ಬೊನೊ
From Wikipedia, the free encyclopedia
ಪೌಲ್ ಡೇವಿಡ್ ಹೆವ್ಸನ್(ಜನನ ಮೇ 10,1960) ಸಾಮಾನ್ಯವಾಗಿ ಆತನನ್ನು ರಂಗಮಂಚದ ಮೇಲೆ ಪ್ರಸಿದ್ದಿ ಪಡೆದ ಬೊನೊ ಎಂಬ ಹೆಸರಿಂದ ಕರೆಯಲಾಗುತ್ತದೆ.ಈತ ಐರಿಶ್ ಗಾಯಕ ಮತ್ತು ಸಂಗೀತಗಾರ,ಅತ್ಯಧಿಕ ಖ್ಯಾತಿ ಪಡೆದಿದ್ದು ಈತ ಡಬ್ಲಿನ್ ಮೂಲದ ರಾಕ್ ಬ್ಯಾಂಡ್ U2 ನಲ್ಲಿ ಪ್ರಧಾನ ಹಾಡುಗಾರನಾಗಿದ್ದಾನೆ. ಬೊನೊ ಡಬ್ಲಿನ್ ,ಐರ್ಲೆಂಡ್ ನಲ್ಲಿ ಬೆಳೆದನಲ್ಲದೇ ಮೌಂಟ್ ಟೆಂಪಲ್ ಕಾಂಪ್ರೆಹೆನ್ಸಿವ್ ಸ್ಕೂಲ್ ನಲ್ಲಿ ಕಲಿತ.ಅದೇ ಸಂದರ್ಭದಲ್ಲಿ ಆತ ತನ್ನ ಭವಿಷ್ಯದ ಪತ್ನಿ ಅಲಿ ಹೆವ್ಸನ್ ಮತ್ತು ವೃತ್ತಿ ಭವಿಷ್ಯದ [1][2][3] U2 ದ ಸದಸ್ಯರನ್ನೂ ಭೇಟಿಯಾದ. ಬೊನೊ ಹೆಚ್ಚಾಗಿ U2 ದ ಎಲ್ಲಾ ಹಾಡುಗಳಿಗೆ ಗೀತ ರಚನೆ ಕೆಲಸ ಮಾಡಿದ್ದಾನೆ.ಅದರಲ್ಲಿ ಆತ ರಾಜಕೀಯ,ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಆತ [4][5] ಬಳಸಿಕೊಂಡಿದ್ದಾನೆ. ಅವರ ಆರಂಭಿಕ ವರ್ಷಗಳಲ್ಲಿ ಬೊನೊ ನ ಗೀತ ರಚನೆಗಳು U2 ನಲ್ಲಿ ಬಂಡಾಯ ಮತ್ತು ಧಾರ್ಮಿಕತೆ,ದೈವಿಕ ಅಂಶದ ಧ್ವನಿಯನ್ನು [4] ತುಂಬುತ್ತಿದ್ದವು. ಬ್ಯಾಂಡ್ ಪ್ರಬುದ್ದತೆ ಪಡೆದಂತೆ ಆತನ ಸಾಹಿತ್ಯವು ಹೆಚ್ಚು ಹೆಚ್ಚು ವೈಯಕ್ತಿಕ ಅನುಭವಗಳು ಮತ್ತು U2 ಸದಸ್ಯರೊಂದಿಗಿನ ಸಂಭಾಷಣೆಗಳು ಪ್ರಮುಖ [2][4] ವಿಷಯವಾಗುತ್ತಿದ್ದವು.
Bono | |
---|---|
ಹಿನ್ನೆಲೆ ಮಾಹಿತಿ | |
ಜನ್ಮನಾಮ | Paul David Hewson |
ಅಡ್ಡಹೆಸರು | Bono |
ಮೂಲಸ್ಥಳ | Glasnevin, County Dublin, Ireland |
ಸಂಗೀತ ಶೈಲಿ | Rock, post-punk, alternative rock |
ವೃತ್ತಿ | Musician, singer-songwriter, activist, philanthropist |
ವಾದ್ಯಗಳು | Vocals, guitar, harmonica |
ಸಕ್ರಿಯ ವರ್ಷಗಳು | 1975–present |
Associated acts | U2 |
ಅಧೀಕೃತ ಜಾಲತಾಣ | www.u2.com |
Notable instruments | |
Gretsch Irish Falcon |
ಬ್ಯಾಂಡ್ ನ ಹೊರಗೆ ಆತ ಇತರರೊಡನೆ ಸೇರಿದನಲ್ಲದೇ ಹಲವಾರು [6][7][8] ಕಲಾವಿದರೊಂದಿಗೆ ಹಾಡುಗಳ ಧ್ವನಿಮುದ್ರಣ ಮಾಡಿದ್ದಾನೆ.ತನ್ನ ಹೆಚ್ಚು ಪ್ರಬುದ್ದ ಸಹಕಲಾವಿದ ಪಾಲುದಾರರೊಂದಿಗೆ ಆತ ತನ್ನ ಸಾಹಿತ್ಯವನ್ನು ಹಂಚಿಕೊಳ್ಳುತ್ತಾನೆ.ಆತ ಹೊಸದಾದ ಸಾಹಸಕ್ಕೂ ಕೈಹಾಕುತ್ತಾನೆ,[9][10] ದಿ ಎಜ್ ನೊಂದಿಗೆ ಡಬ್ಲಿನ್ ನಲ್ಲಿ ದಿ ಕ್ಲಾರೆನ್ಸ್ ಹೊಟೆಲ್ ನ ಒಡೆತನ ಪಡೆಯುತ್ತಾನೆ. ಬೊನೊ ರಾಜಕೀಯ ಸಿದ್ದಾಂತಗಳ ಪ್ರತಿಪಾದಕ ಕಾರ್ಯಕರ್ತನಾಗಿ ಅದೂ ಮುಖ್ಯವಾಗಿ ಆಫ್ರಿಕಾದ ಸಮಸ್ಯೆಗಳಿಗಾಗಿರುವ ಕಾರ್ಯಕ್ಕಾಗಿ ವ್ಯಾಪಕವಾಗಿ ಗುರುತಿಸಿಕೊಂಡಿದ್ದಾನೆ.ಅದಕ್ಕಾಗಿ ಆತ ಸಹ-ಸಂಸ್ಥಾಪಕನಾಗಿ ಡಾಟಾ,ಎಡುನ್ ,ದಿ ವನ್ ಪ್ರಚಾರಾಂದೋಲನ ಮತ್ತು ಪ್ರಾಡಕ್ಟ್ ರೆಡ್ ಚಟುವಟಿಕೆಗಳಿಗೆ ತನ್ನನ್ನು [2][11] ತೊಡಗಿಸಿಕೊಂಡಿದ್ದಾನೆ. ಆತ ಹಲವಾರು ಸಹಾಯಾರ್ಥ ಸಂಗೀತ ಗೋಷ್ಟಿಗಳ ಸಂಘಟಿಸಿದ್ದಾನಲ್ಲದೇ ಅದರಲ್ಲಿ ಪಾಲುಗೊಂಡಿದ್ದಾನೆ.ಇದೇ ಸಂದರ್ಭದಲ್ಲಿ ಆತ ಪ್ರಭಾವಿ ರಾಜಕೀಯ ವ್ಯಕ್ತಿಗಳೊಂದಿಗೆ ಭೇಟಿ-ಸಂಪರ್ಕ [11][12][13] ಬೆಸೆದಿದ್ದಾನೆ. ಬೊನೊ ತಾನು U2 ಜೊತೆಗಿರುವುದಕ್ಕಾಗಿ ಶ್ಲಾಘಿಸಲ್ಪಟ್ಟರೆ ಇನ್ನೊಂದೆಡೆ ಟೀಕೆಗಳಿಗೂ ಒಳಗಾಗಲು ಆತನ ಬಂಡಾಯ ಮನೋವೃತ್ತಿ [14][15][16] ಕಾರಣವೆನ್ನಬಹುದು. ಆತನನ್ನು ನೋಬಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿತ್ತು,ಅಲ್ಲದೇ ಯುನೈಟೆಡ್ ಕಿಂಗ್ಡಮ್ ನ ಕ್ವೀನ್ ಎಲೆಜಾಬೆತ್ II ಆತನಿಗೆ ನೀಡಿದ ನೈಟ್ ಹುಡ್ ಗೌರವ ಪ್ರಶಸ್ತಿಗೆ ಪಾತ್ರನಾಗಿದ್ದಾನೆ.ಅದಲ್ಲದೇ ಟೈಮ್ ಪತ್ರಿಕೆಯಿಂದ ಪರ್ಸನ್ ಆಫ್ ದಿ ಇಯರ್ ಎಂಬ ಪ್ರಶಂಸಾ ಕೀರ್ತಿಗೂ ಪಾತ್ರನಾದ ಕೆಲವರಲ್ಲಿ [14][17][18] ಈತನೊಬ್ಬನಾಗಿದ್ದಾನೆ.