ಫಿನ್ನೈರ್
From Wikipedia, the free encyclopedia
ಫಿನ್ನೈರ್ ಎಂಬುದು ಫ್ಲಾಗ್ ಕ್ಯಾರಿಯರ್[1] ಮತ್ತು ಫಿನ್ಲೆಂಡ್ ನ ದೊಡ್ಡ ವಿಮಾನಯಾನ ಸಂಸ್ಥೆಯಾಗಿದೆ, ವ್ಯಾಂಟಾದಲ್ಲಿ ತನ್ನ ಕೇಂದ್ರ ಕಛೇರಿಯನ್ನು ಹೊಂದಿದೆ ಮತ್ತು ಇದರ ಮುಖ್ಯ ಕೇಂದ್ರ ಹೆಲ್ಸಿಂಕಿ ವಿಮಾನ ನಿಲ್ದಾಣವಾಗಿದೆ. ಫಿನ್ನೈರ್ ಮತ್ತು ಅದರ ಅಂಗಸಂಸ್ಥೆಗಳು ಫಿನ್ಲೆಂಡ್ನಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವಾಯುಯಾನ ಎರಡರಲ್ಲಿಯೂ ಪ್ರಾಬಲ್ಯವನ್ನು ಹೊಂದಿದೆ. ಇದರ ಪ್ರಮುಖ ಷೇರುದಾರ ಫಿನ್ಲೆಂಡ್ ಸರ್ಕಾರದ್ದು, 55.8% ಷೇರುಗಳನ್ನು ಹೊಂದಿದೆ.[2] ಫಿನ್ನೈರ್ ಒನ್ವರ್ಲ್ಡ್ ವಿಮಾನಯಾನ ಸಂಸ್ಥೆಗಳ ಮೈತ್ರಿಕೂಟದ ಸದಸ್ಯತ್ವ ಹೊಂದಿದೆ. 2015 ರಲ್ಲಿ, 60 ಯುರೋಪಿಯನ್, 13 ಏಷ್ಯನ್ ಮತ್ತು 4 ಉತ್ತರ ಅಮೆರಿಕನ್ ಸ್ಥಳಗಳಿಗೆ 10 ಮಿಲಿಯನ್ ಮೇಲೆ ಪ್ರಯಾಣಿಕರನ್ನು ಸಾಗಣೆ ಮಾಡಿತು. ಜನವರಿ 2016 ರಲ್ಲಿ ಏರ್ಲೈನ್ 4,817 ಜನರನ್ನು ನೌಕರಿಗೆ ನೇಮಿಸಿಕೊಂಡಿತು.[3][4]
ಫಿನ್ನೈರ್ ನಿರಂತರ ಅಸ್ತಿತ್ವದಲ್ಲಿರುವ ವಿಶ್ವದ ಐದನೇ ಹಳೆಯ ವಾಯುಯಾನವಾಗಿದೆ. 1963 ರಿಂದ ಯಾವುದೇ ಮಾರಕ ಅಥವಾ ನಷ್ಟದ ಅಪಘಾತಗಳು ಸಂಭವಿಸಲಿಲ್ಲ, ಫಿನ್ನೈರ್ ವಿಶ್ವದ (#3 ರ 2014 ) ಸುರಕ್ಷಿತ ವಿಮಾನಯಾನ ಪಟ್ಟಿಯಲ್ಲಿ ಸುಸಂಗತವಾಗಿದೆ.