ಪೊಟ್ಯಾಶಿಯಮ್
ಆವರ್ತಕ ಕೋಷ್ಟಕದಲ್ಲಿ ಪರಮಾಣು ಸಂಖ್ಯೆ ೧೯ ಮೂಲಧಾತು / From Wikipedia, the free encyclopedia
ಪೊಟ್ಯಾಶಿಯಮ್ (Potassium) ಒಂದು ಮೃದುವಾದ ಬೆಳ್ಳಿಯಂತ ಹೊಳಪುಳ್ಳ ಕ್ಷಾರ ಲೋಹ ಮೂಲಧಾತು. ರಾಸಾಯನಿಕವಾಗಿ ಸೋಡಿಯಮ್ ಅನ್ನು ಹೋಲುವ ಈ ಧಾತು, ನೀರು ಮತ್ತು ಗಾಳಿಗಳೊಂದಿಗೆ ಬಹಳ ಬೇಗ ರಾಸಾಯನಿಕ ಪ್ರಕ್ರಿಯೆಗೆ ಒಳಗೊಳ್ಳುತ್ತದೆ. ಭೂಪದರದ ಸುಮಾರು ೧.೫% ತೂಕವು ಈ ಲೋಹದಿಂದ ಬಂದಿದೆ.
| ||||||
ಸಾಮಾನ್ಯ ಮಾಹಿತಿ | ||||||
---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಪೊಟ್ಯಾಶಿಯಮ್, K, ೧೯ | |||||
ರಾಸಾಯನಿಕ ಸರಣಿ | ಕ್ಷಾರ ಲೋಹ | |||||
ಗುಂಪು, ಆವರ್ತ, ಖಂಡ | 1, 4, s | |||||
ಸ್ವರೂಪ | ಬೆಳ್ಳಿಯ ಹೊಳಪು | |||||
ಅಣುವಿನ ತೂಕ | 39.0983(1) g·mol−1 | |||||
ಋಣವಿದ್ಯುತ್ಕಣ ಜೋಡಣೆ | [Ar] 4s1 | |||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು | 2, 8, 8, 1 | |||||
ಭೌತಿಕ ಗುಣಗಳು | ||||||
ಹಂತ | solid | |||||
ಸಾಂದ್ರತೆ (ಕೋ.ತಾ. ಹತ್ತಿರ) | 0.89 g·cm−3 | |||||
ದ್ರವದ ಸಾಂದ್ರತೆ at ಕ.ಬಿ. | 0.828 g·cm−3 | |||||
ಕರಗುವ ತಾಪಮಾನ | 336.53 K (63.38 °C, 146.08 °ಎಫ್) | |||||
ಕುದಿಯುವ ತಾಪಮಾನ | 1032 K (759 °C, 1398 °F) | |||||
ಅಣುವಿನ ಗುಣಗಳು | ||||||
ಸ್ಪಟಿಕ ಸ್ವರೂಪ | cubic body centered | |||||
ಆಕ್ಸಿಡೀಕರಣ ಸ್ಥಿತಿಗಳು | 1 (strongly basic oxide) | |||||
ವಿದ್ಯುದೃಣತ್ವ | 0.82 (Pauling scale) | |||||
ಅಣುವಿನ ತ್ರಿಜ್ಯ | 220 pm | |||||
ಅಣುವಿನ ತ್ರಿಜ್ಯ (ಲೆಖ್ಕಿತ) | 243 pm | |||||
ತ್ರಿಜ್ಯ ಸಹಾಂಕ | 196 pm | |||||
ವಾನ್ ಡೆರ್ ವಾಲ್ಸ್ ತ್ರಿಜ್ಯ | 275 pm | |||||
ಇತರೆ ಗುಣಗಳು | ||||||
ಕಾಂತೀಯ ವ್ಯವಸ್ಥೆ | paramagnetic | |||||
ಉಷ್ಣ ವಾಹಕತೆ | (300 K) 102.5 W·m−1·K−1 | |||||
ಉಷ್ಣ ವ್ಯಾಕೋಚನ | (25 °C) 83.3 µm·m−1·K−1 | |||||
ಶಬ್ದದ ವೇಗ (ತೆಳು ಸರಳು) | (20 °C) 2000 m/s | |||||
ಯಂಗ್ ಮಾಪಾಂಕ | 3.53 GPa | |||||
ವಿರೋಧಬಲ ಮಾಪನಾಂಕ | 1.3 GPa | |||||
ಸಗಟು ಮಾಪನಾಂಕ | 3.1 GPa | |||||
ಮೋಸ್ ಗಡಸುತನ | 0.4 | |||||
ಬ್ರಿನೆಲ್ ಗಡಸುತನ | 0.363 MPa | |||||
ಸಿಎಎಸ್ ನೋಂದಾವಣೆ ಸಂಖ್ಯೆ | 7440-09-7 | |||||
ಉಲ್ಲೇಖನೆಗಳು | ||||||
ಇದರ ಪ್ರತೀಕ K, ಪರಮಾಣು ಸಂಖ್ಯೆ ೧೯ ಮತ್ತು ಪರಮಾಣು ತೂಕ ೩೦.೧೦೨. ವನಸ್ಪತಿಗಳ ಜ್ವಲನಾನಂತರ ದೊರೆಯುವ ಭಸ್ಮದಲ್ಲಿರುವ ಪೊಟ್ಯಾಶ್ (K2CO3) ರೂಪದಲ್ಲಿ ಪೊಟ್ಯಾಸಿಯಮ್ ಮಾನವನಿಗೆ ಬಲು ಹಿಂದಿನಿಂದಲೂ ಪರಿಚಿತವಿದೆ. ಭೂಮಿಯಲ್ಲಿ ಹರಡಿಹೋಗಿರುವ ಧಾತುಗಳ ಪೈಕಿ ಬಾಹುಲ್ಯದಲ್ಲಿ ಪೊಟ್ಯಾಸಿಯಮ್ಮಿಗೆ ಏಳನೆಯ ಸ್ಥಾನ ಉಂಟು.[1] ಇದರ ತೀಕ್ಷ್ಣ ರಾಸಾಯನಿಕ ತೀವ್ರತೆಯಿಂದಾಗಿ ಇದು ನಿಸರ್ಗದಲ್ಲಿ ಧಾತುರೂಪದಲ್ಲಲ್ಲದೆ ಸಂಯುಕ್ತ ರೂಪದಲ್ಲಿ ಮಾತ್ರ ದೊರೆಯುತ್ತದೆ. ಪೊಟ್ಯಾಸಿಯಮ್ಮಿನ ಅದುರು ಜರ್ಮನಿಯ ಸ್ಟ್ಯಾಸ್ಫರ್ಟ್ ಎಂಬಲ್ಲಿಯೂ ರಷ್ಯ, ಮೆಕ್ಸಿಕೋ ಇಂಗ್ಲೆಂಡ್, ಆಸ್ಟ್ರೇಲಿಯ, ಸ್ಪೇನ್, ಚಿಲಿ, ಕೆನಡ, ಪೋಲಂಡ್ ಹಾಗೂ ಭಾರತ ದೇಶಗಳ ಅನೇಕ ಪ್ರದೇಶಗಳಲ್ಲಿಯೂ ಲಭ್ಯವಿದೆ.[2][3][4]