಕಂಪ್ಯೂಟರ್ ಎಕ್ಸ್ಪಾನ್ಶನ್ ಕಾರ್ಡ್ ಪಿಸಿಐಇ 2.1 ಇದು ಇತ್ತೀಚಿನ ಉತ್ತಮ ದರ್ಜೆಯ ಎಕ್ಸ್ಪಾನ್ಶನ್ ಕಾರ್ಡ್ ಮತ್ತು ಇದು ಪರ್ಸನಲ್ ಕಂಪ್ಯೂಟರ್ಗಳ ಮುಖ್ಯವಾಹಿನಿಯಲ್ಲಿ ಲಭ್ಯವಿದೆ.[1]ಎಕ್ಸ್ಪ್ರೆಸ್ ಅನ್ನು ಕನ್ಸ್ಯೂಮರ್, ಸರ್ವರ್ ಮತ್ತು ಇಂಡಸ್ಟ್ರಿಯಲ್ ಅಪ್ಲಿಕೇಶನ್ ಗಳಲ್ಲಿ ಒಂದಕ್ಕೊಂದು ಹೊಂದಿಕೊಂಡಿರುವ-ಮದರ್ಬೋರ್ಡ್ (ಮದರ್ಬೋರ್ಡನ್ನು-ಅಂಟಿಸಲಾದ ಇತರ ವಸ್ತುಗಳ ಜೊತೆ ಜೋಡಿಸಲು) ರೀತಿಯಲ್ಲಿ ಮತ್ತು ಆಯ್ಡ್-ಇನ್ ಬೋರ್ಡುಗಳಲ್ಲಿ ಎಕ್ಸ್ಪಾನ್ಶನ್ ಕಾರ್ಡ್ ಅಂತರ್ ಸಂಪರ್ಕ ಸಾಧನದ ರೀತಿಯಲ್ಲಿ ಬಳಸಲಾಗುತ್ತದೆ. ಪಿಸಿಐಇ ಮತ್ತು ಬಹು ಹಿಂದಿನ ಬಸ್ಗಳ ನಡುವಿನ ಮುಖ್ಯ ವ್ಯತ್ಯಾಸವೆಂದರೆ ಶೇರ್ ಮಾಡಲಾದ ಸಮಾನಾಂತರ ಬಸ್ ವಿನ್ಯಾಸವಲ್ಲದೇ, ಬಿಂದುವಿನಿಂದ ಬಿಂದುವಿಗೆ ಮಾಡಲಾದ ಸರಣಿ ಕೊಂಡಿಗಳ ಆಧಾರವಾದ ತಂತಿಜಾಲವಾಗಿತ್ತು. ಪಿಸಿಐಇ ವಿದ್ಯುಚ್ಛಕ್ತಿಯ ಅಂತರ ಸಂಪರ್ಕ ಸಾಧನವು ಕೂಡ ಹಲವಾರು ವಿಧದ ಇತರ ದರ್ಜೆಗಳಲ್ಲಿ ಬಳಸಲ್ಪಟ್ಟಿದೆ, ಪ್ರಮುಖವಾಗಿ ಎಕ್ಸ್ಪ್ರೆಸ್ಕಾರ್ಡ್ ಲ್ಯಾಪ್ಟಾಪ್ ಎಕ್ಸ್ಪಾನ್ಶನ್ ಕಾರ್ಡ್ ಅಂತರ ಸಂಪರ್ಕ ಸಾಧನದಲ್ಲಿ.ಕಲ್ಪನಾತ್ಮಕವಾಗಿ, ಪಿಸಿಐಇ ಬಸ್ ಅನ್ನು ಹಳೆಯ (ಸಮಾನಾಂತರ) ಪಿಸಿಐ/ಪಿಸಿಐ-ಎಕ್ಸ್ ಬಸ್ಗಳ ಅಧಿಕ-ವೇಗದ ಸರಣಿ ಬದಲಾವಣೆಯ ಸಾಧನಗಳೆಂದು ತಿಳಿಯಲಾಗಿತ್ತು.[2] ಸಾಪ್ಟ್ವೇರ್ ಹಂತದಲ್ಲಿ, ಪಿಸಿಐಇ ಇದು ಪಿಸಿಐನೊಂದಿಗಿನ ಹೊಂದಾಣಿಕೆಯನ್ನು ಸುರಕ್ಷಿತವಾಗಿಡುತ್ತದೆ; ಒಂದು ಪಿಸಿಐಇ ಸಾಧನವನ್ನು ಪಿಸಿಐಇಗಳ ಹೊಸ ಲಕ್ಷಣಗಳ ಯಾವುದೇ ನೇರ ಜ್ಞಾನವಿಲ್ಲದ ಲೆಗಸಿ ಅಪ್ಲಿಕೇಶನ್ಗಳಲ್ಲಿ ಮತ್ತು ಆಪರೇಟಿಂಗ್ ಸಿಸ್ಟಂಗಳಲ್ಲಿ ಕಾನ್ಫಿಗರ್ ಮತ್ತು ಬಳಕೆ ಮಾಡಿಕೊಳ್ಳಬಹುದಾಗಿತ್ತು (ಆದಾಗ್ಯೂ ನೀವು ಪಿಸಿಐ ಸ್ಲಾಟ್ನೊಳಗೆ ಪಿಸಿಐಇ ಕಾರ್ಡನ್ನು ಅಳವಡಿಸಲು ಸಾಧ್ಯವಿಲ್ಲ). ಬಸ್ ನಿಯಮಾವಳಿಗಳ ಪ್ರಕಾರ, ಪಿಸಐಇ ಸಂವಹನವು ಪ್ಯಾಕುಗಳಲ್ಲಿ ಅಡಕವಾಗಿರುತ್ತದೆ. ದತ್ತಾಂಶವನ್ನು ಪ್ಯಾಕ್ ಮಾಡುವಿಕೆ ಮತ್ತು ಪ್ಯಾಕ್ನಿಂದ ಹೊರ ತೆಗೆಯುವಿಕೆಯ ಕಾರ್ಯ ಮತ್ತು ಮಾಹಿತಿ-ಹಂತಗಳ ದಟ್ಟಣೆಯನ್ನು ಪಿಸಿಐಇ ಪೋರ್ಟ್ ನ ನಿರ್ವಹಣಾ ಪದರವು ನೋಡಿಕೊಳ್ಳುತದೆ (ನಂತರದಲ್ಲಿ ವಿವರಿಸಲಾಗಿದೆ). ವಿದ್ಯುತ್ಚ್ಚಕ್ತಿಯ ಸಂಜ್ಞೆಯಲ್ಲಿ ಮತ್ತು ಬಸ್ ನಿಯಮಾವಳಿಗಳಿಗೆ ಬೇಕಾದ ವಿಭಿನ್ನ ಯಾಂತ್ರಿಕ ರೂಪದ ಸಾಧನಗಳು ಮತ್ತು ವಿಸ್ತೃತ ಜೋಡಣೆಗಳ ಬಳಕೆಯಲ್ಲಿ ಮೂಲಭೂತ ವ್ಯತ್ಯಾಸಗಳಿವೆ (ಮತ್ತು ಹಾಗಾಗಿ, ಹೊಸ ಮದರ್ಬೋರ್ಡ್ಗಳನ್ನು ಹಾಗು ಹೊಸ ಅಡಾಪ್ಟರ್ ಬೋರ್ಡ್ಗಳನ್ನು ಬಳಸಲಾಯಿತು).
This article has multiple issues. Please help improve it or discuss these issues on the talk page. (Learn how and when to remove these template messages)
No issues specified. Please specify issues, or remove this template. |