ಬ್ರೂಸ್ ಸ್ಪ್ರಿಂಗ್ಸ್ಟೀನ್
From Wikipedia, the free encyclopedia
ಬ್ರೂಸ್ ಫ್ರೆಡೆರಿಕ್ ಜೋಸೆಫ್ ಸ್ಪ್ರಿಂಗ್ಸ್ಟೀನ್ (ಆಂಗ್ಲ:Bruce Frederick Joseph Springsteen; ಜನನ: 1949ರ ಸೆಪ್ಟೆಂಬರ್ 23), "ದಿ ಬಾಸ್ " ಎಂಬ ಅಡ್ಡಹೆಸರು ಅಥವಾ ಉಪನಾಮವನ್ನು ಹೊಂದಿರುವ ಅಮೆರಿಕಾದ ಓರ್ವ ಗಾಯಕ-ಗೀತ ರಚನೆಕಾರನಾಗಿದ್ದಾನೆ. E ಸ್ಟ್ರೀಟ್ ಬ್ಯಾಂಡ್ ಎಂಬ ವಾದ್ಯವೃಂದದೊಂದಿಗೆ ಆತ ಗೀತೆಗಳನ್ನು ಧ್ವನಿಮುದ್ರಿಸುತ್ತಾನೆ ಹಾಗೂ ಸಂಗೀತ ಪ್ರವಾಸಗಳನ್ನು ಕೈಗೊಳ್ಳುತ್ತಾನೆ.
Bruce Springsteen | |
---|---|
ಹಿನ್ನೆಲೆ ಮಾಹಿತಿ | |
ಜನ್ಮನಾಮ | Bruce Frederick Joseph Springsteen |
ಅಡ್ಡಹೆಸರು | The Boss |
ಸಂಗೀತ ಶೈಲಿ | Heartland rock, folk rock, Americana |
ವೃತ್ತಿ | Singer-songwriter |
ವಾದ್ಯಗಳು | Vocals, guitar, harmonica, piano |
ಸಕ್ರಿಯ ವರ್ಷಗಳು | 1972–present |
Labels | Columbia |
Associated acts | E Street Band, Steel Mill, Miami Horns, The Sessions Band |
ಅಧೀಕೃತ ಜಾಲತಾಣ | brucespringsteen.net |
Notable instruments | |
Fender Telecaster Fender Esquire[1] Takamine Guitars Hohner Marine Band Harmonica |
ಪಾಪ್ ಸಂಗೀತದ ಕೊಂಡಿಗಳು, ಕಾವ್ಯಾತ್ಮಕ ಸಾಹಿತ್ಯ, ಮತ್ತು ತನ್ನ ಜನ್ಮಸ್ಥಳವಾದ ನ್ಯೂಜರ್ಸಿಯ ಮೇಲೆ ಕೇಂದ್ರೀಕೃತವಾದ ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಸಂಬಂಧಿಸಿದ ಭಾವುಕತೆಗಳಿಂದ ತುಂಬಿಕೊಂಡಿರುವ ತನ್ನ ಹಾರ್ಟ್ಲ್ಯಾಂಡ್ ರಾಕ್ ಬ್ರಾಂಡ್ಗೆ ಸಂಬಂಧಿಸಿದಂತೆ ಸ್ಪ್ರಿಂಗ್ಸ್ಟೀನ್ ವ್ಯಾಪಕವಾಗಿ ಪರಿಚಿತನಾಗಿದ್ದಾನೆ.[2]
ವಾಣಿಜ್ಯದ ಸ್ವರೂಪದಲ್ಲಿ ಸುಲಭಲಭ್ಯವಾಗಿರುವ ರಾಕ್ ಗೀತಸಂಪುಟಗಳು ಮತ್ತು ಉತ್ಸಾಹಶೂನ್ಯ ಜಾನಪದ-ಉದ್ದೇಶಿತ ಕೃತಿಗಳ ನಡುವಿನ ಪರ್ಯಾಯ ಆಯ್ಕೆಯಾಗುವ ಕಡೆಗೆ ಸ್ಪ್ರಿಂಗ್ಸ್ಟೀನ್ನ ಧ್ವನಿಮುದ್ರಣಗಳು ಒಲವು ತೋರಿಸಿವೆ. ಸಂಗೀತ ಕಚೇರಿಗಳು ಮತ್ತು ಸುದೀರ್ಘ ಪ್ರದರ್ಶನಗಳಿಂದ ಅವನಿಗೆ ಬಹುಪಾಲು ಸ್ಥಾನಮಾನವು ದೊರಕಿದೆ; ಇದರಲ್ಲಿ ಆತನಿಂದ ಮತ್ತು E ಸ್ಟ್ರೀಟ್ ಬ್ಯಾಂಡ್ನಿಂದ ಉತ್ಕಟವಾದ ಲಾವಣಿಗಳು, ಪ್ರಚೋದಿಸುವ ಹರ್ಷಗೀತೆಗಳು, ಮತ್ತು ಸಂತೋಷಕೂಟದ ರಾಕ್ ಅಂಡ್ ರೋಲ್ ಹಾಡುಗಳು ಪ್ರಸ್ತುತಪಡಿಸಲ್ಪಡುತ್ತವೆ. ಈ ಗೀತೆಗಳ ಮೂಲಕ ಅವನು ವಿಲಕ್ಷಣವಾಗಿ ಕಾಣುವ ಅಥವಾ ಗಾಢವಾಗಿ ಭಾವಾತ್ಮಕವಾಗಿರುವ ಕಥೆಗಳನ್ನು ವೈವಿಧ್ಯಗೊಳಿಸುತ್ತಾನೆ. 3 ಗಂಟೆಗಳವರೆಗೆ ಸಾಗುವ, ಆವೇಗ ಉಂಟುಮಾಡುವ ಪ್ರತ್ಯಕ್ಷ ಸಂಗೀತ ಪ್ರಸ್ತುತಿಗಳನ್ನು ಉಣಬಡಿಸುವುದಕ್ಕೆ ಅವನು ಹೆಸರುವಾಸಿಯಾಗಿದ್ದಾನೆ. ಆರಂಭಿಕ ದಿನಗಳಲ್ಲಿ ಇದು ಕೆಲವೊಮ್ಮೆ 4 ಅಥವಾ 5 ಗಂಟೆಗಳವರೆಗೂ ಸಾಗುತ್ತಿತ್ತು. ಒಟ್ಟು ಗಳಿಕೆಗಳ ವಿಚಾರದಲ್ಲಿ ಹೇಳುವುದಾದರೆ, ಸ್ಪ್ರಿಂಗ್ಸ್ಟೀನ್ ಏನಿಲ್ಲವೆಂದರೂ ಸುಮಾರು 1.6 ಶತಕೋಟಿ $ನಷ್ಟು ಹಣಗಳಿಸಿದ್ದಾನೆ; ಇದರಿಂದಾಗಿ ಅವನು ಸಂಗೀತ ಪ್ರಪಂಚದ ಈ ಪ್ರಕಾರದಲ್ಲಿ ಅತ್ಯಂತ ಹೆಚ್ಚಿನ ಗಳಿಕೆಯನ್ನು ಮಾಡಿರುವ ಸಂಗೀತಕುಶಲ ಪ್ರದರ್ಶನಕಾರ ಎಂಬ ಕೀರ್ತಿಗೆ ಪಾತ್ರನಾಗಿದ್ದು, ಈ ವಲಯದಲ್ಲಿನ ಮೊದಲೆರಡು ಸ್ಥಾನಗಳು U2 ಮತ್ತು ದಿ ರೋಲಿಂಗ್ ಸ್ಟೋನ್ಸ್ಗೆ ದಕ್ಕಿವೆ. ಸಂಗೀತ ಪ್ರಪಂಚದಲ್ಲಿನ 80ರ ದಶಕದ ತಾರೆಗಳ ಪೈಕಿ, ಅಧಿಕವಾಗಿ ಮಾರಾಟವಾಗುವ ಸಂಗೀತಗಾರರ ಕೃತಿಗಳಲ್ಲಿ ಅವನ ಕೃತಿಗಳು ಈಗಲೂ ಒಂದೆನಿಸಿಕೊಂಡಿವೆ. ಅವನ ಅತ್ಯಂತ ಯಶಸ್ವೀ ಸ್ಟುಡಿಯೋ ಗೀತಸಂಪುಟಗಳಾದ, ಬಾರ್ನ್ ಟು ರನ್ ಮತ್ತು ಬಾರ್ನ್ ಇನ್ ದಿ U.S.A. ಇವು, ಅಮೆರಿಕಾದಲ್ಲಿನ ದೈನಂದಿನ ಜೀವನದ ಹೋರಾಟಗಳಲ್ಲಿನ ಔನ್ನತ್ಯವನ್ನು ಕಂಡುಕೊಳ್ಳುವುದಕ್ಕೆ ಸಂಬಂಧಿಸಿದ ಅವನ ಅಭಿರುಚಿಯನ್ನು ಪಡಿಮೂಡಿಸುತ್ತವೆ. ಬಾರ್ನ್ ಇನ್ ದಿ U.S.A. ಗೀತಸಂಪುಟವು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ವ್ಯಾಪ್ತಿಯೊಳಗೆ ಅತೀವವಾಗಿ ಗುರುತಿಸಲ್ಪಟ್ಟ 1980ರ ದಶಕದ ಕಲಾವಿದರ ಪೈಕಿ ಒಬ್ಬನೆಂಬ ಕೀರ್ತಿಯನ್ನು ಅವನಿಗೆ ತಂದಿತ್ತಿತು. ಓರ್ವ ಡೆಮೋಕ್ರಾಟ್ (ಪ್ರಜಾಪ್ರಭುತ್ವವಾದಿ) ಆಗಿದ್ದುಕೊಂಡು, ಸೆನೆಟ್ ಸದಸ್ಯ ಜಾನ್ ಕೆರ್ರಿ ಮತ್ತು ಅಧ್ಯಕ್ಷ ಬರಾಕ್ ಒಬಾಮಾರವರ ಅಧ್ಯಕ್ಷೀಯ ಪ್ರಚಾರಾಂದೋಲನಗಳಿಗೆ ಸಂಬಂಧಿಸಿದಂತೆ ಅವನು ನೀಡಿದ ಬೆಂಬಲದಿಂದಾಗಿ, ಅಮೆರಿಕಾದ ಆಧುನಿಕ ಉದಾರವಾದದೊಂದಿಗೆ ಸ್ಪ್ರಿಂಗ್ಸ್ಟೀನ್ ಮತ್ತು ಅವನ ಸಂಗೀತವು ಗುರುತಿಸಲ್ಪಡುವಂತಾಯಿತು.[3] ನ್ಯೂಜರ್ಸಿಯಲ್ಲಿ ಮತ್ತು ಇನ್ನೂ ಅನೇಕ ಸ್ಥಳಗಳಲ್ಲಿನ ಬಗೆಬಗೆಯ ಪರಿಹಾರ ಕಾರ್ಯಗಳು ಮತ್ತು ಮರುನಿರ್ಮಾಣ ಪ್ರಯತ್ನಗಳಿಗೆ ಸಂಬಂಧಿಸಿದಂತೆ ಅವನು ನೀಡುತ್ತಿರುವ ಬೆಂಬಲಗಳಿಂದಾಗಿಯೂ ಅವನು ಗುರುತಿಸಲ್ಪಟ್ಟಿದ್ದಾನೆ. ಅಷ್ಟೇ ಅಲ್ಲ, 2001ರಲ್ಲಿ ಸಂಭವಿಸಿದ ಸೆಪ್ಟೆಂಬರ್ 11ರ ದಾಳಿಗಳಿಗೆ ತನ್ನ ಪ್ರತಿಕ್ರಿಯೆಯಾಗಿ, ಅದನ್ನು ಪ್ರತಿಬಿಂಬಿಸಲು ಆತ ಹೊರತಂದ ದಿ ರೈಸಿಂಗ್ ಎಂಬ ಗೀತಸಂಪುಟದಿಂದಲೂ ಅವನು ಗುರುತಿಸಲ್ಪಟ್ಟಿದ್ದಾನೆ.[4]
ತನ್ನ ಕೃತಿಗಳಿಗೆ ಸಂಬಂಧಿಸಿದಂತೆ ಆತ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದು, ಇಪ್ಪತ್ತು ಗ್ರಾಮಿ ಪ್ರಶಸ್ತಿಗಳು, ಎರಡು ಗೋಲ್ಡನ್ ಗ್ಲೋಬ್ಗಳು ಮತ್ತು ಒಂದು ಅಕಾಡೆಮಿ ಪ್ರಶಸ್ತಿ ಅವುಗಳಲ್ಲಿ ಸೇರಿವೆ; ಇದು ಇಷ್ಟಕ್ಕೇ ನಿಲ್ಲದೇ, ಜಾಗತಿಕ ಮಟ್ಟದಲ್ಲಿ ಒಂದು ಬಲವಾದ ಅಭಿಮಾನಿ ನೆಲೆಯನ್ನು ಹೊಂದುವಲ್ಲಿನ ತನ್ನ ಪಯಣವನ್ನು ಅವನು ಮುಂದುವರಿಸಿದ್ದಾನೆ. ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಆತ 65 ದಶಲಕ್ಷಕ್ಕೂ ಹೆಚ್ಚಿನ ಗೀತಸಂಪುಟಗಳನ್ನು ಮಾರಾಟ ಮಾಡಿದ್ದರೆ, ವಿಶ್ವಾದ್ಯಂತ ಈ ಪ್ರಮಾಣವು 120 ದಶಲಕ್ಷವನ್ನು ಮುಟ್ಟಿದೆ.[5] 2009ರಲ್ಲಿ ಆತ ಕೆನಡಿ ಸೆಂಟರ್ ಪುರಸ್ಕಾರಗಳಿಂದ ಪುರಸ್ಕೃತನಾದ ಮತ್ತು ಅದೇ ವರ್ಷದಲ್ಲಿ ಫೋರ್ಬ್ಸ್ ಪತ್ರಿಕೆಯು ತನ್ನ 'ದಿ ಸೆಲೆಬ್ರಿಟಿ 100' ಎಂಬ ಪಟ್ಟಿಯಲ್ಲಿ ಅವನಿಗೆ 6ನೇ ಸ್ಥಾನವನ್ನು ನೀಡಿತು.[6]