ಪ್ರತಿಕಾಯ(ಆಂಟಿಬಾಡಿ)
From Wikipedia, the free encyclopedia
ಪ್ರತಿಕಾಯಗಳು (ಇಮ್ಯುನೊಗ್ಲಾಬ್ಯುಲಿನ್(ಪ್ರತಿರಕ್ಷಣಾ ಗ್ಲಾಬ್ಯುಲಿನ್) ಗಳೆಂದೂ[1] ಕರೆಯಲಾಗುತ್ತದೆ, ಸಂಕ್ಷಿಪ್ತವಾಗಿ Ig ) ಗ್ಯಾಮ ಗ್ಲಾಬ್ಯುಲಿನ್ ಪ್ರೋಟೀನ್ಗಳಾಗಿವೆ. ಅವು ಕಶೇರುಕಗಳ ರಕ್ತ ಅಥವಾ ಇತರ ಶಾರೀರಿಕ ದ್ರವಗಳಲ್ಲಿ ಕಂಡುಬರುತ್ತವೆ. ಅವುಗಳನ್ನು ಪ್ರತಿರಕ್ಷಣಾ ವ್ಯವಸ್ಥೆಯು ಬ್ಯಾಕ್ಟೀರಿಯಾಾ ಮತ್ತು ವೈರಸ್ಗಳಂತಹ ಬಾಹ್ಯ ವಸ್ತುಗಳನ್ನು ಗುರುತಿಸಲು ಮತ್ತು ತಟಸ್ಥಗೊಳಿಸಲು ಬಳಸಿಕೊಳ್ಳಲಾಗುತ್ತದೆ. ಅವು ವೈಶಿಷ್ಟ್ಯವಾಗಿ ಮೂಲ ರಚನಾತ್ಮಕ ಘಟಕಗಳಿಂದ ರಚಿಸಲ್ಪಟ್ಟಿರುತ್ತವೆ - ಪ್ರತಿಯೊಂದು ಎರಡು ದೊಡ್ಡ ದೀರ್ಘ ಸರಪಣಿ(ಗಳು ಮತ್ತು ಎರಡು ಸಣ್ಣ ಸರಳ ಸರಪಣಿಗಳನ್ನು ಹೊಂದಿರುತ್ತವೆ. ಉದಾಹರಣೆಗಾಗಿ,(ಅಣುವಿನಲ್ಲಿರುವ ಘಟಕ) ಮಾನೊಮರ್ಗಳು ಒಂದು ಘಟಕದಿಂದ,(ಎರಡು ಅಣುಗಳಿಂದ ಉಂಟಾದ ಒಂದೇ ಅಣು) ಡೈಮರ್ಗಳು ಎರಡು ಘಟಕಗಳಿಂದ ಅಥವಾ(ಐದು ಘಟಕಗಳ ಕಾಯ,ಪ್ರತಿಕಾಯದ ಅಂಶ ಇರುವಂತಹದ್ದು) ಪೆಂಟಾಮರ್ಗಳು ಐದು ಘಟಕಗಳಿಂದ ಮಾಡಲ್ಪಟ್ಟಿರುತ್ತವೆ. ಪ್ರತಿಕಾಯಗಳು ಪ್ಲಾಸ್ಮಾ ಜೀವಕೋಶಗಳೆನ್ನುವ ಒಂದು ರೀತಿಯ ಬಿಳಿ ರಕ್ತಕಣದಿಂದ ಉತ್ಪಾದಿಸಲ್ಪಡುತ್ತವೆ. ಅನೇಕ ವಿವಿಧ ರೀತಿಯ ಪ್ರತಿಕಾಯ ದೀರ್ಘ ಸರಪಣಿಗಳಿವೆ ಹಾಗೂ ಪ್ರತಿಕಾಯಗಳಲ್ಲಿ ಅನೇಕ ವಿಧಗಳಿವೆ. ಪ್ರತಿಕಾಯಗಳನ್ನು ಅವು ಹೊಂದಿರುವ ದೀರ್ಘ ಸರಪಣಿಗಳ ಆಧಾರದಲ್ಲಿ ವಿವಿಧ ಐಸೊಟೈಪ್ಗಳಾಗಿ ವಿಂಗಡಿಸಲಾಗುತ್ತದೆ. ಸಸ್ತನಿಗಳಲ್ಲಿ ವಿವಿಧ ರೀತಿಯ ಐದು ಪ್ರತಿಕಾಯ ಐಸೊಟೈಪ್ಗಳು ಕಂಡುಬರುತ್ತವೆ. ಅವು ಸಸ್ತನಿಗಳಲ್ಲಿ ವಿವಿಧ ಪಾತ್ರವಹಿಸುತ್ತವೆ. ಅಲ್ಲದೇ ಸಸ್ತನಿಗಳು ಎದುರಿಸುವ ಪ್ರತಿಯೊಂದು ವಿವಿಧ ರೀತಿಯ ಹೊರಗಿನ ವಸ್ತುಗಳಿಗೆ ಪ್ರತಿರಕ್ಷಣಾ ಕ್ರಿಯೆಯನ್ನು ನಿರ್ದೇಶಿಸಲು ಸಹಾಯ ಮಾಡುತ್ತವೆ.[2]
ಎಲ್ಲಾ ಪ್ರತಿಕಾಯಗಳ ಸಾಮಾನ್ಯ ರಚನೆಯು ಹೆಚ್ಚಾಗಿ ಒಂದೇ ರೀತಿ ಇದ್ದರೂ, ಪ್ರೋಟೀನ್ನ ತುದಿಯಲ್ಲಿರುವ ಒಂದು ಸಣ್ಣ ಭಾಗವು ಹೆಚ್ಚಾಗಿ ವ್ಯತ್ಯಾಸಗೊಳ್ಳುತ್ತದೆ. ಇದು ವಿವಿಧ ರೀತಿಯ ತುದಿಯ ರಚನೆಗಳನ್ನು ಅಥವಾ ಪ್ರತಿಜನಕ(ಆಂಟಿಜೆನ್)ಗಳನ್ನು ಬಂಧಿಸುವ ಭಾಗಗಳನ್ನು ಹೊಂದಿರುವ ದಶಲಕ್ಷದಷ್ಟು ಪ್ರತಿಕಾಯಗಳು ಅಸ್ತಿತ್ವದಲ್ಲಿರುವಂತೆ ಮಾಡುತ್ತದೆ. ಈ ಭಾಗವನ್ನು ಹೆಚ್ಚಾಗಿ ವ್ಯತ್ಯಾಸಗೊಳ್ಳುವ(ಹೈಪರ್ವೇರಿಯೇಬಲ್) ಭಾಗವೆಂದು ಕರೆಯಲಾಗುತ್ತದೆ. ಈ ಪ್ರತಿಯೊಂದು ವ್ಯತ್ಯಾಸಗೊಳ್ಳುವ-ಭಾಗವು ಪ್ರತಿಜನಕಗಳೆನ್ನುವ ವಿವಿಧ ರೀತಿಯ ಅಂಶಗಳೊಂದಿಗೆ ಬಂಧಿಸುತ್ತವೆ.[3] ಪ್ರತಿಕಾಯಗಳಲ್ಲಿನ ಈ ಅತಿ ಹೆಚ್ಚಿನ ವಿಭಿನ್ನತೆಯು ಪ್ರತಿರಕ್ಷಣಾ ವ್ಯವಸ್ಥೆಗೆ ವಿವಿಧ ಪ್ರಕಾರದ ಪ್ರತಿಜನಕಗಳನ್ನು ಗುರುತಿಸಲು ಅನುವು ಮಾಡಿಕೊಡುತ್ತದೆ. ಪ್ರತಿಕಾಯದಿಂದ ಗುರುತಿಸಲ್ಪಡುವ ಪ್ರತಿಜನಕದ ಭಿನ್ನ ಭಾಗವನ್ನು ಎಪಿಟೋಪ್ ಎಂದು ಕರೆಯಲಾಗುತ್ತದೆ. ಈ ಎಪಿಟೋಪ್ಗಳು ಅವುಗಳ ಪ್ರತಿಕಾಯದೊಂದಿಗೆ ಪ್ರೇರಿತ ಹೊಂದಿಕೆ(ಇಂಡ್ಯೂಸ್ಡ್ ಫಿಟ್) ಎನ್ನುವ ಒಂದು ವಿಶೇಷ ಪರಸ್ಪರ-ಕ್ರಿಯೆಯ ಮೂಲಕ ಬಂಧಿಸುತ್ತವೆ. ಅದು ಜೀವಿಯನ್ನು ರಚಿಸುವ ಅನೇಕ ವಿವಿಧ ಅಣುಗಳ ಮಧ್ಯೆ ಪ್ರತಿಕಾಯಗಳು ಕೇವಲ ಅವುಗಳ ಭಿನ್ನ ಪ್ರತಿಜನಕವನ್ನು ಮಾತ್ರ ಗುರುತಿಸುವಂತೆ ಮತ್ತು ಅದರೊಂದಿಗೆ ಬಂಧಿಸುವಂತೆ ಮಾಡುತ್ತದೆ. ಪ್ರತಿಕಾಯದಿಂದ ಪ್ರತಿಜನಕದ ಗುರುತಿಸುವಿಕೆಯು ಅದನ್ನು ಪ್ರತಿರಕ್ಷಣಾ ವ್ಯವಸ್ಥೆಯ ಇತರ ಭಾಗಗಳ ದಾಳಿಗೆ ಹೊಂದಿಸುತ್ತದೆ . ಪ್ರತಿಕಾಯಗಳು ಸೋಂಕನ್ನು ಉಂಟುಮಾಡುವ ರೋಗಕಾರಕದ ಭಾಗವೊಂದಕ್ಕೆ ಬಂಧಿಸುವ ಮೂಲಕ ಉದ್ದಿಷ್ಟ ಗುರಿಗಳನ್ನು ನೇರವಾಗಿ ತಟಸ್ಥಗೊಳಿಸಬಹುದು.[4]
ಅತಿ ಹೆಚ್ಚಿನ ಮತ್ತು ವಿಭಿನ್ನ ಪ್ರಕಾರದ ಪ್ರತಿಕಾಯಗಳು ಅನೇಕ ಜೀನ್ ಅಂಶಗಳ ಯಾದೃಚ್ಛಿಕ ಸಂಯೋಗದಿಂದ ರಚನೆಯಾಗುತ್ತವೆ. ಈ ಅಂಶಗಳು ವಿವಿಧ ಪ್ರತಿಜನಕ ಬಂಧಿಸುವ ಭಾಗಗಳನ್ನು ಸಂಕೇತ-ಭಾಷೆಯಲ್ಲಿ (ಅಥವಾ ಪ್ಯಾರಾಟೋಪ್ಗಳು ) ಸೂಚಿಸುತ್ತವೆ, ನಂತರ ಈ ಪ್ರತಿಕಾಯ ಜೀನ್ನ ಈ ಭಾಗದಲ್ಲಿ ಯಾದೃಚ್ಛಿಕ ಹೊಸ ಪರಿವರ್ತನೆ ಉಂಟಾಗುತ್ತದೆ, ಇದು ಪ್ರತಿಕಾಯದ ವಿಭಿನ್ನತೆಗೆ ಕಾರಣವಾಗುತ್ತದೆ.[2][5] ಪ್ರತಿಕಾಯ ಜೀನ್ಗಳು ಕ್ಲಾಸ್ ಸ್ವಿಚಿಂಗ್ ಎನ್ನುವ ಕ್ರಿಯೆಯ ಮೂಲಕ ಮತ್ತೆ-ಸಂಯೋಜಿಸಲ್ಪಡುತ್ತವೆ. ಈ ಕ್ರಿಯೆಯು ದೀರ್ಘ ಸರಪಣಿಯ ಆಧಾರವನ್ನು ಬೇರೆಯದಾಗಿ ಬದಲಾಯಿಸುತ್ತದೆ. ಇದರಿಂದಾಗಿ ಪ್ರತಿಜನಕವನ್ನು ಗುರುತಿಸುವ ಭಾಗವನ್ನು ಉಳಿಸಿಕೊಂಡ ಪ್ರತಿಕಾಯದ ಭಿನ್ನ ರೀತಿಯ ಐಸೊಟೈಪ್ ರಚನೆಯಾಗುತ್ತದೆ. ಇದು ಒಂದು ಪ್ರತಿಕಾಯವನ್ನು ಪ್ರತಿರಕ್ಷಣಾ ವ್ಯವಸ್ಥೆಯ ಅನೇಕ ಭಾಗಗಳು ಬಳಸುವಂತೆ ಮಾಡುತ್ತದೆ. ಪ್ರತಿಕಾಯಗಳ ಉತ್ಪತ್ತಿಯು ರಸಧಾತುಗಳ(ಹ್ಯೂಮರಲ್) ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಒಂದು ಮುಖ್ಯ ಕ್ರಿಯೆಯಾಗಿದೆ.[6]